ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ದಿನ ಜನರನ್ನು ರೊಚ್ಚಿಗೆಬ್ಬಿಸಿದ್ದ ಖತರ್ನಾಕ್ ಆರೋಪಿ ಮಕ್ಬುಲ್ನನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಗಲಭೆಯ ದಿನ ಮಕ್ಬುಲ್ ಬಲವಂತವಾಗಿ ಡಿಜೆ ಹಳ್ಳಿಯ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದ್ದ. ಅಂಗಡಿ ಕ್ಲೋಸ್ ಮಾಡದವರಿಗೆ ಧಮ್ಕಿ ಹಾಕಿ ಅಂಗಡಿ ಶೆಟರ್ ಕ್ಲೋಸ್ ಮಾಡಿಸಿದ್ದ. ನಂತರ ಕಿಡಿಗೇಡಿಗಳ ಜೊತೆ ಸೇರಿ ಗಲಭೆ, ದೊಂಬಿ ಎಬ್ಬಿಸಿದ್ದ ಎನ್ನಲಾಗ್ತಿದೆ.
ಗಲಭೆ ನಂತರದ ವಿಚಾರಣೆಯಲ್ಲಿ ಈತನ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಕಿರಾತಕನನ್ನು ಈಗ ಬಂಧಿಸಿದ್ದಾರೆ.