ಡಿ.ಜೆ ಹಳ್ಳಿ ಆರೋಪಿಗಳನ್ನು ಹಿಡಿಯಲು ಸಿದ್ಧವಾಗಿದೆ ಆರು ಸ್ಪೆಷಲ್ ಟೀಮ್

ಬೆಂಗಳೂರು: ಆಗಸ್ಟ್ 11 ರಾತ್ರಿ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಗಲೆಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳನ್ನು ಹುಡುಕಿ ಹುಡುಕಿ ಅರೆಸ್ಟ್ ಮಾಡುತ್ತಿದ್ದಾರೆ. ಸಿಸಿಟಿವಿ ಮತ್ತು ವಿಡಿಯೋಗಳನ್ನ ಪರಿಶೀಲನೆ ನಡೆಸಲಿಕ್ಕೆ ಒಂದು ಬೃಹತ್ ತಂಡ ರಚನೆ ಮಾಡಲಾಗಿದೆ. ಈ ತಂಡಕ್ಕೆ ಡಿಸಿಪಿ ಶರಣಪ್ಪ ಖುದ್ದು ಮಾನಿಟರ್ ಮಾಡಲಿದ್ದಾರೆ. ಪ್ರಕರಣ ತನಿಖೆಗೆ ವಿಷೇಶವಾಗಿ ವರ್ಗೀಕರಣ ಮಾಡಿ ತಂಡಗಳನ್ನು ರಚನೆ ಮಾಡಲಾಗಿದೆ. ಆ ಟೀಮ್​ಗಳು ಇಂತಿವೆ. 1) ಟೆಕ್ನಿಕಲ್ ಟೀಮ್. 2) ಸಿಸಿಟಿವಿ ಮತ್ತು ವಿಡಿಯೋ […]

ಡಿ.ಜೆ ಹಳ್ಳಿ ಆರೋಪಿಗಳನ್ನು ಹಿಡಿಯಲು ಸಿದ್ಧವಾಗಿದೆ ಆರು ಸ್ಪೆಷಲ್ ಟೀಮ್
Ayesha Banu

|

Aug 16, 2020 | 6:55 AM

ಬೆಂಗಳೂರು: ಆಗಸ್ಟ್ 11 ರಾತ್ರಿ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಗಲೆಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳನ್ನು ಹುಡುಕಿ ಹುಡುಕಿ ಅರೆಸ್ಟ್ ಮಾಡುತ್ತಿದ್ದಾರೆ. ಸಿಸಿಟಿವಿ ಮತ್ತು ವಿಡಿಯೋಗಳನ್ನ ಪರಿಶೀಲನೆ ನಡೆಸಲಿಕ್ಕೆ ಒಂದು ಬೃಹತ್ ತಂಡ ರಚನೆ ಮಾಡಲಾಗಿದೆ. ಈ ತಂಡಕ್ಕೆ ಡಿಸಿಪಿ ಶರಣಪ್ಪ ಖುದ್ದು ಮಾನಿಟರ್ ಮಾಡಲಿದ್ದಾರೆ. ಪ್ರಕರಣ ತನಿಖೆಗೆ ವಿಷೇಶವಾಗಿ ವರ್ಗೀಕರಣ ಮಾಡಿ ತಂಡಗಳನ್ನು ರಚನೆ ಮಾಡಲಾಗಿದೆ. ಆ ಟೀಮ್​ಗಳು ಇಂತಿವೆ.

1) ಟೆಕ್ನಿಕಲ್ ಟೀಮ್. 2) ಸಿಸಿಟಿವಿ ಮತ್ತು ವಿಡಿಯೋ 3) ಅರೆಸ್ಟಿಂಗ್ ಟೀಮ್ 4)ಇಂಟ್ರಾಗೇಶನ್ ಟೀಮ್ 5) ಪೇಪರ್ ವರ್ಕ್ 6) ಟೀಮ್ ಫರ್ ನವೀನ್

ಹೀಗೆ ಬೇರೆ ಬೇರೆ ಮಾದರಿಯ ಕೆಲಸ ಮಾಡಲು ತಂಡಗಳನ್ನ ರಚನೆ ಮಾಡಲಾಗಿದೆ. ಇದುವರೆಗೆ 800 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿರುವ ಪೊಲೀಸರು ವಿಡಿಯೋ ಪರಿಶೀಲನೆಗೆ ಒಂದು ಬೃಹತ್ ತಂಡ ರಚನೆ ಮಾಡಿದ್ದಾರೆ. ವಿಡಿಯೋ ಮತ್ತು ಫೋಟೋಗಳನ್ನು ನೋಡಿ ವ್ಯಕ್ತಿಯನ್ನು ಗುರುತಿಸಲಾಗುತ್ತಿದೆ. ನಂತರ ಟೆಕ್ನಿಕಲ್ ಟೀಮ್ ಸಹಯಾದಿಂದ ಅರೋಪಿಗಳು ಎಲ್ಲಿದ್ದಾರೆ ಎನ್ಮುವುದನ್ನು ಪತ್ತೆ ಮಾಡಲಾಗುತ್ತಿದೆ.

