‘ಗ್ರಾಮ ಪಂಚಾಯಿತಿ PDO ಗಳು ಅಂದರೆ ರಾಕ್ಷಸರಿದ್ದಂತೆ’

‘ಗ್ರಾಮ ಪಂಚಾಯಿತಿ PDO ಗಳು ಅಂದರೆ ರಾಕ್ಷಸರಿದ್ದಂತೆ’

ಹಾಸನ:ಗ್ರಾಮ ಪಂಚಾಯಿತಿಗಳ PDO ಗಳು ಅಂದ್ರೆ ರಾಕ್ಷಸರಿದ್ದಂತೆ ಎಂದು ಸಚಿವ ಸೋಮಣ್ಣ ಗ್ರಾಮ ಪಂಚಾಯಿತಿ PDO ಗಳ ಮೇಲೆ ಕಿಡಿ ಕಾರಿರುವ ಪ್ರಸಂಗ ಹಾಸನದ ಜಿ.ಪಂ‌ ಸಭಾಂಗಣದಲ್ಲಿ ನಡೆದಿದೆ.

ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಹಾಸನದ ಜಿ.ಪಂ‌ ಸಭಾಂಗಣದಲ್ಲಿ ಅದಿಕಾರಿಗಳೊಂದಿಗೆ ನಡೆಯುತ್ತಿರುವ ಸಭೆಯಲ್ಲಿ ಈ ಹೇಳಿಕೆ ನೀಡಿದ್ದು, ನಾನು ಹೀಗೆ ಹೇಳುತ್ತೇನೆಂದು ಯಾರೂ ಬೇಜಾರಾಗಬೇಡಿ, ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಾಕ್ಷಸರು ಇದ್ದಂತೆ’ ಎಂದಿದ್ದಾರೆ.

ಜೊತೆಗೆ ತಾಲೂಕು ಪಂಚಾಯಿತಿ EO ಗಳು ಸರಿಯಾಗಿ ಕೆಲಸ ಮಾಡಿ. ಆತ್ಮವಂಚನೆ ಮಾಡಿಕೊಳ್ಳುವ ಹಲ್ಕಾ ಕೆಲಸ ಮಾಡಬೇಡಿ. ಯಾರಿಗೆ ಅನಿವಾರ್ಯವಿದೆಯೋ ಅವರಿಗೆ ನಿವೇಶನ ಸಿಗಲಿ, ನೀವು ಕೊಡುವ ಪಟ್ಟಿ ಶಾಸನವಲ್ಲ, ನಿಮ್ಮ ಮೇಲೆ ಶಾಸಕರು, ಸಚಿವರು, ಮುಖ್ಯಮಂತ್ರಿ, ಪ್ರಧಾನಮಂತ್ರಿಗಳು ಇರುತ್ತಾರೆ. ಹಾಗಾಗಿ ಆದ್ಯತೆ ವಹಿಸಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಾರ್ಯ ನಿಮಿತ್ತ ಹಾಸನಕ್ಕೆ ಬಂದಿದ್ದ ಸಚಿವ ಸೋಮಣ್ಣ ತಮ್ಮ ಪಕ್ಷದ ಕಚೇರಿಗೆ ಭೇಟಿ ನೀಡಿ, ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. 

Click on your DTH Provider to Add TV9 Kannada