ಬೆಳಗಾವಿ ಪಾಲಿಕೆ ಮುಂದಿರುವ ಕನ್ನಡ ಧ್ವಜ ತೆಗೆದರೆ ರಕ್ತಪಾತವಾಗುತ್ತೆ: ವಾಟಾಳ್ ನಾಗರಾಜ್

ಬೆಳಗಾವಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಎಂಇಎಸ್ ರದ್ದು ಮಾಡಬೇಕು. ರಾಜ್ಯದಲ್ಲಿ MES​ ಇರಬಾರದು, ಕರ್ನಾಟಕ ಏಕೀಕರಣ ಸಮಿತಿ ಇರಬೇಕು.

ಬೆಳಗಾವಿ ಪಾಲಿಕೆ ಮುಂದಿರುವ ಕನ್ನಡ ಧ್ವಜ ತೆಗೆದರೆ ರಕ್ತಪಾತವಾಗುತ್ತೆ: ವಾಟಾಳ್ ನಾಗರಾಜ್
ಪ್ರತಿಭಟನಾ ನಿರತ ಕನ್ನಡ ಪರ ಹೋರಾಟಗಾರರು
pruthvi Shankar

| Edited By: sadhu srinath

Jan 23, 2021 | 2:35 PM

ಬೆಳಗಾವಿ: ಗಡಿಯಲ್ಲಿ ಶಿವಸೇನೆ ಪುಂಡಾಟಿಕೆ ಖಂಡಿಸಿ ಬೆಳಗಾವಿಯಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಲು ವಾಟಾಳ್ ನಾಗರಾಜ್, ಸಾ.ರಾ ಗೋವಿಂದ್ ಬೆಂಗಳೂರಿನಿಂದ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಆಗಮಿಸಿದ್ದರು.

ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಶಿವರಾಮೇಗೌಡ ಬಣ ಮತ್ತು ಸ್ಥಳೀಯ ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದಾರೆ. ಚನ್ನಮ್ಮ ವೃತ್ತಕ್ಕೆ ಪ್ರತಿಭಟನಾಕಾರರು ಆಗಮಿಸುತ್ತಿದ್ದಂತೆ ಪೊಲೀಸರು ಬ್ಯಾರಿಕೆಡ್ ಹಾಕಿ ತಡೆದರು. ಹೀಗಾಗಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ವಾಟಾಳ್ ನಾಗರಾಜ್, ಸಾರಾ ಗೋವಿಂದ್ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಲಾಯಿತು. MES​ ಪುಂಡರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಧಿಕ್ಕಾರ ಕೂಗುವುದರೊಂದಿಗೆ ಕನ್ನಡ ಬಾವುಟಗಳನ್ನ ಹಿಡಿದು, ಬೆಳಗಾವಿ ನಮ್ಮದು ಎಂದು ಹೋರಾಟಗಾರರು ಘೋಷಣೆ ಕೂಗಿದರು.

ರಾಜ್ಯದಲ್ಲಿ MES​ ಇರಬಾರದು, ಕರ್ನಾಟಕ ಏಕೀಕರಣ ಸಮಿತಿ ಇರಬೇಕು.. ಪ್ರತಿಭಟನೆಯಲ್ಲಿ ನಿರತರಾಗಿದ್ದ ವಾಟಳ್​ ನಾಗರಾಜ್ ಮಾತಾನಾಡಿ​, ಬೆಳಗಾವಿಯನ್ನ ಕರ್ನಾಟಕ ಸರ್ಕಾರ ಕೈಬಿಟ್ಟಿದೆ. ಬೆಳಗಾವಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಎಂಇಎಸ್ ರದ್ದು ಮಾಡಬೇಕು. ರಾಜ್ಯದಲ್ಲಿ MES​ ಇರಬಾರದು, ಕರ್ನಾಟಕ ಏಕೀಕರಣ ಸಮಿತಿ ಇರಬೇಕು. ಮುಂದಿನ ದಿನದಲ್ಲಿ ಬೆಳಗಾವಿ ಉದ್ದಗಲಕ್ಕೂ ಕನ್ನಡ ಬಾವುಟ ಹಾಕುತ್ತೇವೆ. ಬೆಳಗಾವಿಯಲ್ಲಿರುವ MES​ ಮುಖಂಡರು ಮಹಾರಾಷ್ಟ್ರ ಬೇಕು ಅನ್ನುವ ಹಾಗಿದ್ರೇ ಉದ್ಧವ್ ಠಾಕ್ರೆ ಹತ್ರಾ ಹೋಗಲಿ ಎಂದರು.

