ದುಬೈನಿಂದ ನೇರವಾಗಿ ಚೆನ್ನೈಗೆ ಬಂದ ನೂರಾರು ಭಾರತೀಯರು

ದುಬೈನಿಂದ ನೇರವಾಗಿ ಚೆನ್ನೈಗೆ ಬಂದ ನೂರಾರು ಭಾರತೀಯರು

ಚೆನ್ನೈ: ಕೊರೊನಾ ಲಾಕ್​ಡೌನ್​ನಿಂದಾಗಿ ವಿದೇಶದಲ್ಲಿ ಸಿಲುಕಿದ್ದ ಭಾರತೀಯರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಮೂವರು ಮಕ್ಕಳು ಸೇರಿದಂತೆ 182 ಭಾರತೀಯರು ಚೆನ್ನೈಗೆ ತಡರಾತ್ರಿ ಆಗಮಿಸಿದ್ದಾರೆ.

ಮತ್ತೊಂದು ವಿಶೇಷ ವಿಮಾನದಲ್ಲಿ ದುಬೈನಿಂದ 177 ಭಾರತೀಯರು ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಕ್ವಾರಂಟೈನ್ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.