ಹರಾಜು ಮೂಲಕ ಆಗಿರುವ ಗ್ರಾ.ಪಂ ಸದಸ್ಯರ ಅವಿರೋಧ ಆಯ್ಕೆಯನ್ನು ಅಸಿಂಧುಗೊಳಿಸಿದ ಚುನಾವಣಾ ಆಯೋಗ

ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ 13 ಗ್ರಾ.ಪಂ. ಸ್ಥಾನಗಳಿಗೆ ಹರಾಜು ನಡೆದಿತ್ತು.ಈ ಕುರಿತು ಕುರುಗೋಡು ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಆದರೆ, ಪ್ರಕರಣ ದಾಖಲಾಗಿದ್ರೂ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು.ಇದೀಗ, ಹರಾಜು ಮೂಲಕ ಆಗಿರುವ ಅವಿರೋಧ ಆಯ್ಕೆಯನ್ನ ಆಯೋಗ ಅಸಿಂಧುಗೊಳಿಸಿದೆ.

  • Publish Date - 6:09 pm, Fri, 18 December 20
ಹರಾಜು ಮೂಲಕ ಆಗಿರುವ ಗ್ರಾ.ಪಂ ಸದಸ್ಯರ ಅವಿರೋಧ ಆಯ್ಕೆಯನ್ನು ಅಸಿಂಧುಗೊಳಿಸಿದ ಚುನಾವಣಾ ಆಯೋಗ
ರಾಜ್ಯ ಚುನಾವಣಾ ಆಯೋಗ

ಬಳ್ಳಾರಿ: ಹರಾಜು ಮೂಲಕ ಆಗಿರುವ ಗ್ರಾ.ಪಂ ಸದಸ್ಯರ ಅವಿರೋಧ ಆಯ್ಕೆಯನ್ನು ಅಸಿಂಧುಗೊಳಿಸಿ ರಾಜ್ಯ ಚುನಾವಣಾ ಆಯೋಗದಿಂದ ಮಹತ್ವದ ಆದೇಶ ಹೊರಬಿದ್ದಿದೆ.

ಜಿಲ್ಲೆಯ ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ 13 ಗ್ರಾ.ಪಂ. ಸ್ಥಾನಗಳಿಗೆ ಹರಾಜು ನಡೆದಿತ್ತು. ದೇವಸ್ಥಾನದ ಅಭಿವೃದ್ಧಿ ಹೆಸರಿನಲ್ಲಿ 13 ಸ್ಥಾನಗಳಿಗೆ ಹರಾಜು ಮೂಲಕ ಸದಸ್ಯರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿತ್ತು. ಸಿಂಧಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಲೂರು ಗ್ರಾಮದಲ್ಲಿ ಪ್ರಕರಣ ನಡೆದಿತ್ತು.

ಈ ಕುರಿತು ಕುರುಗೋಡು ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಆದರೆ, ಪ್ರಕರಣ ದಾಖಲಾಗಿದ್ರೂ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಆದರೆ ಇದೀಗ, ಹರಾಜು ಮೂಲಕ ಆಗಿರುವ ಅವಿರೋಧ ಆಯ್ಕೆಯನ್ನ ಆಯೋಗ ಅಸಿಂಧುಗೊಳಿಸಿದೆ.

ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರು ಗಡಿಪಾರು