ಮೈಸೂರು: ಬೆಂಗಳೂರಿಗೆ ಡ್ರಾಪ್ ಕೊಡುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು ಟೆಕ್ಕಿಯ ಬಳಿ ಸುಲಿಗೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಟೆಕ್ಕಿ ಮಧುವಿಕಾಸ್ಗೆ ಚಾಕು ತೋರಿಸಿ ಬೆದರಿಕೆ ಹಾಕಿ ಚಿನ್ನ ಕಸಿದುಕೊಂಡಿದ್ದಾರೆ. ನಂತರ ಬಲವಂತವಾಗಿ ಎಟಿಎಂನಿಂದ 40 ಸಾವಿರ ಹಣ ಡ್ರಾ ಮಾಡಿಸಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.
ಡ್ರಾಪ್ ಕೊಡುವ ನೆಪದಲ್ಲಿ ದರೋಡೆ:
ಚಾಕು ತೋರಿಸಿ ಬೆದರಿಕೆ:
ಬೇಗ ಬೆಂಗಳೂರಿಗೆ ತಲುಪುವ ಉದ್ದೇಶದಿಂದ ಮಧುವಿಕಾಸ್ ಕಾರು ಹತ್ತಿದ್ದಾರೆ. ಕೊಲಂಬಿಯಾ ಏಷಿಯಾ ಬಳಿ ರಿಂಗ್ ರಸ್ತೆ ಮೂಲಕ ಕೆ.ಆರ್.ಎಸ್ ರಸ್ತೆ ಕಡೆಗೆ ತಿರುಗಿಸಿದ ದುಷ್ಕರ್ಮಿಗಳು, ಅಲ್ಲೇ ಕಾರು ನಿಲ್ಲಿಸಿ ಚಾಕು ತೋರಿಸಿ ಉಂಗುರ ಮತ್ತು ಸರವನ್ನು ಕಸಿದುಕೊಂಡಿದ್ದಾರೆ. ನಂತರ ಒಂಟಿಕೊಪ್ಪಲಿನ HDFC ಬ್ಯಾಂಕ್ಗೆ ಸೇರಿದ ಎಟಿಎಂನಲ್ಲಿ 20 ಸಾವಿರ ಹಣ ಡ್ರಾ ಮಾಡಿ, ಬಳಿಕ ಅಶೋಕ ರಸ್ತೆಯಲ್ಲಿರುವ ಕೊಟಾಕ್ ಮಹೀಂದ್ರ ಎಟಿಎಂನಲ್ಲಿ 20 ಸಾವಿರ ಹಣ ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.