ತಿಂದ ಮನೆಗೆ ಕನ್ನ ಹಾಕಿದ, ಕಳ್ಳತನ ಮಾಡಿ ಸಿಕ್ಕಿಬಿದ್ದ

  • Publish Date - 7:47 am, Fri, 4 September 20
ತಿಂದ ಮನೆಗೆ ಕನ್ನ ಹಾಕಿದ, ಕಳ್ಳತನ ಮಾಡಿ ಸಿಕ್ಕಿಬಿದ್ದ

ಮೈಸೂರು: ನಕಲಿ ಕೀ ಬಳಸಿ ಫೈನಾನ್ಸ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಟಿ.ನರಸೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹರೀಶ್(22) ಬಂಧಿತ ಆರೋಪಿ.

ನಕಲಿ ಕೀ ಬಳಸಿ ಟಿ.ನರಸೀಪುರ ತಾಲೂಕು ಹೆಳವರಹುಂಡಿ ಗ್ರಾಮದ ಸ್ಪಂದನ ಫೈನಾನ್ಸ್ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 6.5 ಲಕ್ಷ ಮೌಲ್ಯದ 43 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಫೈನಾನ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಕೆಲಸ ಬಿಡುವ ವೇಳೆ ಅಂಗಡಿಯ ಒಂದು ಕೀ ಕದ್ದಿದ್ದ. ಅದೇ ಕೀ ಬಳಸಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

Click on your DTH Provider to Add TV9 Kannada