ಬನ್ನಂಜೆ ಗೋವಿಂದಾಚಾರ್ಯರಿಗೆ ನೆಟ್ಟಿಗರಿಂದ ಶ್ರದ್ಧಾಂಜಲಿ; ಟ್ವಿಟರ್​​ನಲ್ಲಿ ಮೋದಿ ಸಂತಾಪ

ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಪಾರಂಗತರಾಗಿದ್ದ ಬನ್ನಂಜೆಯವರ ನಿಧನದಿಂದ ನಾಡು ಶ್ರೇಷ್ಠ ಜ್ಞಾನಿಗಳನ್ನು, ಸಾರಸ್ವತ ಲೋಕದ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ  ಯಡಿಯೂರಪ್ಪ ಟ್ವೀಟಿಸಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯರಿಗೆ ನೆಟ್ಟಿಗರಿಂದ ಶ್ರದ್ಧಾಂಜಲಿ; ಟ್ವಿಟರ್​​ನಲ್ಲಿ ಮೋದಿ ಸಂತಾಪ
ಬನ್ನಂಜೆ ಗೋವಿಂದಾಚಾರ್ಯರು (ಚಿತ್ರಕೃಪೆ: facebook.com/MandirGuy)
Rashmi Kallakatta

| Edited By: ganapathi bhat

Dec 13, 2020 | 6:56 PM


ಬೆಂಗಳೂರು: ಹಿರಿಯ ವಿದ್ವಾಂಶ ಬನ್ನಂಜೆ ಗೋವಿಂದಾಚಾರ್ಯರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅವರು ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ ಅವರ ಹೆಸರು ಅಜರಾಮರವಾಗಲಿದೆ. ಸಂಸ್ಕೃತ ಮತ್ತು ಕನ್ನಡದ ಬಗೆಗಿನ ಅವರ ಉತ್ಸಾಹ ಶ್ಲಾಘನೀಯ. ಅವರ ಕೃತಿಗಳು ಭವಿಷ್ಯದ ಪೀಳಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅವರ ನಿಧನದಿಂದ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

 

ವಿದ್ಯಾ ವಾಚಸ್ಪತಿ ಪದ್ಮಶ್ರೀ ಪುರಸ್ಕೃತ ಡಾ. ಬನ್ನಂಜೆ ಗೋವಿಂದಾಚಾರ್ಯರು ಇಂದು ಉಡುಪಿಯ ಸ್ವಗೃಹದಲ್ಲಿ ಸ್ವರ್ಗಸ್ಥರಾಗಿದ್ದಾರೆ. ಆಧ್ಯಾತ್ಮಿಕ ಲೋಕಕ್ಕೆ ಗೋವಿಂದಾಚಾರ್ಯರ ಅಗಲಿಕೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರಾಜಕಾರಣಿ ವೇದವ್ಯಾಸ ಕಾಮತ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇದ್ಯಾವ ಹಾಳು 2020 ಶಿವನೇ. ಹೀಗೆ ಇರೋ ದೊಡ್ಡ ದೊಡ್ಡ ಕುಳಗಳನ್ನು ಒಂದೊಂದಾಗಿ ಕರ್ಕೊಂಡು ಹೋಗಿ ನಮ್ಮನ್ನು ಇನ್ನೆಷ್ಟು ಬಡವಾಗಿಸುವೆ ಎಂದು ನಟ ನಂದಗೋಪಾಲ್ ಫೇಸ್​ಬುಕ್​ನಲ್ಲಿ ನಲ್ಲಿ ಸ್ಟೇಟಸ್  ಹಾಕಿದ್ದಾರೆ.  

 

ಗೋವಿಂದಾಚಾರ್ಯರ ನಿಧನಕ್ಕೆ ಹಲವಾರು ಗಣ್ಯರು ಟ್ವಿಟರ್​ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಪಾರಂಗತರಾಗಿದ್ದ ಬನ್ನಂಜೆಯವರ ನಿಧನದಿಂದ ನಾಡು ಶ್ರೇಷ್ಠ ಜ್ಞಾನಿಗಳನ್ನು, ಸಾರಸ್ವತ ಲೋಕದ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ  ಯಡಿಯೂರಪ್ಪ ಟ್ವೀಟಿಸಿದ್ದಾರೆ.

ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರ ನಿಧನದಿಂದ ದುಃಖವಾಗಿದೆ. ವಿಷ್ಣುಸಹಸ್ರನಾಮ, ಶ್ರೀಮದ್ ಭಗವದ್ಗೀತೆ ಮತ್ತು ಇನ್ನೂ ಅನೇಕ ಮಹಾ ವೈದಿಕ ಸಾಹಿತ್ಯದ ಸ್ಪಷ್ಟ ಅನುವಾದದೊಂದಿಗೆ ಪ್ರೇಕ್ಷಕರನ್ನು ಮೋಡಿ ಮಾಡಿದ ಮಹಾನ್ ವ್ಯಕ್ತಿ ಅವರು ಎಂದು ಮನೋಹರ್ ರಮೇಶ್ ಎಂಬವರು ಟ್ವೀಟಿಸಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯ ಶ್ರೇಷ್ಠ ವಾಗ್ಮಿಗಳಲ್ಲಿ ಒಬ್ಬರು! ಅವರ ಅಗಲಿಕೆ ತುಂಬಲಾರದ ನಷ್ಟ. ತಮ್ಮ ಜ್ಞಾನವನ್ನು ಅವರು ತನ್ನ ಪ್ರವಚನಗಳಲ್ಲಿ ಹಂಚಿಕೊಳ್ಳಬಹುದಿತ್ತು!
ಓಂ ಶಾಂತಿ.

ಡಾ.ವಿಷ್ಣು ರವರನ್ನು ಆಧ್ಯಾತ್ಮದ ಉತ್ತುಂಗಕ್ಕೆ ತಲುಪಿಸಿದ, ವಿಷ್ಣು ದಾದಾರ ಆಧ್ಯಾತ್ಮಿಕ ಗುರುಗಳು ಪದ್ಮಶ್ರೀ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ ರವರ ಆತ್ಮಕ್ಕೆ ಸದ್ಗತಿಸಿಗಲಿ ಎಂದು ವಿಷ್ಣುವರ್ಧನ್ ಫ್ಯಾನ್ ಕ್ಲಬ್ ಟ್ವಿಟರ್ ಹ್ಯಾಂಡಲ್ ಟ್ವೀಟಿಸಿದೆ.

ಸೃಷ್ಟಿಶೀಲ, ಸೃಜನಶೀಲ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ: ಲಕ್ಷ್ಮೀಶ ತೋಳ್ಪಾಡಿ

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada