ಸಕ್ರೆಬೈಲು ಕ್ಯಾಂಪ್​ನಲ್ಲಿ ಆನೆ ಪ್ರಿಯರಿಗೊಂದು ನೆನಪಿನ ಕಾಣಿಕೆ..

ಸಕ್ರೆಬೈಲು ಕ್ಯಾಂಪ್​ನಲ್ಲಿ ಆನೆ ಪ್ರಿಯರಿಗೊಂದು ನೆನಪಿನ ಕಾಣಿಕೆ..

ಶಿವಮೊಗ್ಗ: ಮಲೆನಾಡು ಅಂದ್ರೆ ಸಾಕು ಹಚ್ಚ ಹಸಿರಿನಿಂದ ಕೂಡಿರುವ ದಟ್ಟ ಅರಣ್ಯವೇ ಎಲ್ಲರ ಕಣ್ಮುಂದೆ ಸುಳಿಯುವುದು. ಅದರಲ್ಲೂ ಜುಳು ಜುಳು ಹರಿಯುವ ನದಿಗಳ ನಿನಾದವನ್ನ ಆಲಿಸುವ ಜೊತೆಗೆ, ಮಲೆನಾಡಿನ ಕಾಡಿನಲ್ಲಿ ಅಲೆದಾಡೋ ಪ್ರಾಣಿಗಳನ್ನು ನೋಡೋದೆ ಕಣ್ಣಿಗೆ ಹಬ್ಬ. ಅದರಲ್ಲೂ ಜಿಲ್ಲೆಯಲ್ಲಿ ಹರಿಯುವ ತುಂಗಾ ನದಿಯ ದಡದಲ್ಲಿರುವ ಸಕ್ರೆಬೈಲು ಆನೆ ಬಿಡಾರ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಕೊರೊನಾದಿಂದಾಗಿ ಆನೆಬಿಡಾರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಹಾಗಾಗಿ, ಪ್ರವಾಸಿಗರನ್ನು ತನ್ನತ್ತ ಮತ್ತೊಮ್ಮೆ ಸೆಳೆಯಲು ಇಲ್ಲಿನ ಅಧಿಕಾರಿಗಳು ಬಿಡಾರದಲ್ಲಿರುವ ಆನೆಗಳ ಬಗ್ಗೆ ಮಾಹಿತಿ […]

sadhu srinath

|

Aug 22, 2020 | 7:08 PM

ಶಿವಮೊಗ್ಗ: ಮಲೆನಾಡು ಅಂದ್ರೆ ಸಾಕು ಹಚ್ಚ ಹಸಿರಿನಿಂದ ಕೂಡಿರುವ ದಟ್ಟ ಅರಣ್ಯವೇ ಎಲ್ಲರ ಕಣ್ಮುಂದೆ ಸುಳಿಯುವುದು. ಅದರಲ್ಲೂ ಜುಳು ಜುಳು ಹರಿಯುವ ನದಿಗಳ ನಿನಾದವನ್ನ ಆಲಿಸುವ ಜೊತೆಗೆ, ಮಲೆನಾಡಿನ ಕಾಡಿನಲ್ಲಿ ಅಲೆದಾಡೋ ಪ್ರಾಣಿಗಳನ್ನು ನೋಡೋದೆ ಕಣ್ಣಿಗೆ ಹಬ್ಬ.

ಅದರಲ್ಲೂ ಜಿಲ್ಲೆಯಲ್ಲಿ ಹರಿಯುವ ತುಂಗಾ ನದಿಯ ದಡದಲ್ಲಿರುವ ಸಕ್ರೆಬೈಲು ಆನೆ ಬಿಡಾರ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಕೊರೊನಾದಿಂದಾಗಿ ಆನೆಬಿಡಾರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಹಾಗಾಗಿ, ಪ್ರವಾಸಿಗರನ್ನು ತನ್ನತ್ತ ಮತ್ತೊಮ್ಮೆ ಸೆಳೆಯಲು ಇಲ್ಲಿನ ಅಧಿಕಾರಿಗಳು ಬಿಡಾರದಲ್ಲಿರುವ ಆನೆಗಳ ಬಗ್ಗೆ ಮಾಹಿತಿ ಒದಗಿಸುವಂಥ ನೆನಪಿನ ಕಾಣಿಕೆಗಳನ್ನು ಮಾರುವ ಮಳಿಗೆಯೊಂದನ್ನ ತೆರೆದಿದೆ.

ಅಷ್ಟೇ ಅಲ್ಲ ಸಕ್ರೆಬೈಲು ಅಭಯಾರಣ್ಯದ ಲಾಂಛನವಿರುವ ಟೀ-ಶರ್ಟ್, ಕ್ಯಾಪ್, ಗ್ಲಾಸ್ ಹಾಗೂ ಬಗೆ ಬಗೆಯ ಆನೆಗಳಿಂದ ಕೂಡಿದ ಫೋಟೋಗಳಿರುವ ಮಳಿಗೆಗಳನ್ನೂ ಸಹ ತೆರೆಯಲಾಗಿದೆ. ಈ ಹೊಸ ಪ್ರಯೋಗ ಯಶಸ್ಸು ಕಂಡಿದೆ. ಸಕ್ರೆಬೈಲಿಗೆ ಬರುತ್ತಿರುವ ಪ್ರವಾಸಿಗರು ಮೊಮೆಂಟೋ ಶಾಪ್‌ನಲ್ಲಿ ಇಲ್ಲಿನ ನೆನಪಿಗಾಗಿ ಏನಾದರೊಂದು ಖರೀದಿ ಮಾಡಿ ಖುಷಿ ಪಡ್ತಿದ್ದಾರೆ.-ಬಸವರಾಜ್ ಯರಗಣವಿ 

Follow us on

Related Stories

Most Read Stories

Click on your DTH Provider to Add TV9 Kannada