ವೈರಲ್ ಆಗಿದೆ ಬೆಂಗಳೂರು ಖಾಸಗಿ ಆಸ್ಪತ್ರೆ ವೈದ್ಯರ ಕೋವಿಡ್ ಕರೆ, ಏನದು?

ವೈರಲ್ ಆಗಿದೆ ಬೆಂಗಳೂರು ಖಾಸಗಿ ಆಸ್ಪತ್ರೆ ವೈದ್ಯರ ಕೋವಿಡ್ ಕರೆ, ಏನದು?

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಜನ ದಂಗಾಗಿ ಹೋಗಿದ್ದಾರೆ. ಅದರಲ್ಲೂ ಪಿಪಿಇ ಕಿಟ್ ಧರಿಸಿ ಯುದ್ಧಕ್ಕೆ ಸಜ್ಜಾಗಿರುವ ವೈದ್ಯರಿಗೂ ಕೊರೊನಾ, ಭಯ ಹುಟ್ಟಿಸಿಬಿಟ್ಟಿದೆ. ಈ ನಡುವೆ ಬೆಂಗಳೂರು ಖಾಸಗಿ ಆಸ್ಪತ್ರೆ ವೈದ್ಯರ ಕರೆ ವೈರಲ್ ಆಗಿದೆ.

ನಿಜಕ್ಕೂ ನನ್ನ ಕೈ ಕಟ್ಟಿ ಹಾಕಿದಂಗಿದೆ..
ಆಸ್ಪತ್ರೆಗಳಲ್ಲಿ ಸೌಕರ್ಯ ಇದೆ, ಆದರೆ ವೈದ್ಯರು ಮತ್ತು ನರ್ಸ್​ಗಳೇ ಬರ್ತಿಲ್ಲ. ಎಷ್ಟೊಂದು ಜೀವಗಳನ್ನು ಉಳಿಸುವ ಸಾಧ್ಯತೆ ಇದ್ರೂ ಅಸಹಾಯಕತೆ ತೋಡಿಕೊಂಡಿದ್ದಾರೆ ಡಾ. ತಹ ಮತೀನ್. ಎಚ್ಬಿಸಿಎಸ್ ಆಸ್ಪತ್ರೆಯಲ್ಲಿ 30 ಕೊವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡುವ ಸೌಕರ್ಯ ಇದೆ. ಆದರೆ ಚಿಕಿತ್ಸೆ ನೀಡಲು ವೈದ್ಯರು ಮತ್ತು ದಾದಿಯರು ಮುಂದೆ ಬರ್ತಿಲ್ಲ. ಇಡೀ ಆಸ್ಪತ್ರೆಯಲ್ಲಿ ಕೊವಿಡ್ ಟ್ರೀಟ್ಮೆಂಟ್​ಗೆ ಒಬ್ಬ ವೈದ್ಯ ಮತ್ತು ಒಬ್ಬ ಸಹಾಯಕ ಮಾತ್ರ ಇದ್ದಾರೆ. ಕನಿಷ್ಟ ದಿನಕ್ಕೆ 6 ಗಂಟೆಗಳಾದ್ರೂ ಕೆಲಸ ಮಾಡಿ, ಸಹಾಯ ಮಾಡಿ ಎಂದು ಎಲ್ಲಾ ವೈದ್ಯರನ್ನು ಡಾ. ತಹ ಮತೀನ್ ಕೇಳಿಕೊಂಡಿದ್ದಾರೆ.

ಇದು ನಾವು ಮಾನವೀಯತೆ ತೋರಿಸುವ ನಿಜವಾದ ಸಮಯ. ಸೈನಿಕರು, ಪೊಲೀಸರು ಪ್ರತಿಯೊಬ್ಬರು ತಮ್ಮ ಸೇವೆ ಮಾಡಿದ್ದಾರೆ. ಈಗ ನಮ್ಮ ಸೇವೆಗೆ ಟೈಮ್ ಬಂದಿದೆ ದಯವಿಟ್ಟು ಬನ್ನಿ ಚಿಕಿತ್ಸೆ ಕೊಡೋಣ ಮೈ ಫ್ರೆಂಡ್ಸ್ ಅಂತಾ ಅವರು ಬೇಡಿಕೊಂಡಿದ್ದಾರೆ. ಅನೇಕ ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಕೊವಿಡ್ ಕಂಡು ಡಾಕ್ಟರ್ಸ್, ನರ್ಸ್ ಓಡಿ ಹೋಗ್ತಿದ್ದಾರೆ. ಇತ್ತೀಚೆಗಷ್ಟೇ ಮತ್ತೊಂದು ಖಾಸಗಿ ಆಸ್ಪತ್ರೆಯ ನರ್ಸ್ ಗೆ ಕೊರೊನಾ ಎಂದಾಗ ಚಿಕಿತ್ಸೆ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಆದ್ದರಿಂದ ಆಕೆಯನ್ನು ವಿಕ್ಟೋರಿಯಾಗೆ ರವಾನೆ ಮಾಡಲಾಗಿತ್ತು ಎಂದಿದ್ದಾರೆ.