ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಟ ರಮೇಶ್ ಅರವಿಂದ್ ಇಂದು ಬೆಳಗ್ಗೆ ಭೇಟಿಯಾಗಿದ್ದು, ಅವರು ತಮ್ಮ ಮಗಳ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.
ಜನವರಿ 16 ರಂದು ರಮೇಶ್ ಅರವಿಂದ್ ಪುತ್ರಿ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯಲಿದ್ದು, ಈ ನಿಟ್ಟಿನಲ್ಲಿ ಚಿತ್ರರಂಗದ ಗಣ್ಯರು, ಆಪ್ತರು ಮತ್ತು ರಾಜಕಾರಣಿಗಳನ್ನ ಆಹ್ವಾನಿಸಲಾಗಿದೆ. ಹೀಗಾಗಿ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಅಮೇಶ್ ಅರವಿಂದ್ ಕುಟುಂಬ ಸಮೇತರಾಗಿ ಬಂದು ಭೇಟಿ ಮಾಡಿದ್ದು, ಆರತಕ್ಷತೆಗೆ ಆಹ್ವಾನಿಸಿದ್ದಾರೆ.
Ramesh Arvind daughter