ಕೋಲಾರ: ಕೆಜಿಎಫ್ ಚಿನ್ನದ ಗಣಿ ಗುಂಡಿಯಲ್ಲಿ ಬಿದ್ದು ಮೂವರು ಕಳ್ಳರು ಮೃತಪಟ್ಟಿದ್ದ ಪ್ರಕರಣ ಸಂಬಂಧ ಮೂರನೇ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಕ್ಯಾಮರಾದಲ್ಲಿ ಶವ ಪತ್ತೆಯಾಗಿದ್ದು, NDRF ತಂಡ ಹಾಗೂ ಅಗ್ನಿಶಾಮಕ ದಳದಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಮೇ 13ರಂದು ಕೆಜಿಎಫ್ನ ಮಾರಿಕುಪ್ಪಂ ಬಳಿ ಇರುವ ಮೈಸೂರ್ ಮೈನ್ಸ್ ಚಿನ್ನದ ಗಣಿಯಲ್ಲಿ ಚಿನ್ನದ ಅದಿರು ಕಳುವಿಗೆ ಯತ್ನಿಸಿ ಮೂವರು ಕಳ್ಳರು ಮೃತಪಟ್ಟಿದ್ದರು. ಜೋಸೆಫ್, ಕಂದನ್, ಪಡಿಯಪ್ಪ ಮೃತರು. ಮೇ 14ರಂದು ಜೋಸೆಫ್, ಕಂದನ್ ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು. ಇದೀಗ ಪಡಿಯಪ್ಪ ಮೃತದೇಹ ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲೇ ಕೆಜಿಎಫ್ ಎಸ್ಪಿ, ಅಗ್ನಿಶಾಮಕ ದಳದ ಅಧಿಕಾರಿ ರಾಘವೇಂದ್ರ ಬೀಡುಬಿಟ್ಟಿದ್ದಾರೆ.