ಕೃತಜ್ಞತೆ ಇಲ್ಲದ ಕಾರಣಕ್ಕೆ ಎಚ್. ವಿಶ್ವನಾಥ್ ಮಂತ್ರಿ ಆಗಲಿಲ್ಲ: ಟ್ವೀಟ್ ಮೂಲಕ ಕುಟುಕಿದ ಸಿದ್ದರಾಮಯ್ಯ
2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರೆಂದು ವಿಶ್ವನಾಥ್ ನೆನಪು ಮಾಡಿಕೊಳ್ಳಬೇಕು. ಆ ಮೇಲೆ ನನ್ನ ವಿರುದ್ಧ ಮಾತನಾಡಲಿ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ಬೆಂಗಳೂರು: ಎಚ್. ವಿಶ್ವನಾಥ್ಗೆ ಟಿಕೆಟ್ ಕೊಡಿಸಿದ್ದು ಯಾರೆಂದು ನೆನಪಿಸಿಕೊಳ್ಳಲಿ. ಲೋಕಸಭೆ, 2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರೆಂದು ವಿಶ್ವನಾಥ್ ನೆನಪು ಮಾಡಿಕೊಳ್ಳಬೇಕು. ಆ ಮೇಲೆ ನನ್ನ ವಿರುದ್ಧ ಮಾತನಾಡಲಿ ಎಂದು ಟ್ವೀಟ್ ಮೂಲಕ ಎಚ್.ವಿಶ್ವನಾಥ್ಗೆ ಸಿದ್ದರಾಮಯ್ಯ ಕುಟುಕಿದ್ದಾರೆ. ಕೃತಜ್ಞತೆ ಇಲ್ಲದೆ ಇರುವ ಕಾರಣಕ್ಕೆ ಎಚ್. ವಿಶ್ವನಾಥ್ರನ್ನ ಮಂತ್ರಿ ಮಾಡಿಲ್ಲ ಎಂದು ವಿಶ್ವನಾಥ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ, ಅವರ ಬಲದಿಂದ ಅಧಿಕಾರ ಅನುಭವಿಸುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಹೇಳುವ ಈ ವಿಚಾರ ತಮಾಷೆಯಾಗಿದೆ. ಸ್ವಂತಬಲದಲ್ಲಿ ಚುನಾವಣೆ ಗೆದ್ದು ಪೂರ್ಣಾವಧಿ ಸರ್ಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ಅವರೇನಾದರೂ ಐದು ಪೂರ್ತಿ ವರ್ಷ ಮುಖ್ಯಮಂತ್ರಿಯಾಗಿದ್ದಾರಾ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.
ರಾಜಕೀಯ ಜೀವನ ಮುಗಿದ ಮೇಲೆ ಮೈಸೂರಿನಲ್ಲಿ ಇರುತ್ತೇನೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
Published On - 10:59 pm, Wed, 13 January 21