ದೀಪಾವಳಿಗೆ ತೆರೆಮೇಲೆ ಬರಲಿದೆ ಶಾಹಿದ್ ಕಪೂರ್ ನಟನೆಯ ಜೆರ್ಸಿ

ಈ ದೀಪಾವಳಿಗೆ ಅಂದರೆ 2021 ನವೆಂಬರ್ 5 ರಂದು ಜೆರ್ಸಿ ಸಿನಿಮಾ ಬಿಡುಗಡೆಯಾಗಲಿದ್ದು, ಇದು ಮಾನವನ ಉತ್ಸಾಹದ ಗೆಲುವು. ಈ ಚಿತ್ರ ಪಯಣದ ಬಗ್ಗೆ ಹೆಮ್ಮೆ ಇದೆ. ಇದರ ಶ್ರೇಯಸ್ಸು ಜೆರ್ಸಿ ಸಿನಿಮಾ ತಂಡಕ್ಕೆ ಸಲ್ಲುತ್ತದೆ ಎಂದು ಶಾಹಿದ್ ಕಪೂರ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

  • TV9 Web Team
  • Published On - 19:20 PM, 17 Jan 2021
ದೀಪಾವಳಿಗೆ ತೆರೆಮೇಲೆ ಬರಲಿದೆ ಶಾಹಿದ್ ಕಪೂರ್ ನಟನೆಯ ಜೆರ್ಸಿ
ಶಾಹಿದ್ ಕಪೂರ್

ಮುಂಬೈ: ತೆಲುಗಿನಿಂದ ಬಾಲಿವುಡ್​​ಗೆ ರಿಮೇಕ್​ ಆಗಿರುವ ಜೆರ್ಸಿ ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಚಿತ್ತದ ನಟ ಶಾಹಿದ್​ ಕಪೂರ್​ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ತೆಲುಗಿನಲ್ಲಿ ತೆರೆಕಂಡು ಹಿಟ್​ ಆಗಿದ್ದ ಅರ್ಜುನ್​ ರೆಡ್ಡಿ ಸಿನಿಮಾವನ್ನು ಹಿಂದಿಗೆ ರಿಮೇಕ್​ ಮಾಡಲಾಗಿತ್ತು. ಈ ಚಿತ್ರವನ್ನು ಹಿಂದಿಗೆ ಕಬೀರ್​ ಸಿಂಗ್​ ಹೆಸರಲ್ಲಿ ರಿಮೇಕ್​ ಮಾಡಲಾಗಿತ್ತು. ಈ ಚಿತ್ರ ಶಾಹಿದ್​ ಕಪೂರ್​ಗೆ ದೊಡ್ಡಮಟ್ಟದ ಹಿಟ್​ ತಂದುಕೊಟ್ಟಿತ್ತು. ಈ ಬೆನ್ನಲ್ಲೇ ತೆಲುಗಿನ ಹಿಟ್​ ಚಿತ್ರ ಜೆರ್ಸಿ ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿದೆ. ಈ ಚಿತ್ರದಲ್ಲಿ ಶಾಹಿದ್​ ನಟಿಸುತ್ತಿದ್ದಾರೆ. ಈಗ ಅವರು ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಸಿದ್ದಾರೆ.

ಈ ದೀಪಾವಳಿಗೆ ಅಂದರೆ 2021 ನವೆಂಬರ್ 5 ರಂದು ಜೆರ್ಸಿ ಸಿನಿಮಾ ಬಿಡುಗಡೆಯಾಗಲಿದ್ದು, ಇದು ಮಾನವನ ಉತ್ಸಾಹದ ಗೆಲುವು. ಈ ಚಿತ್ರ ಪಯಣದ ಬಗ್ಗೆ ಹೆಮ್ಮೆ ಇದೆ. ಇದರ ಶ್ರೇಯಸ್ಸು ಜೆರ್ಸಿ ಸಿನಿಮಾ ತಂಡಕ್ಕೆ ಸಲ್ಲುತ್ತದೆ ಎಂದು ಶಾಹಿದ್ ಕಪೂರ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

View this post on Instagram

A post shared by Shahid Kapoor (@shahidkapoor)

ಶಾಹಿದ್ ಕಪೂರ್ ನಟನೆಯ ಜೆರ್ಸಿ ಸಿನಿಮಾ ತೆಲುಗು ಸಿನಿಮಾದ ರೀಮೆಕ್ ಆಗಿದ್ದು, ಈ ಸಿನಿಮಾದಲ್ಲಿ ಶಾಹಿದ್ ಕ್ರಿಕೆಟ್ ಆಟಗಾರನಾಗಿ ಮಿಂಚಲಿದ್ದಾರೆ. ಈ ಸಿನಿಮಾ  ಯಾವಾಗ ಬಿಡುಗಡೆ ಆಗಲಿದೆ ಎಂದು ಸಾಕಷ್ಟು ಸಿನಿ ಅಭಿಮಾನಿಗಳು ಕಾಯುತ್ತಿದ್ದರು. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಂತಾಗಿದೆ.

ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ಸಿನಿಮಾ ಶೂಟಿಂಗ್ ಶುರು, ಹೊಸ ಗೈಡ್ ಲೈನ್ಸ್ ಜಾರಿ..