ಆನೇಕಲ್: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿರುವ ನಟಿಮಣಿಯರಿಗೆ ಬೆಳಕಿನ ಹಬ್ಬ ದೀಪಾವಳಿ ಅವರ ಬದುಕಲ್ಲಿ ಕತ್ತಲು ತಂದಿದೆ. ಆದರೂ ಸಹ ನಟಿಮಣಿಯರು ಜೈಲಿನಲ್ಲೇ ವಿಭಿನ್ನವಾಗಿ ದೀಪಾವಳಿ ಆಚರಿಸುತ್ತಿದ್ದಾರೆ.
ಜೈಲಿನಲ್ಲಿದ್ದ ಪೇಪರ್ಗಳನ್ನು ಬಳಸಿ ಗ್ರೀಟಿಂಗ್ಸ್ ತಯಾರಿಸಿದ ರಾಗಿಣಿ..
ಜೈಲಿನ ವಾತಾವರಣಕ್ಕೆ ಒಗ್ಗಿಕೊಂಡು ದಿನ ಕಳೆಯುತ್ತಿರುವ ನಟಿ ರಾಗಿಣಿ ದೀಪಾವಳಿಯಂದು ಜೈಲಿನ ಅಧಿಕಾರಿಗಳಿಗೆ ವಿಭಿನ್ನವಾಗಿ ಶುಭಾಷಯ ತಿಳಿಸಲು ಮುಂದಾಗಿದ್ದಾರೆ. ಅದರಂತೆ ನಟಿ ರಾಗಿಣಿ ಜೈಲಿನಲ್ಲಿದ್ದ ಪೇಪರ್ಗಳನ್ನು ಬಳಸಿ ಗ್ರೀಟಿಂಗ್ಸ್ ತಯಾರಿಸಿ ಜೈಲು ಅಧಿಕಾರಿಗಳಿಗೆ ವಿಶ್ ಮಾಡಿದ್ದಾರಂತೆ.
ಇನ್ನು ಡ್ರಗ್ಸ್ ಕೇಸ್ನಲ್ಲಿ ಜೈಲು ಸೇರಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜೈಲಿನಲ್ಲಿಯೇ ದೀಪಾವಳಿ ಆಚರಿಸಿದ್ದಾರೆ. ಮಹಿಳಾ ಸೆಲ್ ಮುಂದೆ ದೀಪ ಹಚ್ಚಿ ಹಬ್ಬ ಆಚರಣೆ ಮಾಡಿದ್ದಾರೆ. ಅಲ್ಲದೆ ಇಂದು ಜೈಲಿನ ಒಳಗೆ ಇರುವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮಾಡಿದ್ದಾರೆ.