ಗುಂಡೇಟಿನಿಂದ ಗಾಯಗೊಂಡ ಹಿರಿಯ IPS ಅಧಿಕಾರಿ RP ಶರ್ಮಾ, ಆಸ್ಪತ್ರೆಗೆ ದಾಖಲು

  • TV9 Web Team
  • Published On - 22:39 PM, 2 Sep 2020
ಗುಂಡೇಟಿನಿಂದ ಗಾಯಗೊಂಡ ಹಿರಿಯ IPS ಅಧಿಕಾರಿ RP ಶರ್ಮಾ, ಆಸ್ಪತ್ರೆಗೆ ದಾಖಲು

[lazy-load-videos-and-sticky-control id=”GI__hcDFjgE”]

ಬೆಂಗಳೂರು: ಹಿರಿಯ IPS​ ಅಧಿಕಾರಿ R.P.ಶರ್ಮಾ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಸಂಜೆ ಸುಮಾರು 4.30ರ ವೇಳೆ ಎರಡು ಸುತ್ತು ಮಿಸ್‌ ಫೈರ್‌ ಆಗಿದ್ದು ಆ ವೇಳೆ ಅವರು ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಅವರ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

ಈ ಘಟನೆ ವೈದ್ಯರ ಸಮ್ಮುಖದಲ್ಲಿಯೇ ಆಗಿದ್ದು, ಈ ಸಂಬಂಧ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಸಧ್ಯಕ್ಕೆ ಅವರ ಆರೋಗ್ಯ ಸ್ಟೇಬಲ್ ಆಗಿದ್ದು, ಯಾವುದೇ ತೊಂದರೆ ಇಲ್ಲ. ಗುಂಡೇಟಿನಿಂದ ಗಾಯಗೊಂಡ ಘಟನೆಗೂ ಅವರ ಅನಾರೋಗ್ಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಡಿಸಿಪಿ ಗುಳೇದ್‌ ತಿಳಿಸಿದ್ದಾರೆ.

ಅಷ್ಟೇ ಅಲ್ಲ ಸಧ್ಯಕ್ಕೆ ಅವರ ದೇಹದಲ್ಲಿನ ಬುಲೆಟ್‌ ತೆಗೆಯುವ ಅಗತ್ಯವಿಲ್ಲ ಎನ್ನಲಾಗ್ತಿದೆ. ಈ ಬಗ್ಗೆ ವೈದ್ಯರು ನಿರ್ಧರಿಸ್ತಾರೆ. ಸಧ್ಯಕ್ಕೆ ಅವರ ಆರೋಗ್ಯ ಸುಧಾರಿಸಿದ್ದು ಯಾವುದೇ ತೊಂದರೆ ಇಲ್ಲ ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ಸ್ಪಷ್ಟಪಡಿಸಿದ್ದಾರೆ.