ಖ್ಯಾತ ಹಿನ್ನೆಲೆ ಗಾಯಕಿ ಸುನಿತಾಗೆ ಸದ್ಯದಲ್ಲೇ ಮರುಮದುವೆ, ಇಂದು ನಿಶ್ಚಿತಾರ್ಥ

  • sadhu srinath
  • Published On - 15:16 PM, 7 Dec 2020
ಖ್ಯಾತ ಹಿನ್ನೆಲೆ ಗಾಯಕಿ ಸುನಿತಾಗೆ ಸದ್ಯದಲ್ಲೇ ಮರುಮದುವೆ, ಇಂದು ನಿಶ್ಚಿತಾರ್ಥ
ಮರು ಮದುವೆಗೆ ಸಿದ್ದರಾದ ಖ್ಯಾತ ಗಾಯಕಿ, SPB ಸಮೀಪ ಬಂಧು ಸುನಿತಾ

ಖ್ಯಾತ ಹಿನ್ನೆಲೆ ಗಾಯಕಿ ಸುನಿತಾ ಸದ್ಯದಲ್ಲೇ ಮರುಮದುವೆಯಾಗಲಿದ್ದು, ಇಂದು ಸರಳವಾಗಿ ಅವರ ನಿಶ್ಚಿತಾರ್ಥ ನಡೆದಿದೆ. ಆಂಧ್ರ ಪ್ರದೇಶದ ಗುಂಟೂರು ಮೂಲದ ಸುನಿತಾ ಉಪದ್ರಷ್ಠ ಅವರು ರಾಮ್​ ವಿರಪನೇನಿ​ ಎಂಬುವವರ ಜೊತೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ವಿವಾಹವಾಗುವುದಾಗಿ ಸುನಿತಾ ಹೇಳಿದ್ದಾರೆ. ತನ್ಮೂಲಕ ಬಹುಕಾಲದಿಂದ ತಮ್ಮ ಮರುವಿವಾಹದ ಬಗ್ಗೆ ಎದ್ದಿದ್ದ ಗಾಸಿಪ್​ಗಳಿಗೆ ತೆರೆ ಎಳೆದಿದ್ದಾರೆ.

ತಮ್ಮ ಸುಶ್ರಾವ್ಯ ಕಂಠದ ಮೂಲಕ ಮನೆಮಾತಾಗಿರುವ ಸುನಿತಾ ಡಬ್ಬಿಂಗ್ ಆರ್ಟಿಸ್ಟ್ ಸಹ. ಇತ್ತೀಚೆಗೆ ನಿಧನರಾದ ಗಾನಗಂಧರ್ವ ಎಸ್​ ಪಿ ಬಾಲಸುಬ್ರಮಣ್ಯಂ ಅವರು ಸಂಗೀತ ಶಿಷ್ಯೆಯಾದ ಸುನಿತಾ, ಅವರ ಸಮೂಪದ ಬಂಧುವೂ ಹೌದು.

42 ವರ್ಷದ ಸುನಿತಾ ಈ ಹಿಂದೆ ಪತ್ರಕರ್ತರೊಬ್ಬರನ್ನು ಮದುವೆಯಾಗಿದ್ದರು. ಅವರಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯಿದ್ದಾರೆ. ರಾಮ್​ ವಿರಪನೇನಿ​ ಅವರು ತೆಲುಗು ಡಿಜಿಲಟ್​ ಮೀಡಿಯಾ ಸಂಸ್ಥೆಯಲ್ಲಿ ಉನ್ನತಾಧಿಕಾರಿಯಾಗಿದ್ದಾರೆ.