AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್-19 ಮಹಾಮಾರಿ ವಯಸ್ಕರಲ್ಲಿ ಖಿನ್ನತೆ, ಹತಾಶೆ, ಒಂಟಿತನದಂಥ ಮಾನಸಿಕ ಅಸ್ವಸ್ಥತೆಗಳನ್ನು ಸೃಷ್ಟಿಸುತ್ತಿದೆ

ದೈಹಿಕ ಅಂತರ, ಸಾಮಾಜಿಕ ಅಂತರ ಮತ್ತು ಸೋಂಕು ಹರಡದಂತೆ ಸರ್ಕಾರಗಳು ಹೇರುತ್ತಿರುವ ನಿರ್ಬಂಧಗಳು, ಲಾಕ್​ಡೌನ್; ದೈಹಿಕ ಮತ್ತು ಮಾನಸಿಕವಾಗಿ ದುರ್ಬಲರಾಗಿರುವ ಹಿರಿವಯಸ್ಕರ ಮೇಲೆ ಗಾಢವಾದ ಪರಿಣಾಮ ಬೀರುತ್ತಿವೆ.

ಕೊವಿಡ್-19 ಮಹಾಮಾರಿ ವಯಸ್ಕರಲ್ಲಿ ಖಿನ್ನತೆ, ಹತಾಶೆ, ಒಂಟಿತನದಂಥ ಮಾನಸಿಕ ಅಸ್ವಸ್ಥತೆಗಳನ್ನು ಸೃಷ್ಟಿಸುತ್ತಿದೆ
ಕೊವಿಡ್​ ಎರಡನೇ ಅಲೆ ಹಿರಿಯರಲ್ಲಿ ಭಾರೀ ಆತಂಕ ಮೂಡಿಸಿದೆ
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:May 18, 2021 | 8:33 AM

Share

ನವದೆಹಲಿ: ಕೊವಿಡ್​ ಮಹಾಮಾರಿಯ ಭೀತಿ ಎಲ್ಲರನ್ನೂ ಕಾಡುತ್ತಿದೆ ಎನ್ನುವುದು ನಿಸ್ಸಂದೇಹ. ಆದರೆ, ವಯಸ್ಕರಲ್ಲಿ ಅದು ಹಲವಾರು ಮಾನಸಿಕ ವ್ಯಾಧಿಗಳಿಗೆ ಮೂಲವಾಗುತ್ತಿದೆ. ದೆಹಲಿಯ ಸ್ವಯಂ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯ ಪ್ರಕಾರ, ಅದರಲ್ಲಿ ಪಾಲ್ಗೊಂಡ ವಯಸ್ಕರಲ್ಲಿ ಶೇಕಡಾ 82ರಷ್ಟು ಜನ ಕಳೆದ ಒಂದು ತಿಂಗಳಲ್ಲಿ ದಿನಂಪ್ರತಿ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳು, ಸಾವು-ನೋವುಗಳ ಬಗ್ಗೆ ಅತಂಕಗೊಂಡಿರುವುದಾಗಿ ಹೇಳಿದ್ದಾರೆ. ದೆಹಲಿಯ ಏಜ್​ವೆಲ್ ಫೌಂಡೇಶನ್ ಹೆಸರಿನ ಸಂಸ್ಥೆಯು ತನ್ನ ಸಹಾಯವಾಣಿಯ ಮೂಲಕ ಸುಮಾರು 5,000 ವಯಸ್ಕರನ್ನು ನಗರದಲ್ಲಿ ಸಂಪರ್ಕಿಸಿತ್ತು. ಅವರಲ್ಲಿ ಅನೇಕರು, ಆತಂಕ, ನಿದ್ರಾಹೀನತೆ, ಹತಾಶೆ, ಉದ್ವಿಗ್ನತೆ, ಒತ್ತಡ, ದುಸ್ವಪ್ನ, ಖಾಲಿತನ, ಒಂಟಿತನ, ಹಸಿವಾಗದಿರುವಿಕೆ, ಭಯ ಮೊದಲಾದವುಗಳಿಂದ ಬಳಲುತ್ತಿದ್ದರು.

