ಜೈಲ್ ರಿಟರ್ನ್ಡ್​​ ಸಂಜನಾ ಗಲ್ರಾನಿ ಸಹೋದರಿ ಜೊತೆ ಪ್ರತ್ಯಕ್ಷರಾಗಿ.. ಹೇಳಿದ್ದೇನು?

ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆಯಾಗಿರುವ ಸಂಜನಾ ಗಲ್ರಾನಿ, ಇದೀಗ ಕುಟುಂಬದವರು, ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಜೈಲ್ ರಿಟರ್ನ್ಡ್​​ ಸಂಜನಾ ಗಲ್ರಾನಿ ಸಹೋದರಿ ಜೊತೆ ಪ್ರತ್ಯಕ್ಷರಾಗಿ.. ಹೇಳಿದ್ದೇನು?
ಸಂಜನಾ ಗಲ್ರಾನಿ
Lakshmi Hegde

|

Jan 02, 2021 | 6:41 PM

ಬೆಂಗಳೂರು: ಡ್ರಗ್ಸ್​ ಕೇಸ್​ನಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಇತ್ತೀಚೆಗಷ್ಟೇ ಅನಾರೋಗ್ಯದ ಕಾರಣದಿಂದ ಹೈಕೋರ್ಟ್​ನಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂಬ ಕಾರಣಕ್ಕೆ ಕೋರ್ಟ್ ಡಿಸೆಂಬರ್​ 12ರಂದು ಜಾಮೀನು ನೀಡಿತ್ತು. ಈ ಮಧ್ಯೆ ನಟಿ ಸಂಜನಾ ಗಲ್ರಾನಿ ಕಳೆದ ವಾರ ವಾಣಿ ವಿಲಾಸ್​ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆದುಬಂದಿದ್ದಾರೆ.

ಸಹೋದರಿ ಜೊತೆ ಇನ್ಸ್​​ಟಾಗ್ರಾಂನಲ್ಲಿ ಪ್ರತ್ಯಕ್ಷರಾದ ಸಂಜನಾ ಗಲ್ರಾನಿ 90 ದಿನಗಳ ಕಾಲ ಜೈಲಿನಲ್ಲಿದ್ದು ಹೊರಬಂದಿರುವ ಸಂಜನಾ ಗಲ್ರಾನಿ ಇಂದು ಇನ್ಸ್​​ಟಾಗ್ರಾಂನಲ್ಲಿ ಪ್ರತ್ಯಕ್ಷವಾಗಿದ್ದಾರೆ. ತಮ್ಮ ಇನ್​ಸ್ಟಾ ಅಕೌಂಟ್​ನಲ್ಲಿ ಮೂರುಪೋಸ್ಟ್​ಗಳನ್ನು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ಎರಡು ಫೋಟೋಗಳು ತಮ್ಮ ಸೋದರಿ ನಿಕ್ಕಿ ಗಲ್ರಾನಿ ಜತೆಗಿನದ್ದು.

ಹಳೆಯ ಪೋಸ್ಟ್​ ಹಾಕಿ ಹೊಸ ವರ್ಷದ ಶುಭಾಶಯ ಕೋರಿದ ಸಂಜನಾ! ಒಂದು ಫೋಟೋದಲ್ಲಿ ಸಂಜನಾ ಮತ್ತು ನಿಕ್ಕಿ ಇಬ್ಬರೂ ಒಂದೇ ತರಹದ ಉಡುಪು ಧರಿಸಿದ್ದಾರೆ.. ಹಾಗೇ ಇನ್ನೊಂದು ಫೋಟೋದಲ್ಲಿ ಇವರಿಬ್ಬರೂ ಸುಂದರವಾಗಿ ಅಲಂಕಾರ ಮಾಡಿಕೊಂಡು ಫೋಟೋಕ್ಕೆ ಪೋಸ್​ ನೀಡಿದ್ದಾರೆ. ಈ ಫೋಟೋಕ್ಕೆ ಸಂಜನಾ ಅವರು ಸಹೋದರಿಗಿಂತ ಉತ್ತಮ ಸ್ನೇಹಿತರಿಲ್ಲ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಹಾಗೇ ಸಂಜನಾರ ಫ್ಯಾನ್​​ಪೇಜ್​ವೊಂದು ಪೋಸ್ಟ್ ಮಾಡಿದ್ದ ತಮ್ಮ ಮಾದಕ ಫೋಟೋವನ್ನು ಸ್ಟೋರಿಯಲ್ಲಿ ರೀಪೋಸ್ಟ್ ಮಾಡಿಕೊಂಡಿರುವ ಸಂಜನಾ ಗಲ್ರಾನಿ, ಎಲ್ಲರಿಗೂ ಹ್ಯಾಪಿ ನ್ಯೂ ಇಯರ್​ ಎಂದಿದ್ದಾರೆ.

ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆಯಾಗಿರುವ ಸಂಜನಾ ಗಲ್ರಾನಿ, ಇದೀಗ ಕುಟುಂಬದವರು, ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada