ನೆಲಕ್ಕುರುಳಿದ ಪೆಂಡಾಲ್ ಪೈಪ್​ಗಳು; ಸಿಎಂ ಯಡಿಯೂರಪ್ಪ ಸ್ವಲ್ಪದ್ರಲ್ಲೇ ಬಚಾವ್

ನೆಲಕ್ಕುರುಳಿದ ಪೆಂಡಾಲ್ ಪೈಪ್​ಗಳು; ಸಿಎಂ ಯಡಿಯೂರಪ್ಪ ಸ್ವಲ್ಪದ್ರಲ್ಲೇ ಬಚಾವ್

ಭದ್ರತಾ ವೈಫಲ್ಯದಿಂದ ಸಿಎಂ ಬಿಎಸ್​ ಯಡಿಯೂರಪ್ಪ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅಚಾತುರ್ಯ ಘಟನೆಯೊಂದು ನಡೆದಿದೆ. ಬಿಎಸ್​ವೈ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗಾಳಿಯ ರಭಸಕ್ಕೆ ಕಬ್ಬಿಣದ ಪೈಪ್​ಗಳು ಕಿತ್ತುಹೋಗಿ ಕೆಳಗೆ ಬಿದ್ದಿವೆ. ಈ ವೇಳೆ ಪಕ್ಕದಲ್ಲೇ ಇದ್ದ ಬಿಎಸ್​ ಯಡಿಯೂರಪ್ಪ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಆ ಕ್ಷಣದಲ್ಲಿ ಸ್ವಲ್ಪ ಯಾಮಾರಿದ್ರೂ ಕಬ್ಬಿಣದ ವೇದಿಕೆ ಸಿಎಂ ಬಿಎಸ್​ ಯಡಿಯೂರಪ್ಪ ತಲೆ ಮೇಲೆ ಬೀಳ್ತಿತ್ತು. ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನು ಈ ಘಟನೆ ನಡೆಯುತ್ತಿದ್ದಂತೆ […]

sadhu srinath

|

Sep 11, 2019 | 6:31 PM

ಭದ್ರತಾ ವೈಫಲ್ಯದಿಂದ ಸಿಎಂ ಬಿಎಸ್​ ಯಡಿಯೂರಪ್ಪ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಅಚಾತುರ್ಯ ಘಟನೆಯೊಂದು ನಡೆದಿದೆ. ಬಿಎಸ್​ವೈ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗಾಳಿಯ ರಭಸಕ್ಕೆ ಕಬ್ಬಿಣದ ಪೈಪ್​ಗಳು ಕಿತ್ತುಹೋಗಿ ಕೆಳಗೆ ಬಿದ್ದಿವೆ. ಈ ವೇಳೆ ಪಕ್ಕದಲ್ಲೇ ಇದ್ದ ಬಿಎಸ್​ ಯಡಿಯೂರಪ್ಪ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಆ ಕ್ಷಣದಲ್ಲಿ ಸ್ವಲ್ಪ ಯಾಮಾರಿದ್ರೂ ಕಬ್ಬಿಣದ ವೇದಿಕೆ ಸಿಎಂ ಬಿಎಸ್​ ಯಡಿಯೂರಪ್ಪ ತಲೆ ಮೇಲೆ ಬೀಳ್ತಿತ್ತು.

ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನು ಈ ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾರ್ಯಕ್ರಮದ ವೇದಿಕೆ ಬೀಳದಂತೆ ಹಗ್ಗದಿಂದ ಕಟ್ಟಿದ್ದಾರೆ, ಅಲ್ಲದೆ ಕಾರ್ಯಕ್ರಮ ಮುಗಿಯೋವರೆಗೂ ವೇದಿಕೆಯ ಕಬ್ಬಿಣದ ಪೈಪ್​ಗಳನ್ನು ಪೊಲೀಸರು ಹಿಡಿದುಕೊಂಡೇ ಇದ್ದರು.

Follow us on

Related Stories

Most Read Stories

Click on your DTH Provider to Add TV9 Kannada