ಸದರಿ ಸಮೀಕ್ಷೆಯ ಪ್ರಕಾರ, ಶೇಕಡಾ 70 ರಷ್ಟು ವಯಸ್ಕರು ನಿದ್ರಾಹೀನತೆ, ದುಸ್ವಪ್ನ ಮತ್ತು ಅರೆ-ಬರೆ ನಿದ್ರೆ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಳೆದೊಂದು ತಿಂಗಳ ಅವಧಿಯಲ್ಲಿ, ಶೇಕಡಾ 63ರಷ್ಟು ಹಿರಿಯರು ಒಂಟಿತನ ಮತ್ತು ಸಾಮಾಜಿಕ ಬೇರ್ಪಡುವಿಕೆಯಿಂದಾಗಿ ಖಿನ್ನತೆಯ ಲಕ್ಷಣಗಳನ್ನು ತೋರಿದ್ದಾರೆ. ಹಾಗೆಯೇ, ಶೇಕಡಾ 63.3 ಹಿರಿಯ ಜೀವಿಗಳು ಮಹಾಮಾರಿಯಿಂದ ಉಂಟಾಗಿರುವ ಒತ್ತಡದ ಬಗ್ಗೆ ದೂರಿದ್ದಾರೆ. ಸುಮಾರು 50 ರಷ್ಟು ವಯಸ್ಕರು, ಬದಲಾಗಿರುವ ಜೀವನ ಶೈಲಿಯಿಂದಾಗಿ ಬಳಲಿಕೆ, ನಿಶ್ಶಕ್ತಿ ಬಗ್ಗೆ ಹೇಳಿಕೊಂಂಡಿದ್ದಾರೆ. ಅಷ್ಟೇ ಪ್ರಮಾಣದ ಹಿರಿಯ ನಾಗರಿಕರು ಹಸಿವಾಗದಿರುವ ಕುರಿತು ನೋವು ತೋಡಿಕೊಂಡಿದ್ದಾರೆ.

ಈ ಸಂಸ್ಥೆಯ ಅಧಿಕಾರಿಯೊಬ್ಬರ ಪ್ರಕಾರ, ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖಗೊಳ್ಳದಿರುವುದು ಮತ್ತು ಅದರಿಂದ ಇಡೀ ದೇಶದಲ್ಲೇ ಆರೋಗ್ಯ ವ್ಯವಸ್ಥೆ ಮೇಲೆ ಬಿದ್ದಿರುವ ಒತ್ತಡದ ಹಿನ್ನೆಲೆಯಲ್ಲಿ, ಒಂದು ಪಕ್ಷ ತಮಗೇನಾದರೂ ಸೋಂಕು ತಾಕಿದರೆ, ಆಸ್ಪತ್ರೆಗಳಲ್ಲಿ ಬೆಡ್​ ಸಿಗಲಿಕ್ಕಿಲ್ಲ, ಆಕ್ಸಿಜನ್ ಸಮಸ್ಯೆಯಾಗಬಹುದು ಎಂದು ಚಿಂತಾಕ್ರಾಂತರಾಗಿದ್ದಾರಂತೆ. ತಮ್ಮ ಕುಟುಂಬದ ಸದಸ್ಯರ ಬಗ್ಗೆಯೂ ಅವರ ಇದನ್ನೇ ಯೋಚಿಸುತ್ತಿದ್ದಾರೆ.

