ಬೆಂಗಳೂರು: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಈಗಾಗಲೇ ರಾಜಕೀಯ ಪ್ರವೇಶ ಘೋಷಿಸಿದ್ದಾರೆ. ಅದರ ಅಂಗವಾಗಿ ತಮ್ಮ ಅಗ್ರಜನನ್ನು ಭೇಟಿ ಮಾಡಲು ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ (ಡಿ. 6) ಬೆಂಗಳೂರಿಗೆ ಬಂದಿದ್ದರು. ಹಿರಿಯ ಸಹೋದರ ನಿವಾಸಕ್ಕೆ ಗೌಪ್ಯವಾಗಿ ಆಗಮಿಸಿದ್ದರು.
ನಟ ರಜನಿಕಾಂತ್ ರಾಜಕೀಯಕ್ಕೆ ಕಾಲಿಡುವ ಮುನ್ನ ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ಅವರ ನಿವಾಸಕ್ಕೆ ಗೌಪ್ಯವಾಗಿ ಆಗಮಿಸಿ, ಆಶೀರ್ವಾದ ಪಡೆದರು.
ಆರೋಗ್ಯ ಸರಿಯಿಲ್ಲವೆಂದು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ಹಿಂದೆಮುಂದೆ ಯೋಚಿಸುತ್ತಿದ್ದ ರಜನಿಕಾಂತ್ ಸದ್ಯದಲ್ಲೇ ಹೊಸ ರಾಜಕೀಯ ಪಕ್ಷದೊಂದಿಗೆ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಅದಕ್ಕೂ ಮುನ್ನ ಹಿರಿಯಣ್ಣ ಸೇರಿದಂತೆ ಕುಟುಂಬದ ಇತರೆ ಹಿರಿಯರ ಆಶೀರ್ವಾದ ಪಡೆದರು.
ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ.. ಇಂದಿನ ಸಭೆಯಲ್ಲಿ ಏನೇನಾಯ್ತು?