ಶಶಿಕಲಾಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ; ಅವರ ಆರೋಗ್ಯ ಸ್ಥಿರವಾಗಿದೆ -ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್​ ಕೃಷ್ಣ ಮಾಹಿತಿ

ವಿ.ಕೆ.ಶಶಿಕಲಾ ನಟರಾಜನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್​ ಕೃಷ್ಣ ಮಾಹಿತಿ ನೀಡಿದ್ದಾರೆ.

  • TV9 Web Team
  • Published On - 21:19 PM, 21 Jan 2021
ಶಶಿಕಲಾಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ; ಅವರ ಆರೋಗ್ಯ ಸ್ಥಿರವಾಗಿದೆ -ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್​ ಕೃಷ್ಣ ಮಾಹಿತಿ
ವಿ.ಕೆ.ಶಶಿಕಲಾ ನಟರಾಜನ್

ಬೆಂಗಳೂರು: ವಿ.ಕೆ.ಶಶಿಕಲಾ ನಟರಾಜನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್​ ಕೃಷ್ಣ ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ 2.30ರ ಸುಮಾರಿಗೆ ಬೌರಿಂಗ್‌ ಆಸ್ಪತ್ರೆಯಿಂದ ಶಶಿಕಲಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಈ ವೇಳೆ, ವಿ.ಕೆ.ಶಶಿಕಲಾ ನಟರಾಜನ್‌ಗೆ ವಿವಿಧ ಆರೋಗ್ಯ ತಪಾಸಣೆ ನಡೆಸಲಾಯಿತು ಎಂದು ಡಾ.ರಮೇಶ್ ಕೃಷ್ಣ ಹೇಳಿದರು.

ಜೊತೆಗೆ, ಅವರಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯಿಡ್​ ಇದೆ. ಹಾಗಾಗಿ, ಶಶಿಕಲಾ ನಟರಾಜನ್‌ಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್‌ ಕೃಷ್ಣ ಮಾಹಿತಿ ಕೊಟ್ಟಿದ್ದಾರೆ.

ಅಪರಾಧಿ ವಿ.ಕೆ.ಶಶಿಕಲಾ ನಟರಾಜನ್​ಗೆ ಕೊರೊನಾ ಲಕ್ಷಣ
ಇದೀಗ, ವಿ.ಕೆ.ಶಶಿಕಲಾ ನಟರಾಜನ್​ಗೆ ಕೊರೊನಾ ಲಕ್ಷಣ ಪತ್ತೆಯಾಗಿದೆ ಎಂಬ ಮಾಹಿತಿ ದೊರೆತಿದೆ. ಅಚ್ಚರಿಯ ಸಂಗತಿಯೆಂದರೆ, RTPCR ಟೆಸ್ಟ್​ನಲ್ಲಿ ಶಶಿಕಲಾ ಕೊವಿಡ್ ವರದಿ ನೆಗೆಟಿವ್​ ಬಂದಿದೆ.

ಬೌರಿಂಗ್​ನಲ್ಲಿ RTPCR ಟೆಸ್ಟ್ ಗೆ ಸ್ವ್ಯಾಬ್ ಪಡೆಯಲಾಗಿತ್ತು. ಆದರೆ, ವರದಿ ನೆಗೆಟಿವ್ ಬಂದಿತ್ತು. ಇದೀಗ, ವಿಕ್ಟೋರಿಯಾದಲ್ಲಿ ಸಿ.ಟಿ ಸ್ಕ್ಯಾನ್​ನಲ್ಲಿ ಪಾಸಿಟಿವ್ ಬಂದಿದೆ ಎಂದು ವಿಕ್ಟೋರಿಯಾ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹಾಗಾಗಿ, ಅವರಿಗೆ ಮತ್ತೊಂದು ಬಾರಿ RTPCR ಟೆಸ್ಟ್ ಮಾಡಲು ನಿರ್ಧಾರ ಮಾಡಲಾಗಿದೆ.

ಬೌರಿಂಗ್ ಆಸ್ಪತ್ರೆಯಲ್ಲಿ ಶಶಿಕಲಾರನ್ನು ಭೇಟಿ ಮಾಡಲು ಬಂದ ವಕೀಲರಿಗೆ ಅವಕಾಶ ನಿರಾಕರಿಸಿದ ಪೊಲೀಸರು