ದರೋಡೆಗೆ ಸ್ಕೆಚ್​ ಹಾಕಿದ್ದ ನಟೋರಿಯಸ್​ ರೌಡಿ RX ರವಿ ಬಂಧನ

  • TV9 Web Team
  • Published On - 10:35 AM, 23 Jul 2020
ದರೋಡೆಗೆ ಸ್ಕೆಚ್​ ಹಾಕಿದ್ದ ನಟೋರಿಯಸ್​ ರೌಡಿ RX ರವಿ ಬಂಧನ

ಬೆಂಗಳೂರು: ರಾಜಧಾನಿಯಲ್ಲಿ ನಟೋರಿಯಸ್ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಖಾಕಿ ಪಡೆ ಇದೀಗ ಮತ್ತಷ್ಟು ರೌಡಿಗಳನ್ನ ಬಂಧಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಸಿಸಿಬಿ ಪೊಲೀಸರು ಇಂದು RX ರವಿ ಮತ್ತು ಆತನ ಗ್ಯಾಂಗ್​ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ ರವಿ ಹಾಗೂ ಆತನ ಸಹಚರರಾದ ಶರತ್ ಬಾಬು, ದೀಪಕ್ ಕುಮಾರ್ ಸೇರಿ ಆರು ಜನರನ್ನು ಅರೆಸ್ಟ್​ ಮಾಡಿದ್ದಾರೆ. ಸೂಕ್ತ ಮಾಹಿತಿ ಆಧರಿಸಿ ಆರೋಪಿಗಳನ್ನ ಬಂಧಿಸಿದ CCB ಪೊಲೀಸರು ಅವರಿಂದ ಮೂರು ಲಾಂಗು, ಚಾಕು ಹಾಗೂ ಒಂದು ಖಾರದ ಪುಡಿ ಪೊಟ್ಟಣವನ್ನ ವಶಕ್ಕೆ ಪಡೆದಿದ್ದಾರೆ.

ಜೊತೆಗೆ ಕೃತ್ಯಕ್ಕೆ ಬಳಸಲು ಸಜ್ಜಾಗಿಸಿದ್ದ ವಾಹನವೊಂದನ್ನು ಸಹ ಸೀಜ್ ಮಾಡಿದ್ದಾರೆ. RX ರವಿ ಗ್ಯಾಂಗ್​ ರಸ್ತೆಯಲ್ಲಿ ಬರೋರನ್ನು ತಡೆದು ದರೋಡೆ ಮಾಡಲು ಸ್ಕೆಚ್​ ಹಾಕಿದ್ರಂತೆ. ಜೊತೆಗೆ, ಆರೋಪಿಗಳ ವಿರುದ್ಧ ನಗರದ ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣ ಸಹ ದಾಖಲಾಗಿತ್ತು.