ಈಗ ಚುನಾವಣೆ ಇರೋದು ಕಾಂಗ್ರೆಸ್, BJP ಮಧ್ಯೆ.. JDS ಆಟಕ್ಕುಂಟು ಲೆಕ್ಕಕ್ಕಿಲ್ಲ -ಸಿದ್ದು ಟಾಂಗ್​

ಈಗ ಚುನಾವಣೆ ಇರೋದು ಕಾಂಗ್ರೆಸ್ BJP ಮಧ್ಯದಲ್ಲಿ. JDS ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್​ ಕೊಟ್ಟಿದ್ದಾರೆ. ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ವೇಳೆ ಸಿದ್ದರಾಮಯ್ಯ ಮಾತನಾಡಿದರು.

ಈಗ ಚುನಾವಣೆ ಇರೋದು ಕಾಂಗ್ರೆಸ್, BJP ಮಧ್ಯೆ.. JDS ಆಟಕ್ಕುಂಟು ಲೆಕ್ಕಕ್ಕಿಲ್ಲ -ಸಿದ್ದು ಟಾಂಗ್​
ಸಿದ್ದರಾಮಯ್ಯ
KUSHAL V

|

Dec 13, 2020 | 3:41 PM

ಬಾಗಲಕೋಟೆ: ಈಗ ಚುನಾವಣೆ ಇರೋದು ಕಾಂಗ್ರೆಸ್ BJP ಮಧ್ಯದಲ್ಲಿ. JDS ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್​ ಕೊಟ್ಟಿದ್ದಾರೆ. ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ವೇಳೆ ಸಿದ್ದರಾಮಯ್ಯ ಮಾತನಾಡಿದರು.

JDS ಅಪ್ಪ ಮಕ್ಕಳ ಆಸ್ತಿ. ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದೇ ನಿಜ. ಏನಾದರೂ ಅವರ ವಿರುದ್ಧ ನಡೆದರೆ ಹೊರಹಾಕ್ತಾರೆ. ನನ್ನಂಥವನನ್ನೇ ಪಕ್ಷದಿಂದ ಹೊರಹಾಕಿದರು ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಅಹಿಂದ ಅಂತಾ ಮಾತಾಡಿದ್ದಕ್ಕೆ ಹೊರಹಾಕಿದರು. ದೇವೇಗೌಡರು ಅಹಿಂದ ಬೇಡ ಎಂದರು. ನಾನು ಯಾರೇ ಬಂದರೂ ನಿಲ್ಲಿಸೋದಿಲ್ಲ ಎಂದು ಉತ್ತರಿಸಿದೆ. ದೇವರೆ ಬಂದು ಹೇಳಿದರೂ ನಿಲ್ಲಿಸೋದಿಲ್ಲ ಅಂದೆ. ಅದಕ್ಕೇ ನನ್ನನ್ನು ಉಚ್ಚಾಟನೆ ಮಾಡಿಬಿಟ್ರು. ಆಮೇಲೆ‌ ಕಾಂಗ್ರೆಸ್​ಗೆ ಬಂದೆ. ಅಲ್ಲಿ ಎಲ್ಲರೂ ಸ್ವಾಗತ ಮಾಡಿದರು. ಜೊತೆಗೆ, ನನ್ನನ್ನು ಮುಖ್ಯಮಂತ್ರಿಯಾಗಿ ನೀವೆಲ್ಲರೂ ಮಾಡಿದ್ರಿ ಎಂದು ಹೇಳಿದರು.

‘ರಾಜಕೀಯ ನಿಂತ ನೀರಲ್ಲ, ಕಾಲಚಕ್ರ ತಿರುಗುತ್ತಿರುತ್ತದೆ’ ಗ್ರಾ.ಪಂ. ಚುನಾವಣೆಯ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಆಸ್ತಿ, ಅಂತಸ್ತು, ರಾಜಕೀಯ ಯಾವುದೂ ಲೆಕ್ಕಕ್ಕಿಲ್ಲ. ನಾವು ಜನಸೇವಕರು. ಕೆಳಹಂತದಿಂದ ಇಲ್ಲಿಗೆ ಬಂದಿದ್ದೇವೆ. 1980ರಲ್ಲಿ ಕೇವಲ ಎರಡೇ ಸೀಟ್ ಗೆದ್ದಿದ್ದ ಬಿಜೆಪಿಯವರು ಈಗ ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳ್ತಾರೆ. ಆದರೆ, ರಾಜಕೀಯ ನಿಂತ ನೀರಲ್ಲ, ಕಾಲಚಕ್ರ ತಿರುಗುತ್ತಿರುತ್ತದೆ ಎಂದು ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ದೇಶಕ್ಕಾಗಿ ಬಿಜೆಪಿಯವರ ಕೊಡುಗೆ ಶೂನ್ಯ. ಮಾತೆತ್ತಿದರೆ ನಾವು ಹಿಂದೂಗಳು ಅಂತಾರೆ. ನಾನು ಹಿಂದೂ, ಮಹಾತ್ಮಾ ಗಾಂಧಿಯವರ ತತ್ವದ ಹಿಂದೂ. ಬಿಜೆಪಿಯವರು ಸಾವರ್ಕರ್ ಪಾಲಿಸಿ ಹಿಂದೂಗಳು ಎಂದು ಹೇಳಿದರು. ನನ್ನ ಹೆಸರೇ ಸಿದ್ದರಾಮಯ್ಯ. ಸಿದ್ದರಾಮೇಶ್ವರ ನಮ್ಮ ಮನೆ ದೇವರು. ಸಿದ್ದರಾಮೇಶ್ವರ ಹಿಂದೂ ದೇವರಾ? ಮುಸ್ಲಿಂ ದೇವರಾ? ಎಂದು ಪ್ರಶ್ನಿಸಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada