ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ಹಣ ವಸೂಲಿ, ಖಾಸಗಿ ಆಸ್ಪತ್ರೆಗಳ ಬಂಡವಾಳ ಬಯಲು

  • TV9 Web Team
  • Published On - 10:22 AM, 7 Jul 2020
ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ಹಣ ವಸೂಲಿ, ಖಾಸಗಿ ಆಸ್ಪತ್ರೆಗಳ ಬಂಡವಾಳ ಬಯಲು

ಬೆಂಗಳೂರು: ಕೊರೊನಾ ಟೆಸ್ಟ್ ಸಂಬಂಧಿಸಿ ಸರ್ಕಾರದ ಆದೇಶವನ್ನು ಮೀರಿ ಖಾಸಗಿ ಆಸ್ಪತ್ರೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಸಂಗತಿ ಬಯಲಾಗಿದೆ. ಟಿವಿ9 ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಖಾಸಗಿ ಆಸ್ಪತ್ರೆಗಳು ಕೊರೊನಾ ಟೆಸ್ಟ್ ಹೆಸರಿನಲ್ಲಿ ಸರ್ಕಾರ ನಿಗದಿ ಮಾಡಿದ್ದ ದರಕ್ಕಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿವೆ ಎಂಬುವುದು ಬಯಲಾಗಿದೆ.

ಸರ್ಕಾರದ ಆದೇಶಕ್ಕೂ ಖಾಸಗಿ ಆಸ್ಪತ್ರೆಗಳು ಡೋಂಟ್ ಕೇರ್​ ಎನ್ನುತ್ತಿವೆ. ಸರ್ಕಾರದ ಆದೇಶ ಕೇವಲ ಕಾಗದದ ಪತ್ರಕ್ಕೆ ಸೀಮಿತ ಆಯ್ತಾ? ಎಂಬಂತಾಗಿದೆ. ಕೊವಿಡ್ ಟೆಸ್ಟ್ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳ ದಂಧೆ ಶುರು ಮಾಡಿವೆ. ಸರ್ಕಾರ ನಿಗದಿ ಪಡಿಸಿರುವ ಹಣಕ್ಕಿಂತ ಹೆಚ್ಚು ಹಣವನ್ನು ಆಸ್ಪತ್ರೆಗಳು ಪೀಕುತ್ತಿವೆ.

ಕೊರೊನಾ ಟೆಸ್ಟ್​ಗೆ ಸರ್ಕಾರದಿಂದ ₹2,200 ರೂಪಾಯಿ ನಿಗದಿ ಮಾಡಲಾಗಿದೆ. ಆದ್ರೆ ಖಾಸಗಿ ಆಸ್ಪತ್ರೆಗಳು ₹4500 ರಿಂದ 5000 ವಸೂಲಿ ಮಾಡುತ್ತಿವೆ. ಅಷ್ಟೇ ಅಲ್ಲದೇ ಡಾಕ್ಟರ್ ಶುಲ್ಕ ₹650 ರಿಂದ 700 ಕಟ್ಟಬೇಕು. ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಖಾಸಗಿ ಆಸ್ಪತ್ರೆಗಳ ಬಂಡವಾಳ ಬಯಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗಮನ ಹರಿಸಬೇಕಾಗಿದೆ.