ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಇದೇ ತಿಂಗಳ 10ರಂದು 7 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಚಾರ್ಜ್ ಶೀಟ್ನಲ್ಲಿ ಪ್ರಕರಣದ ಅಸಲಿ ಕಾರಣ ಹಾಗೂ ಪಾತ್ರವನ್ನು NIA ಬಿಚ್ಚಿಟ್ಟಿದೆ. NIA, ಕೇಸ್ ಸಂಬಂಧ ಈವರೆಗೂ 247 ಮಂದಿ ಆರೋಪಿಗಳನ್ನ ಬಂಧಿಸಿದೆ. NIA ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ SDPI ಅಸಲಿ ಉದ್ದೇಶ ಬಯಲಾಗಿದೆ. ಅಸಲಿಗೆ SDPI ನ ಉದ್ದೇಶ ಏನಾಗಿತ್ತು. ಆಗಸ್ಟ್ 11ರ ಘಟನೆಯ ಅಸಲಿ ಕಾರಣ ಏನು..? ಉದ್ದೇಶ ಪೂರ್ವಕವಾಗಿ ಎಸ್ ಡಿಪಿಐ ಸದಸ್ಯರಿಂದ ಸಂಚು ನಡೆದಿತ್ತಾ..? ಈ ಎಲ್ಲಾ ವಿಚಾರಗಳು ಚಾರ್ಚ್ ಶೀಟ್ನಲ್ಲಿ ಉಲ್ಲೇಖವಾಗಿದೆ.
NIA ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿರುವಂತೆ, SDPI ಸಂಘಟನೆ, PSI ಹಿರಿಯ ಮುಖಂಡರಿಂದ ರಚಿತವಾಗಿದೆ. ಕೆ.ಜಿಹಳ್ಳಿ ಹಾಗೂ ಡಿ.ಜೆಹಳ್ಳಿಯಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಈ ಸಂಘಟನೆ ತಂತ್ರ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿಯ ಹಲವು ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗಿತ್ತು. ರಸ್ತೆ ದುರಸ್ಥೆ, ನೀರಿನ ಸಮಸ್ಯೆ ಸೇರಿದಂತೆ ಹಲವು ವಿಚಾರವಾಗಿ SDPI ಸ್ಥಳೀಯವಾಗಿ ಪ್ರತಿಭಟಿಸಿತ್ತು. ಕೋವಿಡ್ ಸಂದರ್ಭದಲ್ಲೂ SDPI ಸ್ಥಳೀಯ ಪ್ರದೇಶದಲ್ಲಿ ಕೆಲಸ ಮಾಡಿತ್ತು. ಕಿಟ್ಗಳನ್ನು ಒದಗಿಸುವುದು, ಕೊವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವುದು, ಇದರ ಜೊತೆಗೆ ಕೇಂದ್ರ ಸರ್ಕಾರ ಕೆಲವು ನಿರ್ಧಾರಗಳಾದ CAA, NRC, ಬಾಬ್ರಿ ಮಸೀದಿ ತೀರ್ಪು, ರಾಮಜನ್ಮಭೂಮಿಯ ಭೂ ಪೂಜೆ ವಿರುದ್ಧ ಪ್ರತಿಭಟಿಸಿದ್ದರು.
ತಳಮಟ್ಟದಿಂದಲೇ ಹಲವು ಚಟುವಟಿಕೆ ನಡೆಸಿತ್ತು..
ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಅಧಿಕವಾಗಿ ಮುಸ್ಲಿಂ ಸಮುದಾಯದವರಿಂದ ಕೂಡಿದ ಪ್ರದೇಶವಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಪಾರುಪತ್ಯಕ್ಕಾಗಿ SDPI ಹಲವು ತಂತ್ರ ರೂಪಿಸಿತ್ತು. ಗ್ರಾಸ್ ಲೆವೆಲ್ನಿಂದಲೇ ತಮ್ಮ ಹಲವು ಚಟುವಟಿಕೆ ನಡೆಸಿತ್ತು. ಇದರ ಜೊತೆಗೆ ಕಾರ್ಪೊರೇಟರ್ ಅಧಿಕಾರ ಪಡೆಯಲು ತಂತ್ರ ರೂಪಿಸಿತ್ತು ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಮುಸ್ಲಿಂ ಸಮುದಾಯದ ಹೆಚ್ಚಿನ ಬೆಂಬಲದಿಂದ ಕಾಂಗ್ರೆಸ್ ಅಧಿಕಾರ ವಹಿಸಿತ್ತು. ಈ ಹಿಂದೆ ಆ ಪ್ರದೇಶದಲ್ಲಿ ಜೆಡಿಎಸ್ ಅಧಿಕಾರವಹಿಸಿತ್ತು. ಅತಿ ಹೆಚ್ಚು ಮುಸ್ಲಿಂ ಸಮುದಾಯದ ಜನ ಇರುವುದರಿಂದ ಹೆಚ್ಚು ಪ್ರಚಾರ ನಡೆಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡಿತ್ತು.