ಪಕ್ಕ ಪ್ಲಾನ್ ಮಾಡಿ ಒಬ್ಬಬ್ಬ ಅರೋಪಿಗಳನ್ನು ಹುಡುಕಿ ಹುಡುಕಿ ಹೆಡೆಮುರಿಕಟ್ಟಲಾಗುತ್ತಿದೆ. ಟೆಕ್ನಿಕಲ್ ಟೀಮ್ ಈಗಾಗಲೇ ಟವರ್ ಡಂಪ್ ಮಾಡಲಾಗಿದೆ. ಘಟನೆ ಸಮಯದಲ್ಲಿ ಯಾವೆಲ್ಲಾ ಮೊಬೈಲ್ ನಂಬರ್​ಗಳು ಇಲ್ಲಿಗೆ ಬಂದಿವೆ. ಇಲ್ಲಿಗೆ ಬಂದು ನಂತ್ರ ಎಷ್ಟು ಸಮಯದ ನಂತ್ರ ಬೇರೆ ಕಡೆಗೆ ಪರಾರಿಯಾಗಿದ್ದಾರೆ ಎನ್ನುವುದನ್ನು ಹುಡುಕಲಾಗುತ್ತೆ. ಈಗಾಗಲೇ ಟವರ್ ಡಂಪ್​ನಲ್ಲಿ ಸಾವಿರಾರು ಮೊಬೈಲ್ ನಂಬರ್​ಗಳು ಪತ್ರೆಯಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

ಸಾಮಾಜಿಕ ಜಾಲತಾಣದ ಮೂಲಕ ಆರೋಪಿಗಳ ಪಟ್ಟಿ: ಫೇಸ್​ಬುಕ್, ಇನ್ಸ್ಟಾಗ್ರಾಮ್. ವಾಟ್ಸಪ್, ವಿ ಚಾಟ್ ಸೇರಿ ಬೇರೆ ಬೇರೆ ಸಾಮಾಜಿಕ ಜಾಲ ತಾಣದ ಮೂಲಕ ಜನ ಸೇರಿಸಲಾಗಿತ್ತು. ಹೀಗಾಗಿ ಸಾಮಾಜಿಕ ಜಾಲತಾಣವನ್ನು ತಡಕಾಡಿ ಅರೋಪಿಗಳ ಲೀಸ್ಟ್ ಮಾಡಲಾಗುತ್ತಿದೆ. ಟೆಕ್ನಿಕಲ್ ಮತ್ತು ಸಿಸಿಟಿವಿ ಮತ್ತು ವಿಡಿಯೋ ಟೀಮ್ ನೀಡಿದ ಮಾಹಿತಿ ಮೇರೆಗೆ ಅರೆಸ್ಟಿಂಗ್ ಟೀಮ್ ಆರೋಪಿಗಳನ್ನು ಅರೆಸ್ಟ್ ಮಾಡುತ್ತೆ.

ಆರೋಪಿಗಳನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆತಂದ ಕೂಡಲೆ ಒಂದು ಸುತ್ತಿನ ವಿಚಾರಣೆ ನಡೆಸಲಾಗುತ್ತೆ. ಈ ವಿಚಾರಣೆಯಲ್ಲಿ ಆರೋಪಿ ಜೊತೆ ಯಾರಿದ್ದರು ಎನ್ನುವುದನ್ನು ಹೊರಗೆ ತರಲಾಗುತ್ತೆ. ತಕ್ಷಣ ಆರೋಪಿ ನೀಡಿದ ಮಾಹಿತಿ ಮೇರೆಗೆ ಮತ್ತಷ್ಟು ಜನರನ್ನು ಅರೆಸ್ಟ್ ಮಾಡಲಾಗುತ್ತೆ. ಆರೋಪಿಗಳು ಯಾವ ಸಂಘಟನೆಯ ಪರವಾಗಿದ್ರು . ಯಾರಿಂದ ಪ್ರಚೋದನೆಗೆ ಒಳಗಾಗಿದ್ರು ಅಥವಾ ಇವರುಗಳು ಅದೆಷ್ಟು ಜನರಿಗೆ ಪ್ರಚೋದನೆ ಕೊಡ್ತಿದ್ರು ಹೀಗೆ ಹಲವು ಅಯಾಮದಲ್ಲಿ ವಿಚಾರಣೆ ನಡೆಸಲಾಗುತ್ತೆ.

ನಂತ್ರ ಇಂಟ್ರಾಗೇಶನ್ ಟೀಮ್ ಆರೋಪಿಗಳನ್ನು ಪೇಪರ್ ವರ್ಕ್ ಟೀಮ್​ಗೆ ನೀಡ್ತಾರೆ. ಪೇಪರ್ ವರ್ಕ್ ಸಹ ಬಹಳ ಪ್ರಮುಖ ಆರೋಪಿಗಳ ಫಿಂಗರ್ ಪ್ರಿಂಟ್, ಹೆಸರು, ಫೋಟೋ ಮತ್ತು ಇತರ ಮಾಹಿತಿ ಪಡೆದು ಅದಿಕೃತವಾಗಿ ಅರೆಸ್ಟ್ ಮಾಡಲಾಗುತ್ತೆ. ಮತ್ತೊಂದು ತಂಡ ಪ್ರತ್ಯೇಕವಾಗಿ ನವೀನ್ ವಿಚಾರಣೆ ನಡೆಸುತ್ತಿದೆ. ನವೀನ್ ಏನೆಲ್ಲಾ ಮಾಡಿದ್ದಾನೆ ಎನ್ನುವುದನ್ನು ಈಗಾಗಲೇ ಬಯಲಿಗೆ ಎಳೆಯಲಾಗಿದೆ. ಜೊತೆಗೆ ನವೀನ್ ಹಿಂದೆ ಯಾರಾದರು ಇದ್ದು ಈ ಕೆಲಸ ಮಾಡ್ಸಿದ್ದಾರಾ ಎನ್ನುವುದನ್ನು ಪರಿಶೀಲನೆ ಮಾಡಲಾಗುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada