ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ ನಟ ದರ್ಶನ್ರನ್ನ ನಾನು ಕರೆದರೂ ಕಾಂಗ್ರೆಸ್ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಚಿವ ಅಶೋಕ್ ತಿರುಗೇಟು ಕೊಟ್ಟಿದ್ದಾರೆ.
ಕರೆದ ತಕ್ಷಣ ಓಡೋಡಿ ಬರಲು ನಟ ದರ್ಶನ್ ಕರು ಅಲ್ಲ. ನಿಮಗೆ ಇನ್ನೂ ಸಂಜೆ 6 ಗಂಟೆಯವರೆಗೂ ಸಮಯವಿದೆ. ಡಿಕೆಶಿಗೆ ತಾಕತ್ತಿದ್ದರೆ ನಟ ದರ್ಶನ್ರನ್ನ ಪ್ರಚಾರಕ್ಕೆ ಕರೆತರಲಿ ಎಂದು ಡಿ.ಕೆ.ಶಿವಕುಮಾರ್ಗೆ ಸಚಿವ ಆರ್.ಅಶೋಕ್ ಸವಾಲ್ ಹಾಕಿದ್ದಾರೆ.