ಕೊಡೇರಿ ನಾಡ ದೋಣಿ ದುರಂತ: ಇನ್ನೂ ಸಿಗದ ನಾಲ್ವರು ಮೀನುಗಾರರು
ಉಡುಪಿ: ಕೊಡೇರಿ ನಾಡ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರು ಇನ್ನೂ ಕೂಡ ಪತ್ತೆಯಾಗಿಲ್ಲ. ಶೇಖರ ಖಾರ್ವಿ(39), ನಾಗ ಯಾನೆ ನಾಗರಾಜ್ ಖಾರ್ವಿ(55) ಲಕ್ಷ್ಮಣ ಖಾರ್ವಿ(34), ಮಂಜುನಾಥ ಖಾರ್ವಿ(40)ನಾಪತ್ತೆಯಾದ ಮೀನುಗಾರರು. ಸಮುದ್ರ ಪ್ರಕ್ಷ್ಯುಬ್ದವಾದ ಹಿನ್ನಲೆಯಲ್ಲಿ ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕರಾವಳಿ ಕಾವಲುಪಡೆ ಶೋಧಕಾರ್ಯ ನಡೆಸಲಿದೆ. ಕರಾವಳಿ ಕಾವಲು ಪಡೆಯೊಂದಿಗೆ ಕೋಸ್ಟ್ ಗಾರ್ಡ್ ಟೀಂ ಸಾಥ್ ನೀಡಲಿದೆ. ಕೋಸ್ಟ್ ಗಾರ್ಡ್ ಶಿಪ್ ಮೂಲಕ ಸಮುದ್ರದಲ್ಲಿ ಹುಡುಕಾಟ ನಡೆಸುವ ಸಾಧ್ಯತೆ ಇದೆ. ಭಾರೀ ಅಲೆಗಳ […]

ಉಡುಪಿ: ಕೊಡೇರಿ ನಾಡ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರು ಇನ್ನೂ ಕೂಡ ಪತ್ತೆಯಾಗಿಲ್ಲ. ಶೇಖರ ಖಾರ್ವಿ(39), ನಾಗ ಯಾನೆ ನಾಗರಾಜ್ ಖಾರ್ವಿ(55) ಲಕ್ಷ್ಮಣ ಖಾರ್ವಿ(34), ಮಂಜುನಾಥ ಖಾರ್ವಿ(40)ನಾಪತ್ತೆಯಾದ ಮೀನುಗಾರರು.
ಸಮುದ್ರ ಪ್ರಕ್ಷ್ಯುಬ್ದವಾದ ಹಿನ್ನಲೆಯಲ್ಲಿ ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕರಾವಳಿ ಕಾವಲುಪಡೆ ಶೋಧಕಾರ್ಯ ನಡೆಸಲಿದೆ. ಕರಾವಳಿ ಕಾವಲು ಪಡೆಯೊಂದಿಗೆ ಕೋಸ್ಟ್ ಗಾರ್ಡ್ ಟೀಂ ಸಾಥ್ ನೀಡಲಿದೆ. ಕೋಸ್ಟ್ ಗಾರ್ಡ್ ಶಿಪ್ ಮೂಲಕ ಸಮುದ್ರದಲ್ಲಿ ಹುಡುಕಾಟ ನಡೆಸುವ ಸಾಧ್ಯತೆ ಇದೆ.
ಭಾರೀ ಅಲೆಗಳ ಹೊಡೆತಕ್ಕೆ ಸಾಗರ್‌ಶ್ರೀ ನಾಡದೋಣಿ ಬಂಡೆಗೆ ಡಿಕ್ಕಿ ಹೊಡೆದಿತ್ತು. ಬೈಂದೂರು ತಾಲೂಕಿನ ಕಿರಿಮಂಜೇಶ್ಚರದ ಕೊಡೇರಿಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಮೀನುಗಾರಿಕೆಗೆ 12ಮೀನುಗಾರರು ತೆರಳಿದ್ರು. ಮೀನುಗಾರಿಕೆ ಮುಗಿಸಿ ಮರಳುತ್ತಿದ್ದಾಗ ಘಟನೆ ನಡೆದಿತ್ತು.
ನಾಲ್ವರಲ್ಲಿ ಒಬ್ಬರ ಮೃತ ದೇಹ ಪತ್ತೆ: ನಾಲ್ವರ ಪೈಕಿ ಮೀನುಗಾರ ನಾಗರಾಜ್ ಖಾರ್ವಿ ಮೃತದೇಹ ಪತ್ತೆಯಾಗಿದೆ. ಇನ್ನು ಉಳಿದ ಮೂವರು ಮೀನುಗಾರರಿಗಾಗಿ ಶೋಧ ಮುಂದುವರೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಬಳಿ ಕರಾವಳಿ ಕಾವಲುಪಡೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿದೆ.
Published On - 8:22 am, Mon, 17 August 20