IIITB ಹೊಸ ನಿರ್ದೇಶಕರಾಗಿ ಪ್ರೊ. ದೇಬಬ್ರತಾ ದಾಸ್ ನೇಮಕ

21 ವರ್ಷಗಳ ವೃತ್ತಿಪರ ಅನುಭವವಿರುವ ಪ್ರೊ. ದೇಬಬ್ರತಾ ದಾಸ್, 2002 ರಲ್ಲಿ ಐಐಐಟಿಬಿಗೆ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದರು.

  • Publish Date - 2:28 pm, Thu, 7 January 21 Edited By: sadhu srinath
IIITB ಹೊಸ ನಿರ್ದೇಶಕರಾಗಿ ಪ್ರೊ. ದೇಬಬ್ರತಾ ದಾಸ್ ನೇಮಕ
ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು

ಬೆಂಗಳೂರು: ಪ್ರೊ. ದೇಬಬ್ರತಾ ದಾಸ್​ರವರನ್ನು ಇಂಟರ್ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯ ಹೊಸ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಐಐಐಟಿಬಿ (IIITB) ಗುರುವಾರ ತಿಳಿಸಿದೆ.

21 ವರ್ಷಗಳ ವೃತ್ತಿಪರ ಅನುಭವವಿರುವ ಪ್ರೊ. ದೇಬಬ್ರತಾ ದಾಸ್, 2002 ರಲ್ಲಿ ಐಐಐಟಿಬಿಗೆ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದರು. ಅಲ್ಲದೇ 2014 ರಿಂದ 2017ರ ವರೆಗೆ ಅಕಾಡೆಮಿಕ್ ಮತ್ತು ಆರ್ ಆ್ಯಂಡ್ ಡಿ ವಿಭಾಗದ ಡೀನ್ ಆಗಿ ಕಾರ್ಯನಿರ್ವಹಿದ್ದರು.

ಇದೀಗ ಪ್ರೊ. ದೇಬಬ್ರತಾ ದಾಸ್ ಐಐಐಟಿಬಿ ಹೊಸ ನಿರ್ದೇಶಕರಾಗಿ ನೇಮಕವಾಗಿದ್ದು, ಐಐಐಟಿಬಿ ಬೋಧಕವರ್ಗ, ನಿರ್ದೇಶಕರ ಮಂಡಳಿ ಮತ್ತು ಮಧ್ಯಸ್ಥಗಾರರ ಜೊತೆ ಕಾರ್ಯನಿರ್ವಹಿಸುವ ಮೂಲಕ ಸಂಶೋಧನೆಯನ್ನು ಮತ್ತಷ್ಟು ಹೆಚ್ಚಿಸಲು ವಿದ್ಯಾರ್ಥಿ ಮತ್ತು ಬೋಧಕ ವರ್ಗಕ್ಕೆ ಅನುಕೂಲವಾಗುವಂತೆ ಶ್ರಮಿಸುತ್ತಾರೆಂದು ಐಐಐಟಿಬಿ ಸ್ಪಷ್ಟಪಡಿಸಿದೆ.

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಈ ಯುಗದಲ್ಲಿ ಹೆಚ್ಚು ಸವಾಲಿದೆ. ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಸರ್ಕಾರ ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಪ್ರೊ. ದಾಸ್ ಅಭಿಪ್ರಾಯಪಟ್ಟರು.

How to | ವಾಟ್ಸ್ಆ್ಯಪ್ ಸಂದೇಶ ಹೋಮ್ ಸ್ಕ್ರೀನ್​ನಲ್ಲಿ ಪೂರ್ತಿಯಾಗಿ ಕಾಣಿಸದಂತೆ ಮಾಡುವುದು ಹೇಗೆ?