ಅದೇ ರೀತಿ ಸಂಘಟನೆಯ ಮುಖಾಂತರ ಹಲವರ ಬೆಂಬಲ ಗಳಿಸಿತ್ತು. ಯಾವುದೇ ಕೆಲಸಕ್ಕೆ ಜನ ಸೇರಿಸುವ ಅಗತ್ಯ ಇರಲಿಲ್ಲ. ಸಕ್ರೀಯ ಕಾರ್ಯಕರ್ತರಿಗೆ ವಿಚಾರ ತಿಳಿಸುತಿದ್ದಂತೆ ಸ್ಥಳಕ್ಕೆ ಸಂಘಟನೆಯ ಬೆಂಬಲಿಗರು ಜಮಾಯಿಸುತಿದ್ದರು. ಈ ವೇಳೆ ಸ್ಥಳೀಯವಾಗಿ ಪ್ರಚಾರಕ್ಕೆ ಬಂದ ಫೈರೋಜ್ ಪಾಷ ಸಂಘಟನೆಗೆ ಸೇರಿದ್ದ. ಕಳೆದ ವರ್ಷ ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಾರ್ಟಿಗೆ ಸೇರಿದ್ದ ಫೈರೋಜ್ ಪಾಷ, ನಂತರದಲ್ಲಿ SDPIಗೆ ಸೇರಿದ್ದ. ಆದರೆ ಶಾಶ್ವತ ಸದಸ್ಯತ್ವ ದೊರೆಯದಿದ್ರು ಸಂಘಟನೆಯಲ್ಲಿ ಸಕ್ರಿಯನಾಗಿದ್ದ.
ಹಲವು ವರ್ಷ ಕಾಂಗ್ರೆಸ್ನಲ್ಲಿ ತೊಡಗಿದ್ದ ಫೈರೋಜ್ ಪಾಷ, ಸಾಮಾಜಿಕ ಜಾಲತಾಣದಲ್ಲಿ ಪರಿಣಿತನಾಗಿದ್ದ. ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಅಕ್ಟೀವ್ ಆಗಿರುತಿದ್ದ ಫೈರೋಜ್ ಪಾಷ, ತನ್ನ ಪೊಸ್ಟ್ಗಳಲ್ಲಿ ಹೆಚ್ಚು ಅನ್ಯ ಧರ್ಮದ ಅವಮಾನಕಾರಿ ಫೊಸ್ಟ್ ಹಾಕುತಿದ್ದ. ಕೇಂದ್ರ ಸರ್ಕಾರ ತಂದ ನೀತಿ ಬಗ್ಗೆ ಸ್ಥಳೀಯ ಕಾಂಗ್ರೆಸ್ ನಡೆ ಬಗ್ಗೆ ಬೇಸರಗೊಂಡಿದ್ದ ಫೈರೋಜ್ ಪಾಷ, ಮುಸ್ಲಿಂ ಪರವಾಗಿ ಯಾವುದೇ ನಡೆ ಇಲ್ಲ ಎಂದು ಪಕ್ಷ ತೊರೆದು SDPIಗೆ ಸೇರಿದ್ದ. ನಂತರ SDPI ಪರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್ ಆಗಿದ್ದ.
SDPI ಕೇಂದ್ರ ಸರ್ಕಾರದ ವಿರುದ್ಧ ಸಂಚು ರೂಪಿಸಿತ್ತು..