ದೈಹಿಕ ಅಂತರ, ಸಾಮಾಜಿಕ ಅಂತರ ಮತ್ತು ಸೋಂಕು ಹರಡದಂತೆ ಸರ್ಕಾರಗಳು ಹೇರುತ್ತಿರುವ ನಿರ್ಬಂಧಗಳು, ಲಾಕ್​ಡೌನ್; ದೈಹಿಕ ಮತ್ತು ಮಾನಸಿಕವಾಗಿ ದುರ್ಬಲರಾಗಿರುವ ಹಿರಿವಯಸ್ಕರ ಮೇಲೆ ಗಾಢವಾದ ಪರಿಣಾಮ ಬೀರುತ್ತಿವೆ. ಹಾಗಾಗೇ, ಅವರಲ್ಲಿ ಒಂಟಿತನ, ಖಿನ್ನತೆ ಮನೆಮಾಡಿಕೊಂಡಿದೆ. ಒಂಟಿಯಾಗಿ ಬದುಕುತ್ತಿರುವವರು ಅಥವಾ ಅಂಥ ಅನಿವಾರ್ಯತೆಗೆ ಸಿಕ್ಕವರಿಗೆ ಕಾಳಜಿ ಮತ್ತು ಬೆಂಬಲದ ಅವಶ್ಯಕತೆಯಿದೆ.

ಸಂಸ್ಥೆಯ ಸಂಸ್ಥಾಪಕರಾಗಿರುವ ಹಿಮಾಂಶು ರಥ್ ಅವರ ಪ್ರಕಾರ, ಕೊವಿಡ್ ಪಿಡುಗಿನ ಎರಡನೇ ಅಲೆಯಲ್ಲಿ, ಕೌನ್ಸೆಲಿಂಗ್ ಬಯಸುತ್ತಿರುವ ವಯಸ್ಕರ ಸಂಖ್ಯೆ ಶೇಕಡಾ 50 ರಷ್ಟು ಜಾಸ್ತಿಯಾಗಿದೆಯಂತೆ. ಅವರೆಲ್ಲ ಮಾನಸಿಕ ವ್ಯಾಧಿಗಳಾಗಿರುವ ಖಿನ್ನತೆ, ಹತಾಶೆ, ಆತಂಕ, ನಿದ್ರಾಹೀನತೆ, ಭಯ, ಒತ್ತಡ, ಒಂಟಿತನದ ಭೀತಿ ಮೊದಲಾದ ಸಮಸ್ಯೆಗಳಿಗೆ ಪರಿಹಾರವನ್ನು ಕೇಳುತ್ತಿದ್ದಾರಂತೆ.

ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು, ತಮಗಿರುವ ಸೌಲಭ್ಯಗಳ ಹೊರತಾಗಿಯೂ ಪ್ರಸಕ್ತ ಸ್ಥಿತಿಯಲ್ಲಿ ಅಸಾಹಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹಿಮಾಂಶು ಹೇಳುತ್ತಾರೆ. ‘ಕೊವಿಡ್-19 ಸೋಂಕು ಅವರ ಮನಶ್ಶಾಂತಿಯನ್ನೇ ಕದಡಿಬಿಟ್ಟಿದೆ. ಕೌನ್ಸೆಲಿಂಗ್​ಗೆ ಬಂದಾಗ ಅವರು ಶೀಘ್ರವಾದ ಪರಿಹಾರಗಳನ್ನು ಸೂಚಿಸಿ ಅಂತ ಕೇಳುತ್ತಾರೆ. ಅವರಿಗೆ ಸೂಕ್ತವಾದ ಮಾಹಿತಿ ಒದಗಿಸಿ, ಅರೋಗ್ಯದ ಬಗ್ಗೆ ಟಿಪ್ಸ್ ನೀಡಿ ಮಾನಸಿಕ ಸ್ಥೈರ್ಯ ತುಂಬುವ ಅವಶ್ಯಕತೆಯಿದೆ,’ ಅಂತ ಅವರು ಹೇಳುತ್ತಾರೆ.

