Photos ಸ್ಯಾಂಡಲ್​ವುಡ್ ತಾರೆಯರ ಮನೆಯಲ್ಲಿ ದೀಪಾವಳಿ ಸಂಭ್ರಮದ ಒಂದು ಝಲಕ್​!

  • TV9 Web Team
  • Published On - 14:19 PM, 16 Nov 2020

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಮನೆ ಮನೆಯಲ್ಲಿ ದೀಪದ ಬೆಳಕು ಹಾಗೂ ಗಲ್ಲಿಗಲ್ಲಿಯಲ್ಲೂ ಪಟಾಕಿ ಸದ್ದೇ ಕೇಳಿಬರೋದು. ಮನೆಯಂಗಳದಾಚೆ ರಂಗೋಲಿಯ ರಂಗು ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಹೆಂಗಳೆಯರು ಅಂದದ ದಿರಿಸುಗಳಲ್ಲಿ ಚಂದವಾಗಿ ಕಾಣುತ್ತಾ ಸಿಹಿ ತಯಾರಿಸಿ ಸಂಭ್ರಮಿಸುತ್ತಾರೆ.


ಇದೇ ರೀತಿ ಚಂದನವನದಲ್ಲಿ ಹಬ್ಬದ ಸಂಭ್ರಮ ಜೋರಾಗಿದೆ. ಸ್ಯಾಂಡಲ್​ವುಡ್ ತಾರೆಯರು ತಮ್ಮ ಮನೆಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ನಟ ಗಣೇಶ್, ಸಾಯಿಕುಮಾರ್, ಮಾಲಾಶ್ರೀ ‌, ಅರ್ಜುನ್ ಸರ್ಜಾ, ರಮೇಶ್ ಅರವಿಂದ್, ಚಂದನ್ ಶೆಟ್ಟಿ, ನಿಖಿಲ್, ಮೇಘನಾ ಗಾಂವಕರ್​, ಅದಿತಿ ಪ್ರಭುದೇವ ಸೇರಿದಂತೆ ಸ್ಯಾಂಡಲ್​ವುಡ್ ತಾರೆಯರು ವೈವಿಧ್ಯಮಯವಾದ ದೀಪಾವಳಿಯನ್ನು ಆಚರಿಸಿ ಹಬ್ಬದ ಸಂಭ್ರಮ ಸಡಗರದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟರ ಫೋಟೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.