ನಾನು ಮನೆ ಖಾಲಿ ಮಾಡೋಕೂ ಮುಂಚೆಯೇ HDK ಹೋಟೆಲ್‌ನಲ್ಲಿ ಟಿಕಾಣಿ ಹೂಡಿದ್ದ -ಲಾ ಪಾಯಿಂಟ್​ ಎತ್ತಿದ ಮಾಜಿ ಲಾಯರ್​ ಸಿದ್ದರಾಮಯ್ಯ

ನಾನು ಕುಮಾರಸ್ವಾಮಿಗೆ ಮನೆ ಬಿಟ್ಟುಕೊಟ್ಟಿಲ್ಲ ಎಂಬುದು ಸುಳ್ಳು. ಕುಮಾರಸ್ವಾಮಿ ಮೊದಲೇ ಹೋಟೆಲ್‌ನಲ್ಲಿ ರೂಂ ಮಾಡಿಕೊಂಡಿದ್ದ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿಕೆಗೆ ವಿಪಕ್ಷ ನಾಯಕ​ ಸಿದ್ದರಾಮಯ್ಯ ಸಖತ್ ಆಗಿ​ ತಿರುಗೇಟು ಕೊಟ್ಟಿದ್ದಾರೆ.

  • TV9 Web Team
  • Published On - 12:24 PM, 19 Dec 2020
ನಾನು ಮನೆ ಖಾಲಿ ಮಾಡೋಕೂ ಮುಂಚೆಯೇ HDK ಹೋಟೆಲ್‌ನಲ್ಲಿ ಟಿಕಾಣಿ ಹೂಡಿದ್ದ -ಲಾ ಪಾಯಿಂಟ್​ ಎತ್ತಿದ ಮಾಜಿ ಲಾಯರ್​ ಸಿದ್ದರಾಮಯ್ಯ
ಸಿದ್ದರಾಮಯ್ಯ (ಎಡ); H.D.ಕುಮಾರಸ್ವಾಮಿ (ಬಲ)

ಮೈಸೂರು: ನಾನು ಕುಮಾರಸ್ವಾಮಿಗೆ ಮನೆ ಬಿಟ್ಟುಕೊಟ್ಟಿಲ್ಲ ಎಂಬುದು ಸುಳ್ಳು. ಕುಮಾರಸ್ವಾಮಿ ಮೊದಲೇ ಹೋಟೆಲ್‌ನಲ್ಲಿ ರೂಂ ಮಾಡಿಕೊಂಡಿದ್ದ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿಕೆಗೆ ವಿಪಕ್ಷ ನಾಯಕ​ ಸಿದ್ದರಾಮಯ್ಯ ಸಖತ್ ಆಗಿ​ ತಿರುಗೇಟು ಕೊಟ್ಟಿದ್ದಾರೆ. ಇಷ್ಟಕ್ಕೆ ನಿಲ್ಲದೆ, ಕುಮಾರಸ್ವಾಮಿ ಹೋಟೆಲ್‌ನಲ್ಲಿ ಉಳಿದಿದ್ದು ನಿಜವೋ, ಅಲ್ಲವೋ? ಅದು ನಿಜವಾದ ಮೇಲೆ ಚರ್ಚೆ ಮಾಡುವುದಕ್ಕೆ ಏನೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಒಳ ಒಪ್ಪಂದದ ಜನಕ ಎಂಬ ಕುಮಾರಸ್ವಾಮಿ ಆರೋಪಕ್ಕೆ ಯಾರು ಒಳ ಒಪ್ಪಂದ ಮಾಡಿಕೊಂಡಿದ್ರು? ಗೊಪಾಲಯ್ಯನಿಗೆ ಟಿಕೆಟ್ ಕೊಟ್ಟವರು ಯಾರು? ಅವರು ಹೇಳಿದ್ದಕ್ಕೆಲ್ಲಾ ಉತ್ತರ ಕೊಡೋಕೆ ನಾನಿಲ್ಲ ಎಂದು ಸಿದ್ದರಾಮಯ್ಯ ಪಾಯಿಂಟ್ ಹಾಕಿದರು.
ಜೆಡಿಎಸ್ ಬಿಜೆಪಿಯವರು 29 ಕ್ಷೇತ್ರಗಳಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ರು. ಎಲ್ಲಾ ಕ್ಷೇತ್ರಗಳಲ್ಲು ಅವರು ಮಾಡಿಕೊಂಡಿರಲಿಲ್ಲ. ನಿನ್ನೆ‌ ನಾನು ಅದನ್ನೆ ಹೇಳಿದ್ದು ಎಂದು ಸಿದ್ದರಾಮಯ್ಯ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿದರು.

‘ರಾಜ್ಯದ ಬೇರೆ ಕಾಂಗ್ರೆಸ್ ನಾಯಕರ ಹೆಸರನ್ನು ಹೇಳಿರಲಿಲ್ಲ’
ಕಾಂಗ್ರೆಸ್‌ನವರು ನನ್ನನ್ನು ಸೋಲಿಸಿದ್ದರು ಎಂದು ಹೇಳಿದ್ದೆ. ಚಾಮುಂಡೇಶ್ವರಿಯ ಸ್ಥಳೀಯ ಮುಖಂಡರ ಬಗ್ಗೆ ಹೇಳಿದ್ದೆ. ರಾಜ್ಯದ ಬೇರೆ ಕಾಂಗ್ರೆಸ್ ನಾಯಕರ ಹೆಸರನ್ನು ಹೇಳಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನೀವು ಮನೆ ಖಾಲಿ ಮಾಡಲಿಲ್ಲ.. ಅದಕ್ಕೆ H.D.ಕುಮಾರಸ್ವಾಮಿ ಹೋಟೆಲ್‌ಗೆ ಹೋಗಬೇಕಾಯ್ತು -ಸಾ.ರಾ.ಮಹೇಶ್​ ತಿರುಗೇಟು