ಕೇಂದ್ರ ಸರ್ಕಾರದ ಕೆಲ ನಿರ್ಧಾರಗಳಾದ ಆರ್ಟಿಕಲ್ 370, CAA, NRC, ಬಾಬರಿ ಮಸಿದಿ ತೀರ್ಪು, ಥ್ರಿಬಲ್ ತಲಾಕ್ ಸೇರಿದಂತೆ ಹಲವು ವಿಚಾರವಾಗಿ SDPI ಅಸಮಾಧಾನ ಹೊಂದಿತ್ತು. ಈ ಹಿನ್ನೆಲೆಯಿಂದಾಗಿ SDPI ಕೇಂದ್ರ ಸರ್ಕಾರದ ವಿರುದ್ಧ ಸಂಚು ರೂಪಿಸಿತ್ತು. ಕೋಮು ಗಲಭೆ ಸೃಷ್ಟಿಸಲು SDPI ಸದಸ್ಯರು ತಂತ್ರ ಹೆಣಿದಿದ್ದರು. ಕೊಮುಗಲಭೆ ನಡೆಸಲು ಫೈರೋಜ್ ಪಾಷ ತಂತ್ರ ಹೂಡಿದ್ದ. ಈ ಹಿನ್ನೆಲೆಯಲ್ಲಿ SDPIನ ಬೆಂಗಳೂರು ಜಿಲ್ಲಾಧ್ಯಕ್ಷ ಮಹಮದ್ ಶರೀಫ್, ಮುಜಾಮಿಲ್ ಪಾಷ ಸೇರಿದಂತೆ ಬೆಂಗಳೂರಿನ ಕೆಲ SDPI ಕಾರ್ಯಕರ್ತರ ಜೊತೆಗೂಡಿ ಕ್ರಿಮಿನಲ್ ಕಾನ್ಸೆಪೆರಸಿ ನಡೆಸಲು ದಿನಾಂಕವನ್ನು ನಿಗದಿ ಮಾಡಿಕೊಂಡಿದ್ದರು.
ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ಷಡ್ಯಂತರ ಹೂಡುವುದಾಗಿ ಚರ್ಚೆ ನಡೆಸಲಾಗಿತ್ತು. ಹಿಂದೂಗಳಿಗೆ ಅವಮಾನ ಮಾಡುವ ಪೊಸ್ಟ್ ಹಾಗೂ ಹಿಂದುಗಳ ಪ್ರಚೋದಿಸುವ ತಂತ್ರದ ಬಗ್ಗೆ ಚರ್ಚೆ ಮಾಡಿದ್ದರು. ಪೊಸ್ಟ್ ಹಾಕಿದ ಬಳಿಕ ನಡೆಯುವ ಘಟನೆಗೆ SDPI ಕಾರ್ಯಕರ್ತರು ಸಿದ್ದರಾಗಿದ್ದರು. ಮುಸ್ಲಿಂ ಸಮುದಾಯಕ್ಕೆ ಬೆಂಬಲಿಸಿ SDPIನ ಕಾರ್ಯಕರ್ತರು ಯಾವುದೇ ಹಿಂಸಾತ್ಮಕ ಕೃತ್ಯಕ್ಕೆ ಸಿದ್ಧರಾಗಿದ್ದರು.
ಪ್ಲ್ಯಾನ್ನಂತೆ ಫೈರೋಜ್ ಪಾಷ ಹಿಂದೂ ಧರ್ಮದ ವಿರುದ್ಧ ಪೊಸ್ಟ್ ಹಾಕಿದ್ದ..
ಪ್ಲ್ಯಾನ್ನಂತೆ ಫೈರೋಜ್ ಪಾಷ ಹಿಂದೂ ಧರ್ಮದ ವಿರುದ್ಧ ಪೊಸ್ಟ್ ಹಾಕಿದ್ದ. ಕೃಷ್ಣ ಜನ್ಮಾಷ್ಟಮಿ ದಿನದಂದು ಫೈರೋಜ್ ಪಾಷ ಅವಹೇಳನಕಾರಿ ಪೊಸ್ಟ್ ಮಾಡಿದ್ದ. ಈ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ನವೀನ್ಗೂ ಸಹ ಟ್ಯಾಗ್ ಮಾಡಿದ್ದ. ಫೈರೋಜ್ ಪಾಷ ಈ ಕೃತ್ಯಕ್ಕೆ ಉತ್ತರವಾಗಿ ನವೀನ್, ಪೈಂಗಬರ್ ಬಗ್ಗೆ ಕಾರ್ಟೂನ್ ಪೊಸ್ಟ್ ಮಾಡಿದ್ದ. ನವೀನ್ ಪೊಸ್ಟ್ ಬೆನ್ನಲ್ಲೇ ಮಹಾ ಷಡ್ಯಂತರ ಶುರುವಾಗಿತ್ತು.
