ಶಿವಮೊಗ್ಗ APMCಯಲ್ಲಿ ಜನಜಂಗುಳಿ, ಅಂತರ ಕಾಯ್ದುಕೊಳ್ಳದೆ ತರಕಾರಿಗೆ ಮುಗಿಬಿದ್ದ ಜನ

ಶಿವಮೊಗ್ಗ APMCಯಲ್ಲಿ ಜನಜಂಗುಳಿ, ಅಂತರ ಕಾಯ್ದುಕೊಳ್ಳದೆ ತರಕಾರಿಗೆ ಮುಗಿಬಿದ್ದ ಜನ

ಶಿವಮೊಗ್ಗ: ಅದೆಷ್ಟು ಬಡ್ಕೊಂಡ್ರು, ಜನ ಬೀದಿ ಬೀದಿಗಳಲ್ಲಿ ಅಲೆಯೋದನ್ನ ಕಮ್ಮಿ ಮಾಡುತ್ತಿಲ್ಲ. ಲಾಕ್​ಡೌನ್ ಮಾಡಿ ಹೊರಗೆ ಬರ್ಬೇಡಿ ಅಂತ ಲಾಗ ಹಾಕಿದ್ರೂ ಜನ ಮಾತೆ ಕೇಳುತ್ತಿಲ್ಲ. ಇದರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮುಗಿಬಿದ್ದಿದ್ದಾರೆ. ಮಾರುಕಟ್ಟೆಯಲ್ಲಿ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ವಿನೋಬ ನಗರದಲ್ಲಿ ಅಂಗಡಿಗಳು ಸಹ ಓಪನ್ ಆಗಿವೆ. 100 ಅಡಿ ರಸ್ತೆ, ನಗರದ ಜೈಲ್ ರಸ್ತೆಯಲ್ಲಿ ಹಾರ್ಡವೇರ್, ಟೈಲ್ಸ್ ಅಂಗಡಿ, […]

sadhu srinath

|

Apr 17, 2020 | 8:10 AM

ಶಿವಮೊಗ್ಗ: ಅದೆಷ್ಟು ಬಡ್ಕೊಂಡ್ರು, ಜನ ಬೀದಿ ಬೀದಿಗಳಲ್ಲಿ ಅಲೆಯೋದನ್ನ ಕಮ್ಮಿ ಮಾಡುತ್ತಿಲ್ಲ. ಲಾಕ್​ಡೌನ್ ಮಾಡಿ ಹೊರಗೆ ಬರ್ಬೇಡಿ ಅಂತ ಲಾಗ ಹಾಕಿದ್ರೂ ಜನ ಮಾತೆ ಕೇಳುತ್ತಿಲ್ಲ. ಇದರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಮುಗಿಬಿದ್ದಿದ್ದಾರೆ. ಮಾರುಕಟ್ಟೆಯಲ್ಲಿ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.

ಅಲ್ಲದೆ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ವಿನೋಬ ನಗರದಲ್ಲಿ ಅಂಗಡಿಗಳು ಸಹ ಓಪನ್ ಆಗಿವೆ. 100 ಅಡಿ ರಸ್ತೆ, ನಗರದ ಜೈಲ್ ರಸ್ತೆಯಲ್ಲಿ ಹಾರ್ಡವೇರ್, ಟೈಲ್ಸ್ ಅಂಗಡಿ, ಸಲೂನ್‌ಗಳು ಸೇರಿದಂತೆ ಹಲವು ಅಂಗಡಿಗಳನ್ನು ತೆರೆದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada