ತಮಿಳುನಾಡಿನ ಶಿವಕಾಶಿ ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ: 6 ಮಂದಿ ಸಾವು

ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನ ಅವಘಡ ಸಂಭವಿಸಿ 6 ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ದುರಂತ ನಡೆದಿದೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿಯಲ್ಲಿ ಘಟನೆ ಸಂಭವಿಸಿದೆ.

  • TV9 Web Team
  • Published On - 20:00 PM, 25 Feb 2021
ತಮಿಳುನಾಡಿನ ಶಿವಕಾಶಿ ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ: 6 ಮಂದಿ ಸಾವು
ಪ್ರಾತಿನಿಧಿಕ ಚಿತ್ರ

ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನ ಅವಘಡ ಸಂಭವಿಸಿ 6 ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ದುರಂತ ನಡೆದಿದೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿಯಲ್ಲಿ ಘಟನೆ ಸಂಭವಿಸಿದೆ.

ಆಕಸ್ಮಿಕ ಬೆಂಕಿಯಿಂದ 10 ಎಕರೆ ಜೋಳದ ಬೆಳೆ ಸುಟ್ಟು ಭಸ್ಮ
ಇತ್ತ, ಆಕಸ್ಮಿಕ ಬೆಂಕಿಯಿಂದ 10 ಎಕರೆ ಜೋಳದ ಬೆಳೆ ಸುಟ್ಟು ಭಸ್ಮವಾಗಿರುವ ಘಟನೆ ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಮನಗನಾಳ ಗ್ರಾಮದಲ್ಲಿ ನಡೆದಿದೆ. ಮನಗನಾಳ ಗ್ರಾಮದಲ್ಲಿ ಬೆಳೆದಿದ್ದ ಜೋಳದ ಬೆಳೆ ಸುಟ್ಟು ಭಸ್ಮವಾಗಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಡೂರಿನ ಲಾಡ್ಜ್​ನಲ್ಲಿ ವಿಷ ಸೇವಿಸಿ ಯುವಕ ಆತ್ಮಹತ್ಯೆ
ಲಾಡ್ಜ್​ನಲ್ಲಿ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ವಿಶ್ವಾಸ್(28) ಆತ್ಮಹತ್ಯೆಗೆ ಶರಣಾದ ಯುವಕ. ಡೆತ್ ನೋಟ್ ಬರೆದಿಟ್ಟು ವಿಶ್ವಾಸ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಲ ಮಾಡಿಕೊಂಡಿರುವುದಾಗಿ ಡೆತ್​ನೋಟ್​ನಲ್ಲಿ ಯುವಕ ಉಲ್ಲೇಖಿಸಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಡಿವಾಳ ಬಳಿ ಲಾರಿ ಡಿಕ್ಕಿ: ಬೈಕ್ ಸವಾರ ದುರ್ಮರಣ
ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ದುರ್ಮರಣ ಹೊಂದಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಡಿವಾಳ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಕಾಡದೇವನಹಳ್ಳಿ ನಿವಾಸಿ 28 ವರ್ಷದ ಕೃಷ್ಣ ಮೃತ ಸವಾರ. ಇನ್ನು, ಬೈಕ್​ನಲ್ಲಿದ್ದ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಲೈನ್ ದುರಸ್ತಿ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಲೈನ್‌ಮ್ಯಾನ್ ಸಾವು
ಲೈನ್ ದುರಸ್ತಿ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಲೈನ್‌ಮ್ಯಾನ್ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾ. ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ನಡೆದಿದೆ. ಲೈನ್‌ಮ್ಯಾನ್ ತೇಜಸ್(25) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

ನಕಲಿ ಕೀ ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು
ನಕಲಿ ಕೀ ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಘಟನೆ ಬೆಂಗಳೂರಿನ ಹೇರೋಹಳ್ಳಿಯಲ್ಲಿ ನಡೆದಿದೆ. ಜೊತೆಗೆ, ಇತ್ತೀಚೆಗೆ ಏರಿಯಾದ ಸುತ್ತಮುತ್ತ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ.

ಬೈಕ್​ನಲ್ಲಿ ಬಂದು ನಿಲ್ಲಿಸಿದ್ದ ವಾಹನಗಳನ್ನು ಗುರುತಿಸುತ್ತಿದ್ದ ಕಳ್ಳರು ನಂತರ ಕ್ಷಣಾರ್ಧದಲ್ಲಿ ನಕಲಿ ಬೀಗದ ಕೈ ಬಳಸಿ ಬೈಕ್​ ಎಗರಿಸಿ ಪರಾರಿಯಾಗಿದ್ದಾರೆ. ಸದ್ಯ, ಬೈಕ್ ಮಾಲೀಕ ಸತೀಶ್​ರಿಂದ ಬ್ಯಾಡರಹಳ್ಳಿ ಠಾಣೆಗೆ ದೂರು ದಾಖಲಾಗಿದೆ. ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಗಾಂಜಾ ಸೇವಿಸುತ್ತಿದ್ದ 13 ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ
ಗಾಂಜಾ ಸೇವಿಸುತ್ತಿದ್ದ 13 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿ ನಡೆದಿದೆ. ವಿದ್ಯಾರ್ಥಿಗಳು ಹೆಸರಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನವರು. ಸದ್ಯ, ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸರು ಬುದ್ಧಿವಾದ ಹೇಳಿದರು. ಬುದ್ಧಿವಾದ ಹೇಳಿ ಎಲ್ಲರನ್ನೂ ಬಿಡುಗಡೆ ಮಾಡಿದರು.

ರೋಣಿಹಾಳ ಗ್ರಾಮ ಲೆಕ್ಕಾಧಿಕಾರಿ ACB ಅಧಿಕಾರಿಗಳ ಬಲೆಗೆ
ಗ್ರಾಮ ಲೆಕ್ಕಾಧಿಕಾರಿ ACB ಅಧಿಕಾರಿಗಳ ಬಲೆಗೆ ಬಿದ್ದಿರುವ ಸಂಗತಿ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ರೋಣಿಹಾಳದಿಂದ ವರದಿಯಾಗಿದೆ. ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ಬಸವರಾಜ ಮಲ್ಲಪ್ಪಗೋಳ ACB ಬಲೆಗೆ ಬಿದ್ದಿದ್ದಾರೆ. ಬಸವರಾಜ್​ ಬಸವನಬಾಗೇವಾಡಿಯ ಸ್ಟೇಟ್ ಬ್ಯಾಂಕ್ ಬಳಿ ಲಂಚ ಸ್ವೀಕರಿಸ್ತಿದ್ದರು. ವಿಧವಾ ವೇತನ ಅರ್ಜಿ ಹಾಗೂ ಪ್ರಮಾಣಪತ್ರ ನೀಡಲು ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ರೇಖಾ ಬಡಿಗೇರ ಎಂಬುವವರ ಬಳಿ 3 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಇದನ್ನೂ ಓದಿ: ಕೆರೆಯಲ್ಲಿ ಬಚ್ಚಿಟ್ಟಿದ್ದ 330 ಲೀಟರ್ ಕಳ್ಳಭಟ್ಟಿಯ ವಾಸನೆ ಹಿಡಿದ ಖಾಕಿ ಪಡೆ!