ಈ ರಾಜ್ಯದ ಅತ್ಯಂತ ಅನಿಷ್ಠ ಮುಖ್ಯಮಂತ್ರಿ ಯಡಿಯೂರಪ್ಪ.. ಇನ್ನು 15 ದಿನಗಳಲ್ಲಿ MES​ ಸಂಘಟನೆಯನ್ನು ವಜಾ ಮಾಡಬೇಕು. MES​ ಸಂಘಟನೆ ಮುಖಂಡರಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕು. ಮರಾಠಿ ಪರ ಮಾತಾಡಿದರೆ ಮಹಾರಾಷ್ಟ್ರಕ್ಕೆ ಹೋಗಬೇಕು ಅಂತಾ ಬರೆಸಿಕೊಳ್ಳಬೇಕು. ಯಡಿಯೂರಪ್ಪ ಅವರಿಗೆ ಇದನ್ನ ಮಾಡುವ ಶಕ್ತಿ ಇಲ್ಲ. ಈ ರಾಜ್ಯವನ್ನ ಯಡಿಯೂರಪ್ಪ ನಾಶ ಮಾಡುತ್ತಿದ್ದಾರೆ. ಈ ರಾಜ್ಯದ ಅತ್ಯಂತ ಅನಿಷ್ಠ ಮುಖ್ಯಮಂತ್ರಿ ಯಡಿಯೂರಪ್ಪ. ವರವಾಗುವ ಬದಲು ಯಡಿಯೂರಪ್ಪ ರಾಜ್ಯಕ್ಕೆ ಶಾಪವಾಗಿದ್ದಾರೆ.

ಕರ್ನಾಟಕ ಇತಿಹಾಸದಲ್ಲಿ ಭ್ರಷ್ಟ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ. ಈ ರಾಜ್ಯ ಉಳಿಯಬೇಕು ಅಂದ್ರೇ ಕೂಡಲೇ ಯಡಿಯೂರಪ್ಪ ರಾಜೀನಾಮೆ ಕೊಡಬೇಕು. ಇನ್ನು 15 ದಿನಗಳಲ್ಲಿ ಎಂಇಎಸ್ ರಾಜ್ಯ ಬಿಡಬೇಕು. ಇಲ್ಲವಾದ್ರೇ ಬೆಳಗಾವಿಗೆ ನಾವು ನುಗ್ಗುತ್ತೇವೆ. ಶಿವಸೇನೆ ಪುಂಡರು ರಾಜ್ಯಕ್ಕೆ ನುಗ್ಗಿ ದುಂಡಾವರ್ತನೆ ಮಾಡಿದ್ದಾರೆ. ಬೆಳಗಾವಿಗೆ ಉದ್ಧವ್ ಠಾಕ್ರೆ ಬಂದ್ರೂ ಜೈಲಿಗೆ ಹಾಕಬೇಕು. ಇಲ್ಲಿನ ರಾಜಕಾರಣಿಗಳು ನರ ಸತ್ತ ರಾಜಕಾರಣಿಗಳು, ಎಂಇಎಸ್ ಏಜೆಂಟ್‌ ರಾಗಿದ್ದಾರೆ ಎಂದು ಅವರು ಗುಡುಗಿದರು.

ಪಾಲಿಕೆ ಮುಂದಿರುವ ಕನ್ನಡ ಧ್ವಜ ತೆಗೆದ್ರೇ ರಕ್ತಪಾತವಾಗುತ್ತೆ.. ಎಂಇಎಸ್ ನಿಷೇಧ ಮಾಡ್ಲಿ ಇಲ್ಲಾ ನಮ್ಮನ್ನ ವರ್ಷಗಟ್ಟಲೇ ಜೈಲಿಗೆ ಹಾಕಲಿ. ಬೆಳಗಾವಿಯ ಶಾಸಕರು, ಸಂಸದರು ಅವಿವೇಕಿಗಳು. ಬೆಳಗಾವಿಗೆ ರಾಜಕಾರಣಿಗಳು ಬೆಳಗಾವಿಗೆ ದ್ರೋಹ ಮಾಡುತ್ತಿದ್ದಾರೆ. ಮಾನ ಮರ್ಯಾದೆ ಇದ್ರೇ ರಾಜೀನಾಮೆ ಕೊಡಬೇಕು. ಪಾಲಿಕೆ ಮುಂದಿರುವ ಕನ್ನಡ ಧ್ವಜ ತೆಗೆದ್ರೇ ರಕ್ತಪಾತವಾಗುತ್ತೆ. 15 ದಿನ ಗಡುವು ಕೊಟ್ಟಿದ್ದೇವೆ. ಅದ್ರಲ್ಲಿ ತೀರ್ಮಾನ ಆಗದಿದ್ದರೆ ಕರ್ನಾಟಕ ಬಂದ್​ಗೆ‌ ತೀರ್ಮಾನ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹಾಗೂ MES​ ವಿರುದ್ಧ ಗುಡುಗಿದರು.

ಇದಕ್ಕೆ ನೇರವಾಗಿ ಕಾರಣ ಸಿಎಂ ಯಡಿಯೂರಪ್ಪ.. ಪುಂಡಾಟಿಕೆ ಪ್ರದರ್ಶಿಸಿ ಗಡಿ ನುಗ್ಗಲು ಶಿವಸೇನೆ ಪುಂಡರ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾನಾಡಿದ ನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು, ಇದಕ್ಕೆ ನೇರವಾಗಿ ಸಿಎಂ ಯಡಿಯೂರಪ್ಪ ಕಾರಣ. ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿ ಅನುಕೂಲ ಮಾಡಿಕೊಟ್ರಿ. ಸಮಯ ಬಂದಾಗ ಗಡಿ ಹೋರಾಟಕ್ಕೂ ಚಿತ್ರರಂಗದವರು ಬರ್ತಾರೆ, ಆದರೆ ಸರ್ಕಾರಕ್ಕೆ ಎಂಇಎಸ್ ನಿಷೇಧ ಮಾಡುವ ತಾಕತ್ತಿದೆಯಾ?

ಪಕ್ಷಾತೀತವಾಗಿ ಹೋರಾಟ ಮಾಡುವವರು ನಾವು. ತಾಕತ್ತು, ಧಮ್ಮಿದ್ರೇ ಮರಾಠ ಪ್ರಾಧಿಕಾರ ಬ್ಯಾನ್ ಮಾಡಿ ಗಂಡಸ್ತನ ತೋರ್ಸಿ. ಮುಖ್ಯವಾಹಿನಿಗೆ ಮರಾಠರನ್ನ ಕರೆದುಕೊಂಡು ಬರ್ತೇನಿ ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಹೇಳ್ತಾರೆ. ನಾಚಿಗೇಯಾಗಬೇಕು ನಿಮಗೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನಾಕಾರರು ಪೊಲೀಸರ ವಶಕ್ಕೆ.. ಗಡಿಯಲ್ಲಿ ಶಿವಸೇನೆ ಪುಂಡಾಟ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ವಾಟಾಳ್ ನಾಗರಾಜ್ ಹಾಗೂ ಸಾ.ರಾ.ಗೋವಿಂದು ಅವರನ್ನು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕರವೇ ಕಾರ್ಯಕರ್ತರು, ಸ್ಥಳೀಯ ಹೋರಾಟಗಾರರು ಶಿನ್ನೋಳಿ ಚೆಕ್​ಪೋಸ್ಟ್​ನಲ್ಲಿ ಪ್ರತಿಭಟನೆಗೆ ತೆರಳುತ್ತಿದ್ದಾಗ ಚೆನ್ನಮ್ಮ ವೃತ್ತದಲ್ಲಿ ಬ್ಯಾರಿಕೇಡ್​ ಅಳವಡಿಸಿ ವಶಕ್ಕೆ ಪಡೆದಿದ್ದಾರೆ.

ಶಿವಸೇನೆಯವರು ಕನ್ನಡಿಗರಿಗೆ ಚಿರಋಣಿ ಆಗಿರಬೇಕು: ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada