‘ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಾಡು ಮನುಷ್ಯ’ ಎಂದ ಸಿದ್ದರಾಮಯ್ಯಗೆ BJP ಟ್ವೀಟ್ ಏಟು

  • TV9 Web Team
  • Published On - 13:49 PM, 22 Oct 2020
‘ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಾಡು ಮನುಷ್ಯ’ ಎಂದ ಸಿದ್ದರಾಮಯ್ಯಗೆ BJP ಟ್ವೀಟ್ ಏಟು

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಡು ಮನುಷ್ಯ ಎಂದು ಟ್ವೀಟ್ ಮಾಡಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟ್ವೀಟ್ ಮೂಲಕವೇ ರಾಜ್ಯ BJP ತಿರುಗೇಟು ನೀಡಿದೆ. ಕಾಡು ಮನುಷ್ಯ ಯಾರೆಂದು ನಿಮ್ಮ ಪದಗಳಿಂದ ಸಾಬೀತಾಗಿದೆ. ಕಾಡು ಮನುಷ್ಯ, ನಾಲಾಯಕ್, ಬೀದಿ ಅಲೆಯುತ್ತಿದ್ದವನು, ಎಲುಬಿಲ್ಲದವ ಎಂಬ ಮಾತು ಕಾಂಗ್ರೆಸ್ ಸಂಸ್ಕೃತಿ ಬಿಂಬಿಸುತ್ತೆ ಎಂದು ಟ್ವೀಟ್​ನಲ್ಲಿ ರಾಜ್ಯ ಬಿಜೆಪಿ ಉಲ್ಲೇಖಿಸಿದೆ.

ಸರಣಿ ಟ್ವೀಟ್​ ಮೂಲಕ ಸಿದ್ದರಾಂಯ್ಯರನ್ನ ಜಾಲಾಡಿದ ಬಿಜೆಪಿ
ನೀವು ರಾಜ್ಯ ಕಾಂಗ್ರೆಸ್‌ನ ವಿದೂಷಕ ಇದ್ದ ಹಾಗೆ ಆಗಿದೆ. ಜನರ ಭಾವನೆಗೆ ಸ್ಪಂದಿಸದ ನಿಮಗೆ ಏನು ಮಾಡಿದ್ದಾರೆ? ನಿಮ್ಮನ್ನು ಬೀದಿಯಲ್ಲಿ ಅಲೆಯುವಂತೆ ಮಾಡಿದ್ದಾರೆ. ಚಾಮುಂಡೇಶ್ವರಿ ಮತದಾರರು ಮಾಡಿದ್ದನ್ನು ಮರೆಯಬೇಡಿ. ಕಾಂಗ್ರೆಸ್‌ ಪಕ್ಷದಲ್ಲಿ ನಿಮ್ಮ ಪರಿಸ್ಥಿತಿ ಉಗುರು, ಹಲ್ಲು ಇಲ್ಲದ ಹುಲಿಯ ಪರಿಸ್ಥಿತಿಯಂತಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.