ಶಾರ್ಟ್​​ ಸರ್ಕ್ಯೂಟ್​ನಿಂದ ಬೆಂಕಿ ಅವಘಡ: 3 ಎಮ್ಮೆಗಳ ಸಜೀವ ದಹನ

ಶಾರ್ಟ್ ಸರ್ಕ್ಯೂಟ್​ನಿಂದ ಕೊಟ್ಟಿಗೆಯಲ್ಲಿ ದನಗಳಿಗೆ ಸಂಗ್ರಹಿಸಿದ್ದ ಮೇವು ಬೆಂಕಿಗಾಹುತಿಯಾಗಿ ಕೊಟ್ಟಿಗೆಯಲ್ಲಿದ್ದ 3 ಎಮ್ಮೆಗಳು ಸಜೀವ ದಹನವಾಗಿರುವ ಘಟನೆ ಸಿಂಧನೂರು ತಾಲೂಕಿನ ಹತ್ತಿಗುಡ್ಡ ಗ್ರಾಮದಲ್ಲಿ ನಡೆದಿದೆ.

  • TV9 Web Team
  • Published On - 9:25 AM, 15 Jan 2021
ಶಾರ್ಟ್​​ ಸರ್ಕ್ಯೂಟ್​ನಿಂದ ಬೆಂಕಿ ಅವಘಡ: 3 ಎಮ್ಮೆಗಳ ಸಜೀವ ದಹನ
ಕೊಟ್ಟಿಗೆಗೆ ಬೆಂಕಿ ಬಿದ್ದು 3 ಎಮ್ಮೆಗಳು ಸಜೀವ ದಹನ ಹೊಂದಿವೆ

ರಾಯಚೂರು: ಶಾರ್ಟ್ ಸರ್ಕ್ಯೂಟ್​ನಿಂದ ಕೊಟ್ಟಿಗೆ ಬೆಂಕಿ ಬಿದ್ದು  3 ಎಮ್ಮೆಗಳು ಸಜೀವದಹನವಾಗಿರುವ ಘಟನೆ ಸಿಂಧನೂರು ತಾಲೂಕಿನ ಹತ್ತಿಗುಡ್ಡ ಗ್ರಾಮದಲ್ಲಿ ನಡೆದಿದೆ.

ಹತ್ತಿಗುಡ್ಡದ ಮಂಜುನಾಥ್ ಎಂಬುವವರ ಕೊಟ್ಟಿಗೆಯಲ್ಲಿ ಎಮ್ಮೆಗಳಿಗೆ ಆಹಾರವಾಗಿ ಸಂಗ್ರಹಿಸಿದ್ದ ಜೋಳದ ಮೇವು, ತೊಗರಿ ಹೊಟ್ಟು, ಕಡಲೆ ಹೊಟ್ಟು, ಶೇಂಗಾ ಹೊಟ್ಟು ಸುಟ್ಟು ಭಸ್ಮವಾಗಿದೆ. ಸರಿಸುಮಾರು 19 ಲಕ್ಷ ರೂ. ಮೇವು ಬೆಂಕಿಗೆ ಆಹುತಿಯಾಗಿದೆ. ಜೊತೆಗೆ, ಸಾಕಿದ್ದ 3 ಎಮ್ಮೆಗಳು ದಹನವಾಗಿದ್ದು, ಇನ್ನು 3 ಎಮ್ಮೆಗಳಿಗೆ ಗಂಭೀರ ಗಾಯವಾಗಿದೆ.

ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತನ ಶ್ರಮ ಬೆಂಕಿಗೆ ಆಹುತಿ: ಗದಗದಲ್ಲಿ 15 ಟ್ರ್ಯಾಕ್ಟರ್ ಶೇಂಗಾ ಭಸ್ಮ