ಮಿನಿ ಸಮರಕ್ಕೆ ಕೌಂಟ್ ಡೌನ್, ಆರ್.ಆರ್.ನಗರ ಮತಗಟ್ಟೆಗಳಲ್ಲಿ ಸಕಲ ಸಿದ್ಧತೆ

ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿಂದು ಮತದಾನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಮತದಾನಕ್ಕೆ ಸಿಬ್ಬಂದಿಯಿಂದ ಸಕಲ ಸಿದ್ಧತೆ ನಡೆದಿದೆ. ಕೆಲವೇ ಕ್ಷಣದಲ್ಲಿ ಮತದಾನ ಶುರುವಾಗಲಿದ್ದು ಸಿಬ್ಬಂದಿ ವಿವಿ ಪ್ಯಾಟ್, ಇವಿಎಂ ಸಿದ್ಧಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದಿದೆ. ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ದೈಹಿಕ ಅಂತರ ಪಾಲನೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆಯ ಮುಂದೆ ಒಮ್ಮೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಮತಗಟ್ಟೆ ಪ್ರವೇಶಿಸುವಾಗ ಮತ್ತೊಮ್ಮೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತೆ. ಹಾಗೂ R.R.ನಗರದಲ್ಲಿ […]

ಮಿನಿ ಸಮರಕ್ಕೆ ಕೌಂಟ್ ಡೌನ್, ಆರ್.ಆರ್.ನಗರ ಮತಗಟ್ಟೆಗಳಲ್ಲಿ ಸಕಲ ಸಿದ್ಧತೆ

Updated on: Nov 03, 2020 | 7:02 AM

ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿಂದು ಮತದಾನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಮತದಾನಕ್ಕೆ ಸಿಬ್ಬಂದಿಯಿಂದ ಸಕಲ ಸಿದ್ಧತೆ ನಡೆದಿದೆ.

ಕೆಲವೇ ಕ್ಷಣದಲ್ಲಿ ಮತದಾನ ಶುರುವಾಗಲಿದ್ದು ಸಿಬ್ಬಂದಿ ವಿವಿ ಪ್ಯಾಟ್, ಇವಿಎಂ ಸಿದ್ಧಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದಿದೆ. ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ದೈಹಿಕ ಅಂತರ ಪಾಲನೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮತಗಟ್ಟೆಯ ಮುಂದೆ ಒಮ್ಮೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಮತಗಟ್ಟೆ ಪ್ರವೇಶಿಸುವಾಗ ಮತ್ತೊಮ್ಮೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತೆ. ಹಾಗೂ R.R.ನಗರದಲ್ಲಿ ನೋಟಾ ಮತದಾನಕ್ಕೆ ಪ್ರತ್ಯೇಕ ಇವಿಎಂ ಸಿದ್ದಪಡಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 16 ಅಭ್ಯರ್ಥಿಗಳ ಹೆಸರು ಒಂದು ಇವಿಎಂನಲ್ಲಿರುವ ಹಿನ್ನೆಲೆ ನೋಟಾ ವೋಟ್‌ಗೆ ಪ್ರತ್ಯೇಕ ಇವಿಎಂ ಯಂತ್ರದ ವ್ಯವಸ್ಥೆ ಮಾಡಲಾಗಿದೆ.