ಖಾತೆ ಬದಲಾವಣೆಯಿಂದ ಯಾವುದೇ ಅಸಮಾಧಾನವಿಲ್ಲ: ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ್

ನಮ್ಮ ಕ್ಯಾಪ್ಟನ್ ನಿರ್ಧಾರವನ್ನು ಒಪ್ಪಿಕೊಂಡು ಗೌರವಿಸಬೇಕು. ಕೆಲವು ಸಚಿವರಿಗೆ ಅಸಮಾಧಾನ ಉಂಟಾಗಿರುವುದು ನಿಜ. ಅವರ ನೋವು ಏನು ಎಂಬುದು ಅವರಿಗೇ ಗೊತ್ತು ಎಂದು ಆನಂದ್ ಸಿಂಗ್ ಹೇಳಿದ್ದಾರೆ.

  • TV9 Web Team
  • Published On - 18:50 PM, 21 Jan 2021
ಖಾತೆ ಬದಲಾವಣೆಯಿಂದ ಯಾವುದೇ ಅಸಮಾಧಾನವಿಲ್ಲ: ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ್
ಆನಂದ್ ಸಿಂಗ್

ಬೆಂಗಳೂರು: ಖಾತೆ ಬದಲಾವಣೆಯಿಂದ ಯಾವುದೇ ಅಸಮಾಧಾನವಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಸಿಎಂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಖಾತೆ ಬದಲಾವಣೆ ಮಾಡಿದ್ದಾರೆ. ಪ್ರವಾಸೋದ್ಯಮ ಖಾತೆಯನ್ನು ಹಿಂದೆ ನಾನು ನಿರ್ವಹಣೆ ಮಾಡಿದ್ದೇನೆ. ಈಗ ಅರಣ್ಯ ಖಾತೆಯಲ್ಲೂ ಸ್ವಲ್ಪ ಅನುಭವ ಪಡೆದಿದ್ದೆ. ನಮ್ಮ ಕ್ಯಾಪ್ಟನ್ ನಿರ್ಧಾರವನ್ನು ಒಪ್ಪಿಕೊಂಡು ಗೌರವಿಸಬೇಕು. ಕೆಲವು ಸಚಿವರಿಗೆ ಅಸಮಾಧಾನ ಉಂಟಾಗಿರುವುದು ನಿಜ. ಅವರ ನೋವು ಏನು ಎಂಬುದು ಅವರಿಗೇ ಗೊತ್ತು. ಖಾತೆಗಳ ರೀಶಫಲ್ ಆದಾಗ ಇಂತಹಾ ಅಸಮಾಧಾನಗಳು ಸಹಜ ಎಂದು ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಗ್ರೀನ್​​ಸಿಗ್ನಲ್.. ಯಾರಿಗೆ ಯಾವ ಖಾತೆ? ವಿವರ ಇಲ್ಲಿದೆ