ಮಗನನ್ನು ಕೊಂದು, ನೇಣಿಗೆ ಶರಣಾದ ಅರ್ಚಕನ ಪತ್ನಿ.. ಎಲ್ಲಿ?

  • Publish Date - 7:32 am, Thu, 10 September 20
ಮಗನನ್ನು ಕೊಂದು, ನೇಣಿಗೆ ಶರಣಾದ ಅರ್ಚಕನ ಪತ್ನಿ.. ಎಲ್ಲಿ?

ಕೋಲಾರ: 5 ವರ್ಷದ ಮಗನನ್ನು ಕೊಂದು ತಾಯಿ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಾಲಮುರಗನ್ ದೇವಸ್ಥಾನದ ಬಳಿ ನಡೆದಿದೆ. ಕಿರಣಶ್ರೀ(5) ಹತ್ಯೆಗೈದು ತಾಯಿ ಸಾಯಿ ಸಿಂಧು(35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾಲಮುರಗನ್ ದೇವಸ್ಥಾನದ ಅರ್ಚಕ ಸರವಣ ಪತ್ನಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗನನ್ನು ಕೊಂದು ತಾಯಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Click on your DTH Provider to Add TV9 Kannada