ನವೀನ್ ಪೊಸ್ಟ್ಗೆ ವಿರುದ್ಧವಾಗಿ ಫೈರೋಜ್ ಪಾಷ ಆಕ್ರೋಶದ ಕಿಡಿ ಹೊತ್ತಿಸಿದ್ದ. ಮುಸ್ಲಿಂ ಸಮುದಾಯದ ಸದಸ್ಯರು, ಸಂಘಗಳ ಮುಖಂಡರು ಹಾಗೂ ಜೆಡಿಎಸ್ ಸದಸ್ಯರನ್ನ ಸಂಪರ್ಕಿಸಿದ್ದ. ನವೀನ್ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ದೂರು ನೀಡುವಂತೆ ಸೂಚಿಸಿದ್ದ. ಫೈರೋಜ್ ಪಾಷ ಇದರ ಜೊತೆಗೆ ಸರ್ಕಾರ ಹಾಗೂ ಪೊಲೀಸರಿಗೆ ಒತ್ತಡ ಏರುವ ತಂತ್ರ ರೂಪಿಸಿದ್ದ. ಬಳಿಕ SDPI ಕಾರ್ಯಕರ್ತರನ್ನು ಸೇರಿಸಿ ಅಖಂಡ ಹಾಗೂ ನವೀನ್ ಮನೆ ಬಳಿ ದಾಳಿ ಮಾಡಿಸಿದ್ದ. ಅಷ್ಟೇ ಅಲ್ಲದೆ ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಪ್ರಚೋಧಿಸಿದ್ದ.
ಗಲಭೆಯಲ್ಲಿ ಖುದ್ದು ತಾನು ಭಾಗಿಯಾಗಿದ್ದ ಫೈರೋಜ್ ಪಾಷ..
ಕಾವಲ್ ಬೈರಸಂದ್ರದ ಶಾಸಕ ಅಖಂಡ ಶ್ರೀನಿವಾಸ್ ಮನೆ ಬಳಿ ತೆರಳಿದ್ದ ಫೈರೋಜ್ ಪಾಷ, ಹಿಂಸಾತ್ಮಕ ಕೃತ್ಯದ ಉದ್ದೇಶದಿಂದ ಹಲವು ಜನರನ್ನು ಸೇರಿಸಿದ್ದ. ಬಳಿಕ ಅಖಂಡನ ಮನೆ ಬಳಿ ಬಂದ ಅಗ್ನಿಶಾಮಕ ವಾಹನ ಜಖಂ ಮಾಡುವ ವೇಳೆ ಆತನು ಭಾಗಿಯಾಗಿದ್ದ. ಶಾಸಕನ ಮನೆಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನ ಆಗಮಿಸಿತ್ತು. ಬಳಿಕ ಫೈರೋಜ್ ಪಾಷ ಕೆಜಿಹಳ್ಳಿ ಠಾಣೆ ಬಳಿ ತೆರಳಿದ್ದ.
ಈ ವೇಳೆ SDPIನ ಕೆಲ ಮುಖಂಡರ ಭೇಟಿ ಮಾಡಿದ್ದ ಫೈರೋಜ್ ಪಾಷ, ನಂತರ ಪೊಲೀಸ್ ಠಾಣೆ ಮೇಲೆ ದಾಳಿ ಹಾಗೂ ಸಿಬ್ಬಂದಿಗಳ ಮೇಲೆ ದಾಳಿ ಮಾಡಲು ಸೂಚಿಸಿದ್ದ. ಇದಾದ ಬಳಿಕ ಮನೆಯ ಮಾರ್ಗದಲ್ಲಿ ಡಿ.ಜೆಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದ ಫೈರೋಜ್ ಪಾಷ, ಅಲ್ಲಿಯೂ ಸಹ ಠಾಣೆ ಮೇಲೆ ದಾಳಿ ಮಾಡಲು ಪ್ರೇರೆಪಿಸಿದ್ದ.
