ಬಂಡೀಪುರ ಅರಣ್ಯದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ವಾಸ್ತವ್ಯ, ಯಾಕೆ ಗೊತ್ತಾ!?

ಬಂಡೀಪುರ ಅರಣ್ಯದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ವಾಸ್ತವ್ಯ, ಯಾಕೆ ಗೊತ್ತಾ!?

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸೂಪರ್ ಸ್ಟಾರ್  ರಜಿನಿಕಾಂತ್ ವಾಸ್ತವ್ಯ ಹೂಡಿದ್ದಾರೆ. ವನ್ಯಜೀವಿ ಕುರಿತು ಸಾಕ್ಷ್ಯಚಿತ್ರದಲ್ಲಿ ನಟಿಸಲು ತಲೈವಾ ಆಗಮಿಸಿದ್ದು, ಚಿತ್ರೀಕರಣಕ್ಕೆ ಅರಣ್ಯ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಸಾಕ್ಷ್ಯಚಿತ್ರ ಚಿತ್ರೀಕರಿಸಿದ ಬೇರ್ ಗ್ರೀಲ್ಸ್ ಅವರೇ ರಜಿನಿಕಾಂತ್ ಅವರ ಸಾಕ್ಷ್ಯ ಚಿತ್ರ ಡೈರೆಕ್ಷನ್ ಮಾಡಲಿದ್ದಾರೆ.

ಬೆನಿಜಾಯ್ ಏಷ್ಯಾ ಗ್ರೂಪ್​ನ ಸೆವೆನ್ ಟಾರಸ್ ಸ್ಟುಡಿಯೋದಿಂದ ವನ್ಯಜೀವಿ ಸಾಕ್ಷ್ಯಚಿತ್ರ ತಯಾರಾಗುತ್ತಿದ್ದು, ಜನವರಿ 27ರಂದು ಅರ್ಧ ದಿನ ಮಾತ್ರ ಶೂಟಿಂಗ್ ನಡೆಸಿದೆ. ಜನವರಿ 28ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಮತ್ತು ಜ.29 ರಂದು ಅರ್ಧ ದಿನ ಶೂಟಿಂಗ್ ನಡೆಸಲಿದೆ. ಇಂದು ಮಧ್ಯಾಹ್ನದ ನಂತರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಹುಲಿ ಸಂರಕ್ಷಿತಾರಣ್ಯದಲ್ಲಿ ಶೂಟಿಂಗ್ ನಡೆಯುತ್ತಿರುವ ಕಾರಣ ಯಾವುದೇ ಕಾರಣಕ್ಕೂ ಶಬ್ದಮಾಲಿನ್ಯ, ವಾಯುಮಾಲಿನ್ಯವಾಗದಂತೆ ಅರಣ್ಯ ಇಲಾಖೆ ಷರತ್ತು ವಿಧಿಸಿದೆ. ಅಲ್ಲದೆ, ಅರಣ್ಯ ಸಂಪತ್ತಿಗೆ ಧಕ್ಕೆಯಾಗದಂತೆ ಹಾಗೂ ಜವಾಬ್ದಾರಿಯುತ ಅರಣ್ಯಾಧಿಕಾರಿಗಳ ಸಮಕ್ಷಮದಲ್ಲಿ ಚಿತ್ರೀಕರಣ ನಡೆಸುವಂತೆ ಸೂಚನೆ ನೀಡಿದೆ.