ಅದು ನನ್ನ ಅನುಭವಕ್ಕೆ ಬಂದಿಲ್ಲ.. Drugs ಬಗ್ಗೆ ನಟಿ ಶರ್ಮಿಳಾ ಹೇಳಿದ್ದು ಹೀಗೆ

  • Publish Date - 2:01 pm, Sat, 29 August 20 Edited By: sadhu srinath
ಅದು ನನ್ನ ಅನುಭವಕ್ಕೆ ಬಂದಿಲ್ಲ.. Drugs ಬಗ್ಗೆ ನಟಿ ಶರ್ಮಿಳಾ ಹೇಳಿದ್ದು ಹೀಗೆ

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಹೆಸರು ತಳುಕು ಹಾಕಿರುವ ಹಿನ್ನೆಲೆಯಲ್ಲಿ ನಟಿ ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಈ ರೀತಿಯ ಅನುಭವ ಹಿಂದೆಂದೂ ಕೂಡ ಆಗಿಲ್ಲ. ನನಗೆ ಸಿನಿಮಾ ಇಂಡಸ್ಟ್ರಿಯ ಹಿನ್ನೆಲೆ ಇದೆ. ನನ್ನ ತಂದೆ, ತಾತ ಸಿನಿಮಾರಂಗದಲ್ಲಿದ್ದವರು. ನಿರ್ಮಾಪಕರು ಮತ್ತು ವಿತರಕರಾಗಿದ್ದರು. ಹೀಗಾಗಿ, ಡ್ರಗ್ಸ್ ಬಗ್ಗೆ ನನಗೆ ಯಾವುದೇ ಅನುಭವವಾಗಿಲ್ಲ ಎಂದು ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.