ಸಂಜನಾ ಬಗ್ಗೆ ನಾನು ಯಾವ ದಾಖಲೆ ನೀಡಿಲ್ಲ -ವಿಚಾರಣೆ ಬಳಿಕ ಸಂಬರಗಿ ಫಸ್ಟ್​ ರಿಯಾಕ್ಷನ್​

  • Updated On - 3:16 pm, Sat, 12 September 20
ಸಂಜನಾ ಬಗ್ಗೆ ನಾನು ಯಾವ ದಾಖಲೆ ನೀಡಿಲ್ಲ -ವಿಚಾರಣೆ ಬಳಿಕ ಸಂಬರಗಿ ಫಸ್ಟ್​ ರಿಯಾಕ್ಷನ್​

ಬೆಂಗಳೂರು: CCB ಕಚೇರಿಯಲ್ಲಿ ಪ್ರಶಾಂತ್ ‌ಸಂಬರಗಿ ವಿಚಾರಣೆ ಮುಕ್ತಾಯವಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ಮತ್ತೆ ಬರುವಂತೆ ನನಗೆ ಸೂಚಿಸಿದ್ದಾರೆ. ನಾನು ಕೊಟ್ಟಿರುವ ದಾಖಲೆ ಸಾಕಾಗದ ಹಿನ್ನೆಲೆಯಲ್ಲಿ ಈ ರೀತಿ ಸೂಚಿಸಿದ್ದಾರೆ ಎಂದು ಸಂಬರಗಿ ಹೇಳಿದರು. ಪ್ರಕರಣಕ್ಕೆ ಬೇಕಾದ ದಾಖಲೆ ನಾನು ಒದಗಿಸಿದ್ದೇನೆ. ಅವರು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ಜೊತೆಗೆ, CCB ಅಧಿಕಾರಿಗಳಿಗೆ ಡಿಜಿಟಲ್​ ದಾಖಲೆ ಒದಗಿಸಿದ್ದೇನೆ. ಮತ್ತಷ್ಟು ದಾಖಲೆ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇಂತಹ ಗಂಭೀರ ವಿಚಾರದಲ್ಲಿ ನಾನು ಹಿಟ್​ ಆ್ಯಂಡ್​ ರನ್ ಮಾಡಲ್ಲ ಎಂದು ಪ್ರಶಾಂತ್​ ಸಂಬರಗಿ ಹೇಳಿದರು.

‘ನಟಿ ಸಂಜನಾ ಅವರ ಬಗ್ಗೆ ನಾನು ಯಾವ ದಾಖಲೆ ನೀಡಿಲ್ಲ’
ನಟಿ ಸಂಜನಾ ಅವರ ಬಗ್ಗೆ ನಾನು ಯಾವ ದಾಖಲೆ ನೀಡಿಲ್ಲ. IT, ಇಡಿ ಕುರಿತು ನಾನು ಏನನ್ನೂ ಮಾತನಾಡಿಲ್ಲ. ಜೊತೆಗೆ, ಯಾವುದೇ ನಟ, ನಟಿಯರ ಬಗ್ಗೆ ನಾನು ದಾಖಲೆ ನೀಡಿಲ್ಲ. ನಾನು ಯಾವುದೇ ಪಕ್ಷದ ವಕ್ತಾರನಾಗಿ ಕೆಲಸ ಮಾಡುತ್ತಿಲ್ಲ. ನಾನು ರಾಜಕೀಯ ಪ್ರೇರಿತವಾಗಿ ಈ ಅಭಿಯಾನ ನಡೆಸುತ್ತಿಲ್ಲ ಅಂತಾ ಸಹ ಹೇಳಿದರು.

‘ನಾನು ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ’
ನನ್ನ ವಿರುದ್ಧದ FIR ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇನೆ. FIR​ನಲ್ಲಿ ಯಾವುದೇ ಹುರುಳಿಲ್ಲ ಎಂದ ಸಂಬರಗಿ ಹೇಳಿದರು. ನಾನು ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ. ಸದ್ಯಕ್ಕೆ ತನಿಖಾ ಹಂತದಲ್ಲಿರುವುದರಿಂದ ಏನೂ ಹೇಳಲ್ಲ. ಯಾವುದೇ ಮಾಹಿತಿ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೆ, ಜಮೀರ್ ಹಾಗೂ ಫಾಝಿಲ್​​ ಮಧ್ಯದ ವ್ಯವಹಾರದ ಬಗ್ಗೆ ಚರ್ಚೆ ಆಗಬೇಕು ಎಂದು ಸಂಬರಗಿ ಹೇಳಿದರು.

ಇದನ್ನೂ ಓದಿ: ಯಾವ ಆಧಾರದ ಮೇಲೆ ಆರೋಪ ಮಾಡಿದ್ದೀರಿ? -ಸಂಬರಗಿಗೆ CCB ಪ್ರಶ್ನೆಗಳ ಸುರಿಮಳೆ

Click on your DTH Provider to Add TV9 Kannada