ಹಲವಾರು ಕುಟುಂಬಗಳಲ್ಲಿ ಹಿರಿಯರು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಕುಟುಂಬದ ಸದಸ್ಯರು ಅವರನ್ನು ಮೂಲೆಗೆ ಸೇರಿಸಿ, ಮಕ್ಕಳು-ಮೊಮ್ಮಕ್ಕಳೊಂದಿಗೆ ಬೆರೆಯದಂಥ ಸ್ಥಿತಿಯನ್ನು ನಿರ್ಮಿಸಿದ್ದಾರೆ. ಪರಿಚಿತರ ಮನೆಗಳಿಗೆ ಅವರು ಹೋಗುವಂತಿಲ್ಲ ಮತ್ತು ಮನೆಗೆ ಅತಿಥಿಗಳು ಬಂದಾಗಳಲೂ ಅವರೊಡನೆ ಬೆರೆಯುವಂತಿಲ್ಲ ಎಂಬ ಸನ್ನಿವೇಶಗಳು ಅನೇಕ ಕುಟುಂಬಗಳಲ್ಲಿ ಸೃಷ್ಟಿಯಾಗಿವೆ. ಅವರ ದೈನಂದಿನ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ ಎಂದು ಹಿಮಾಂಶು ಹೇಳುತ್ತಾರೆ.

ಹಿರಿಯರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಬಗ್ಗೆಯೂ ಆತಂಕಗೊಂಡಿದ್ದಾರೆ. ಅವರೆಲ್ಲ ಯಾವುದೇ ಚಟುವಟಿಕೆಯಿಲ್ಲದೆ ಮನೆಯಲ್ಲಿ ಸೋಮಾರಿಗಳಾಗಿ ಬಿದ್ದಿರುವುದನ್ನು ಅವರಿಂದ ನೋಡಲಾಗುತ್ತಿಲ್ಲ. ಲಾಕ್​ಡೌನ್​ನಿಂದಾಗಿ ಮನೆಗೆಲಸದವರು ಬರದಿರುವುದು ಸಹ ಅವರಿಗೆ ತೊಂದರಯನ್ನುಂಟು ಮಾಡುತ್ತಿದೆ. ವೈದ್ಯಕೀಯ ಸೌಲಭ್ಯಗಳಿದ್ದರೂ ಅವುಗಳನ್ನು ಪಡೆದುಕೊಳ್ಳಲಾಗದಂಥ ಸ್ಥಿತಿ ಅವರನ್ನು ಹೈರಾಣಾಗಿಸುತ್ತಿದೆ. ಅವರ ಮಕ್ಕಳು ಸಹ ಖಿನ್ನತೆ ಮತ್ತು ಹತಾಷೆ ಅನುಭವಿಸುತ್ತಿರುವುದರಿಂದ ಅವರಿಂದ ಬೈಗುಳ ಕೇಳುವಂಥ ಪ್ರಸಂಗಗಳು ಸಹ ಎದುರಾಗುತ್ತಿವೆ,

ಇಂಥ ಸಂಕಷ್ಟದ ಸಮಯದಲ್ಲಿ, ಮಾನಸಿಕ ಕಾಯಿಲೆ ಮತ್ತು ದೈಹಿಕ ವೈಕಲ್ಯಗಳಿಂದ ಬಳಲುತ್ತಿರುಹಿರಿಯರು ಹೆಚ್ಚು ತೊಂದರೆಗಳನ್ನು ಎದುರಿಸುತ್ತಾರೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ. ಅವರಲ್ಲಿ ರೋಗ ನಿರೋಧಕ ಶಕ್ತಿ ತ್ವರಿತವಾಗಿ ಕುಂಠಿತಗೊಳ್ಳುತ್ತಿರುವುದರಿಂದ ಸೋಂಕಿಗೀಡಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗಾಗಿ, ತಮ್ಮ ಸ್ವಂತ ಕುಟುಂಬದವರಿಗೆಯೇ ಅವರ ಬೇಡದ ವಸ್ತುಗಳಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ, ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Covid-19 Insurance: ಏಪ್ರಿಲ್ 1ರಿಂದ ಮೇ 14ರ ಮಧ್ಯೆ 44 ದಿನದಲ್ಲಿ 8,385 ಕೋಟಿ ರೂ. ಕೋವಿಡ್- 19 ಇನ್ಷೂರೆನ್ಸ್ ಕ್ಲೇಮ್

Published On - 8:31 am, Tue, 18 May 21

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