ರಜನೀಕಾಂತ್​ಗೆ 70ರ ಹುಟ್ಟುಹಬ್ಬ; Dear Birthday, Happy RAJINIKANTH to you ಅಂದ ಅಭಿಮಾನಿ

ಬಾಲಿವುಡ್​ನಿಂದ ಹಾಲಿವುಡ್​ಗೆ ಹಾಲಿವುಡ್​ನಿಂದ ಸ್ಯಾಂಡಲ್​ವುಡ್ ವರೆಗೆ ಫೇಮಸ್ ಆಗಿರುವ ನಟ ರಜನೀಕಾಂತ್ ಅಸಲಿಗೆ ದಕ್ಷಿಣ ಭಾಗದ ಜನರಿಗೆ ಬರಿ ನಾಯಕ ನಟ ಮಾತ್ರ ಅಲ್ಲ ಅದಕ್ಕಿಂತ ಹೆಚ್ಚು. ಸದ್ಯ ರಜನೀಕಾಂತ್ ತಮಿಳುನಾಡಿನ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದು, ಎಲ್ಲರಲ್ಲೂ ಕುತೂಹಲ ಸೃಷ್ಟಿಸಿದೆ.

ರಜನೀಕಾಂತ್​ಗೆ 70ರ ಹುಟ್ಟುಹಬ್ಬ; Dear Birthday, Happy RAJINIKANTH to you ಅಂದ ಅಭಿಮಾನಿ
ರಜನೀಕಾತ್​
preethi shettigar

|

Dec 12, 2020 | 11:07 AM

ಚೆನ್ನೈ: ನಟ ರಜನೀಕಾಂತ್ ಅಂದ್ರೆ ಸಾಕು ನಮ್ಮ ತಲೈವಾ ಎನ್ನುವಷ್ಟು ಫೇಮಸ್ ಇವ್ರು, ಟಾಲಿವುಡ್ ಸಿನಿಮಾ ನಟನಾದ್ರು ಇಂಡಿಯಾದಲ್ಲೇ ನಂಬರ್ ಒನ್ ನಾಯಕ ನಟ. ಹೌದು ಕಂಡಕ್ಟರ್ ಆದೋರು ಸಿನಿಮಾ ನಟನಾಗುವುದು ಅಂದ್ರೇ ಅಷ್ಟು ಸುಲಭದ ಮಾತಲ್ಲ ಬಿಡಿ. ಸದ್ಯ ರಾಜಕೀಯದಲ್ಲೂ ಇವರು ಟ್ರೇಂಡ್ ಸೃಷ್ಟಿಮಾಡಿದ್ದು, ಇದೀಗ ರಜನೀಕಾಂತ್​ ಅವರನ್ನ ಹುಡುಕಿಕೊಂಡು ಅವರ ಬರ್ತ್​ಡೇ ಕೂಡ ಬಂದಿದೆ.

ಬಣ್ಣ ಮುಖ್ಯ ಅಲ್ಲ ಪ್ರತಿಭೆ ಮಾತ್ರ ಮುಖ್ಯ ಎಂದು ತೋರಿಸಿಕೊಟ್ಟ ಸೂಪರ್ ಸ್ಟಾರ್​ ರಜನೀಕಾಂತ್ ಸದ್ಯ70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರ ಫ್ಯಾನ್ಸ್​ಗಳಂತೂ ತಮ್ಮ ನೆಚ್ಚಿನ ನಟನ ಬರ್ತ್​ಡೇಗೆ ವಿಭಿನ್ನ ರೀತಿಯಲ್ಲಿ ವಿಷ್ ಮಾಡುತ್ತಿದ್ದಾರೆ. ಒಬ್ಬರಂತೂ Dear Birthday, Happy RAJINIKANTH to you ಅಂದಿದ್ದಾರೆ.

ರಜನೀಕಾಂತ್ ಕುಟುಂಬ

ಬಾಲಿವುಡ್​ನಿಂದ ಹಾಲಿವುಡ್​ಗೆ ಹಾಲಿವುಡ್​ನಿಂದ ಸ್ಯಾಂಡಲ್​ವುಡ್ ವರೆಗೆ ಫೇಮಸ್ ಆಗಿರುವ ನಟ ರಜನೀಕಾಂತ್ ಅಸಲಿಗೆ ದಕ್ಷಿಣ ಭಾಗದ ಜನರಿಗೆ ಬರಿ ನಾಯಕ ನಟ ಮಾತ್ರ ಅಲ್ಲ ಅದಕ್ಕಿಂತ ಹೆಚ್ಚು. ಸದ್ಯ ರಜನೀಕಾಂತ್ ತಮಿಳುನಾಡಿನ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಆದ ನೂತನ ಪಕ್ಷದೊಂದಿಗೆ ತಲೈವಾ ಸ್ಪರ್ಧಿಸಲಿದ್ದಾರೆ ಎನ್ನುವ ವಿಷಯವೇ ಜನರನ್ನು ಕತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ರಜನೀಕಾಂತ್ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್​ನಲ್ಲಿ ಶುಭಾಶಯ ಕೋರಿದ್ದು, ಆತ್ಮೀಯ ರಜನೀಕಾಂತ್ ಜಿ, ನಿಮಗೆ ಜನ್ಮದಿನದ ಶುಭಾಶಯಗಳು, ನೀವು ಸುದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸುವಂತಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ರಜನೀಕಾಂತ್ ಹುಟ್ಟುಹಬ್ಬಕ್ಕೆ ಮಕ್ಕಳಾದ ಸೌಂದರ್ಯ ಮತ್ತು ಐಶ್ವರ್ಯ ಕೂಡ ವಿಷ್ ಮಾಡಿದ್ದು, ತಂದೆಯ ಜೊತೆಗಿನ ಅಮೂಲ್ಯವಾದ ಫೋಟೊಗಳನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ರಜನೀಕಾಂತ್ ಅಳಿಯ ಧನುಷ್ ಕೂಡ ಟ್ವಿಟರ್​ನಲ್ಲಿ ಮಾವನಿಗೆ ಹುಟ್ಟುಹಬ್ಬದ ಶುಭಾಶಯಗಳು ತಲೈವಾ ಎಂದು ಶುಭಕೋರಿದ್ದಾರೆ.

ಮತ್ತೆ ಖಾಕಿ ತೊಟ್ಟು ಅಬ್ಬರಿಸ್ತಿದ್ದಾರೆ ಸೂಪರ್​ಸ್ಟಾರ್, ವಿಮಾನದಲ್ಲೂ ಅಬ್ಬರಿಸಿದ ತಲೈವಾ ಪೋಸ್ಟರ್

Follow us on

Related Stories

Most Read Stories

Click on your DTH Provider to Add TV9 Kannada