ಗಲಭೆಗೂ ಮುನ್ನ ಅದೇ ದಿನ ನಡೆದಿತ್ತು ಎರಡು ಬಾರಿ ಸಭೆ..
ಗಲಭೆಗೂ ಮುನ್ನ ಅದೇ ದಿನ ಸಂಜೆ ಐದು ಗಂಟೆಗೆ ಮೊದಲ ಸಭೆ ನಡೆದಿತ್ತು. SDPIನ ಮಹಮದ್ ಶರೀಫ್, ಸಹಕಾರ್ಯಕರ್ತ ಹಾಜಿ ಮಹೊಮದ್, ಮುಜಾಮಿಲ್ ಪಾಷ ಹಾಗೂ ಕೆಲ ಜಿಲ್ಲಾ ಮುಖಂಡರ ಜೊತೆ ಸಭೆ ನಡೆದಿತ್ತು. ಸಭೆ ವೇಳೆ ಫೈರೋಜ್ ಪಾಷ ಪೊಸ್ಟ್ಗೆ, ನವೀನ್ ಪೊಸ್ಟ್ ಹಾಕಿದ ಬಗ್ಗೆ ಚರ್ಚೆ ಮಾಡಲಾಗಿತ್ತು. ಸತತವಾಗಿ ನಡೆದ ಎರಡು ಗಂಟೆಗಳ ಸಭೆಯಲ್ಲಿ ನವೀನ್ ಪೊಸ್ಟ್ ವೈರಲ್ ಮಾಡಲಾಗಿತ್ತು. ಮುಜಾಮಿಲ್ ಪಾಷ ಮುಖಾಂತರ ಸಂಘಟನೆಯ ಎಲ್ಲಾ ಕಾರ್ಯಕರ್ತರು, ಮುಖಂಡರಿಗೆ ವಾಟ್ಸ್ ಆ್ಯಪ್ ಮುಖಾಂತರ ನವೀನ್ ಪೊಸ್ಟ್ ಹಂಚಿಕೆಯಾಗಿತ್ತು.
ಹಂಚಿಕೆಯಾದ ಬಳಿಕ ನಡೆದ ಮತ್ತೊಂದು ಸಭೆ..
ಗಲಭೆಗೆ ಕೆಲವೇ ನಿಮಿಷಗಳು ಬಾಕಿ ಎನ್ನುವ ವೇಳೆ ಮತ್ತೊಂದು ಸಭೆ ನಡೆದಿತ್ತು. ಅರ್ಧ ಗಂಟೆ ಸಭೆಯಲ್ಲಿ ಗಲಭೆಗೆ ಕಾರ್ಯಕರ್ತರ ಸೇರಿಸುವ ಬಗ್ಗೆ ಚರ್ಚೆ ಮಾಡಲಾಗಿತ್ತು. ಎರಡನೇ ಸಭೆ ಹೆಗ್ಗಡೆ ನಗರದಲ್ಲಿ ನಡೆದಿತ್ತು. ಮಹಮದ್ ಶರೀಫ್ ಹಾಗೂ ತಣಿಸಂದ್ರದ SDPI ಸದಸ್ಯರ ಜೊತೆ ಸಭೆ ನಡೆದಿತ್ತು. ಬಳಿಕ ಗಲಭೆ ಸೃಷ್ಟಿಸುವಂತೆ ಗುಂಪು ಕಟ್ಟಲಾಯಿತು.
ನವೀನ್ ವಿರುದ್ಧ ದೂರು ದಾಖಲಿಸಿದವರಿಂದಲೂ ನಡೆದಿತ್ತು ಗಲಭೆ ಕೃತ್ಯ..
