ಭಾರತದಲ್ಲಿ ಕುಸಿದ ವಾಟ್ಸ್​ಆ್ಯಪ್​: ಶೇ.9,483 ರಷ್ಟು ಹೆಚ್ಚಿದ ಸಿಗ್ನಲ್ ಆ್ಯಪ್ ಬಳಕೆ

ಖಾಸಗಿನತಕ್ಕೆ ಸಂಬಂಧಿಸಿ ವಿವಾದ ಹಬ್ಬಿದ ನಂತರ ಭಾರತದಲ್ಲಿ ವಾಟ್ಸಾಪ್​ ಡೌನ್​ಲೋಡ್​ನಲ್ಲಿ ಕುಸಿತ ಕಂಡಿದೆ. ಆದರೆ, ಸಿಗ್ನಲ್ ಆ್ಯಪ್ ಬಳಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ!

ಭಾರತದಲ್ಲಿ ಕುಸಿದ ವಾಟ್ಸ್​ಆ್ಯಪ್​:  ಶೇ.9,483 ರಷ್ಟು ಹೆಚ್ಚಿದ ಸಿಗ್ನಲ್ ಆ್ಯಪ್ ಬಳಕೆ
ಸಿಗ್ನಲ್​ ಆ್ಯಪ್
guruganesh bhat

| Edited By: Lakshmi Hegde

Jan 13, 2021 | 12:50 PM

ದೆಹಲಿ: ವಾಟ್ಸಾಪ್ ತ್ಯಜಿಸಿ ಸಿಗ್ನಲ್ ಆ್ಯಪ್​ ಬಳಕೆಯತ್ತ ಭಾರತದಲ್ಲಂತೂ ಒಲವು ಹೆಚ್ಚುತ್ತ ಸಾಗಿದೆ. ವಾಟ್ಸ್​ಆ್ಯಪ್​ ಖಾಸಗಿತನಕ್ಕೆ ಧಕ್ಕೆ ತರುವುದಿಲ್ಲವೆಂದು ಸ್ಪಷ್ಟನೆ ನೀಡಿದ ಬಳಿಕವೂ ಭಾರತದಲ್ಲಿ ವಾಟ್ಸ್​ಆ್ಯಪ್​​ಗೆ ಹಿನ್ನಡೆ ತಪ್ಪಿಲ್ಲ. ಈವರೆಗೆ ಭಾರತದಲ್ಲೇ 40 ಲಕ್ಷ ಡೌನ್​ಲೋಡ್​ಗಳನ್ನು ಕಂಡಿರುವ ಸಿಗ್ನಲ್​ ಜನವರಿ 6 ರಿಂದ 10 ರವರೆಗೆ 23 ಲಕ್ಷ ಸಲ ಡೌನ್​ಲೋಡ್ ಆಗಿದೆ. ಇದೇ ವೇಳೆ ಟೆಲಿಗ್ರಾಂ 15 ಲಕ್ಷ ಡೌನ್​ಗಳನ್ನು ಕಂಡಿದೆ.

ವಾಟ್ಸ್​ಆ್ಯಪ್​ ಖಾಸಗಿತನದ ವಿವಾದ ಹಬ್ಬುವ ಮುನ್ನ ಸಿಗ್ನಲ್ ಆ್ಯಪ್ ಭಾರತದಲ್ಲಿ ಅಷ್ಟೇನೂ ಪರಿಚಿತ ಆ್ಯಪ್ ಆಗಿರಲಿಲ್ಲ. ಜನವರಿ 1ರಿಂದ 5ರವರೆಗೆ 24 ಸಾವಿರ ಡೌನ್​ಲೋಡ್​ಗಳನ್ನಷ್ಟೇ ಸಿಗ್ನಲ್ ಕಂಡಿತ್ತು. ಆದರೆ ಜನವರಿ 6 ರಿಂದ ಆದ ಡೌನ್​ಲೋಡ್​ಗೆ ಈ ಮೊದಲ ಅಂಕಿ ಸಂಖ್ಯೆಗಳನ್ನು ಹೋಲಿಸಿದರೆ ಸಿಗ್ನಲ್ ಡೌನ್​ಲೋಡ್​ನಲ್ಲಿ ಶೇ.9,483 ರಷ್ಟು ಹೆಚ್ಚಳ ಕಂಡುಬಂದಿದೆ! ಆದರೆ ಇದೇ ವೇಳೆ ವಾಟ್ಸ್​ಆ್ಯಪ್​ ಬಳಕೆದಾರರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಜನವರಿ 6 ರಿಂದ 10ರವರೆಗೆ 13 ಲಕ್ಷ ಡೌನ್​ಲೋಡ್​ಗಳೊಂದಿಗೆ ಶೇ.34ರಷ್ಟು ಕುಸಿತ ಕಂಡಿದೆ.

ವಾಟ್ಸ್​ಆ್ಯಪ್​ ತನ್ನ ಸೋದರ ಸಂಸ್ಥೆ ಫೇಸ್​ಬುಕ್​ಗೆ ಬಳಕೆದಾರರ ಖಾಸಗಿ ಮಾಹಿತಿಯನ್ನು ‘ಫೇಸ್​ಬುಕ್ ಬ್ಯುಸಿನೆಸ್​’ಗಾಗಿ ಅವಕಾಶ ಒದಗಿಸುವುದಾಗಿ ತನ್ನ ಹೊಸ ನೀತಿಯಲ್ಲಿ ಹೇಳಿತ್ತು. ವಾಟ್ಸ್​ಆ್ಯಪ್​ ​ ಬ್ಯಾಟರಿ ಪ್ರಮಾಣ, ಸಿಗ್ನಲ್​ ಸಾಮರ್ಥ್ಯ, ಆ್ಯಪ್​ ವರ್ಷನ್​, ಬ್ರೌಸಿಂಗ್​ ಹಿಸ್ಟರಿ, ಮೊಬೈಲ್​ ನೆಟ್ವರ್ಕ್​, ಮೊಬೈಲ್​ ಸಂಖ್ಯೆ, ಮೊಬೈಲ್​ ಆಪರೇಟರ್​, ಐಎಸ್​ಪಿ, ಭಾಷೆ, ಟೈಮ್​ ಜೋನ್​, ವಹಿವಾಟಿನ ಮಾಹಿತಿ, ಐಪಿ ಅಡ್ರೆಸ್​ ಸೇರಿ ಇತರ ಮಾಹಿತಿಯನ್ನು ವಾಟ್ಸ್​ಆ್ಯಪ್​ ಇದೀಗ ಫೇಸ್​ಬುಕ್​ ಹಾಗೂ ಇನ್​​ಸ್ಟಾಗ್ರಾಂ ಜೊತೆ ಹಂಚಿಕೊಳ್ಳುವ ಪಾಲಿಸಿ ತಂದಿತ್ತು.

How to | ಸಿಗ್ನಲ್ ಆ್ಯಪ್ ಬಳಕೆ ಹೇಗೆ? ಡೆಸ್ಕ್​ಟಾಪ್​ಗೆ ಡೌನ್​ಲೋಡ್ ಮಾಡಬಹುದಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada