ಬೆಂಗಳೂರು: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದ ಶಿವಣ್ಣ ಹಾಗು ಆಪ್ತರು ನಿನ್ನೆ ಶಬರಿ ಮಲೈಗೆ ತೆರಳಬೇಕಿತ್ತು. ಕೇರಳದಲ್ಲಿ ಕೊರೊನ ಭೀತಿ ಹಿನ್ನೆಲೆ ಇಂದು ಬೆಂಗಳೂರಿನ ದೇವಸ್ಥಾನದಲ್ಲಿ ಪೂಜಾಕಾರ್ಯ ಮಾಡಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನ ಮನೆಯಲ್ಲಿಯೇ ಪೂಜೆ ಮಾಡಿದ್ದಾರೆ.
ಮಾಲಾಧಾರಿಗಳೆಲ್ಲರೂ ಭಜನೆ ಮಾಡಿ ಪೂಜೆಯಲ್ಲಿ ಭಾಗಿಯಾಗಿದ್ರು. ಜಾಲಹಳ್ಳಿ ಕ್ರಾಸ್ ನಲ್ಲಿರೋ ಅಯ್ಯಪ್ಪ ದೇವಸ್ಥಾನದಲ್ಲಿ ಕೂಡ ಪೂಜೆ ಸಲ್ಲಿಸಲಿದ್ದಾರೆ. ಫೆಬ್ರವರಿ 22 ರಂದು ಅಯ್ಯಪ್ಪ ಮಾಲೆ ಧರಿಸಿದ್ದ ಶಿವಣ್ಣ, ಮಾರ್ಚ್ 14 ರಂದು ಶಬರಿಗೆ ಹೋಗಿ ಮಾರ್ಚ್ 21 ಕ್ಕೆ ಮರಳೋ ಪ್ಲಾನ್ ಆಗಿತ್ತು. ಪ್ರತೀ ವರ್ಷ ಶಬರಿ ಮಲೈಗೆ ಹೋಗ್ತಿದ್ದ ಶಿವಣ್ಣ ಹಾಗು ಆಪ್ತರು. ಸದ್ಯ ಕೇರಳದ ಶಬರಿಮಲೈ ಅಯ್ಯಪ್ಪ ಭಕ್ತ ಮಂಡಳಿಯವರು ಕೂಡ ಭಕ್ತರು ಬರಬಾರದು ಅಂತಾ ಮನವಿ ಮಾಡಿದ್ದಾರೆ.
ವೈರಸ್ ಹೋದ ನಂತ್ರ ಹೋಗಬೇಕು:
ಅಪ್ಪಾಜಿ ಆದ್ಮೆಲೆ ನಾವು ಶಬರಿ ಯಾತ್ರೆಗೆ ಹೋಗ್ತಿದ್ದೀವಿ. ಇಷ್ಟು ದೂರ ಬಂದು ಹೋಗಲಿಲ್ಲಾ ಅಂತ ಸ್ವಲ್ಪ ನೋವು ಇದೇ. ಅಯ್ಯಪ್ಪ ಸ್ವಾಮಿ ಹೇಳಿರಬಹುದು ಸ್ವಲ್ಪ ರೆಸ್ಟ್ ತಗೋಳಿ ಅಂತ. ದೇವರ ಅನುಗ್ರಹದಿಂದ ವೈರಸ್ ಹೋಗಲಿ. ಸರ್ಕಾರ ಆದೇಶವನ್ನ ಮೀರಿ ಹೋಗಬಾರದು. ದೇವರಿಗೆ ಒಂದು ಪವರ್ ಇದೇ, ಒಂದು ನಂಬಿಕೆ ಇದೆ ಒಳ್ಳೆದಾಗಬಹುದು ಅಂತ ಶಿವರಾಜ್ ಕುಮಾರ್ ತಾವು ಈ ಬಾರಿ ಶಬರಿ ಯಾತ್ರೆಗೆ ಹೋಗ್ತಿಲ್ಲ ಎಂದು ಮಾಧ್ಯಮಗಳ ಜೊತೆ ಮಾತನಾಡುವಾಗ ತಿಳಿಸಿದರು.
ಭಜರಂಗಿ ಶೂಟಿಂಗ್ ಗೆ ಯೂರೋಪ್ ಗೆ ಹೋಗಬೇಕಿತ್ತು. ಕರೊನಾ ವೈರಸ್ ಕಾರಣ ಹೋಗಲಿಲ್ಲ. ಟಾಕೀ ಪೋರ್ಷನ್ ಮಾಡೋಕೆ ಹೋಗಬೇಕಿತ್ತು. ವೈರಸ್ ಹೋದ ನಂತ್ರ ಹೋಗಬೇಕು ಎಂದು ಹೇಳಿದರು.