ಠಾಣೆಯಲ್ಲಿ NCR ದಾಖಲಿಸಿದ್ದ ಸೈಯದ್ ಇಕ್ರುಮುದಿನ್, ಶೇಕ್ ಮೊಹಮದ್ ಬಿಲಾಲ್, ಇಮ್ರಾನ್ ಖಾನ್ ಹಾಗೂ ಮನ್ಸೂರ್, ಬಳಿಕ ತಮ್ಮ ಸಹಚರರಾದ ಸೈಯದ್ ಆಸೀಫ್ ಹಾಗೂ ಮಹಮದ್ ಆಸೀಫ್ ಜೊತೆಗೂಡಿದ್ದರು. ನಂತರ ಕೆ.ಜಿಹಳ್ಳಿ ಠಾಣೆಯ ಹೊರಗಡೆ ಗ್ಯಾಂಗ್ ಜಮಾಯಿಸಿತು. ಹೀಗಾಗಿ ಜನರ ನಿಯಂತ್ರಣಕ್ಕೆ ತರಲು ಪೊಲೀಸರು ಗುಂಡು ಹಾರಿಸಿದ್ದರು. ಇದೇ ವೇಳೆ ಠಾಣೆಯ ಹೊರಗಡೆ ಜಮಾಯಿಸಿದ್ದ ಗ್ಯಾಂಗ್ ಘೋಷಣೆಗಳನ್ನು ಕೂಗುತ್ತಾ ಪೊಲೀಸರ ಮೇಲೆ ದಾಳಿ ಮಾಡಿತು. ಕಲ್ಲು, ಪೆಟ್ರೋಲ್ ಬಾಟಲ್ ಸೇರಿದಂತೆ ಹಲವು ವಸ್ತುಗಳ ಮೂಲಕ ದಾಳಿ ಮಾಡಿ, ಹಲ್ಲೆ ನಡೆಸಿದ್ದರು.
ಪೊಲೀಸರ ಜೊತೆಗಿದ್ದೇವೆಂದು ಹೇಳಿಕೊಂಡಿದ್ದ ಕೆಲವರಿಂದಲೂ ಷಡ್ಯಂತರ..
ಪೊಲೀಸರ ಜೊತೆಗಿದ್ದೇ ಪೊಲೀಸರ ವಿರುದ್ಧ ಹಲ್ಲೆ ನಡೆಸಿದ್ದ ಆರೋಪಿಗಳು, ಬಳಿಕ ಇದೇ ಗ್ಯಾಂಗ್ನಿಂದ ಠಾಣೆಯ ಆವರಣದ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ಬಗ್ಗೆ NIA, ಸಾಕ್ಷಿಗಳ ಹೇಳಿಕೆ ಹಾಗೂ ಆರೋಪಿಗಳ ಮೊಬೈಲ್ ಸಿಡಿಆರ್ ಸಂಗ್ರಹಿಸಿತ್ತು.
ದಂಗೆಯ ನಂತರವೂ ನಡೆದಿತ್ತು ಮತ್ತೊಂದು ಪ್ಲ್ಯಾನ್..
ದಂಗೆಯ ನಂತರವೂ ಕೆ.ಜಿಹಳ್ಳಿ ವಾರ್ಡ್ನ SDPI ಸದಸ್ಯರು ಹಾಗೂ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಈ ಸಭೆ ನಡೆದಿತ್ತು. SDPIನ ಜಿಲ್ಲಾ ಜಂಟಿ ಕಾರ್ಯದರ್ಶಿ ನಾಸೀರುದ್ದೀನ್, ಕೆ.ಜಿಹಳ್ಳಿ ವಾರ್ಡ್ನ SDPI ಅಧ್ಯಕ್ಷ ಇಮ್ರಾನ್ ಅಹಮದ್ನಿಂದ ಈ ಸಭೆಯನ್ನ ಆಯೋಜಿಸಲಾಗಿತ್ತು. ಸಭೆಯಲ್ಲಿ ಗಲಭೆ ಬಳಿಕ ಹೊಸದೊಂದು ರೂಪುರೇಷೆ ಸಿದ್ಧತೆ ಮಾಡಲಾಗಿತ್ತು. ಆಗಸ್ಟ್ 15ರಂದು ಧ್ವಜಾರೋಹಣ ಹಾಗೂ ಕೊವಿಡ್ ಹೆಲ್ಪ್ ಡೆಸ್ಕ್ ತೆರೆಯುವ ಬಗ್ಗೆ ಚರ್ಚೆ ಮಾಡಿದ್ದರು ಎಂಬುದು ಚಾರ್ಜ್ ಶೀಟ್ನಲ್ಲಿ ಉಲ್ಲೇಖವಾಗಿದೆ.