ವಿಷ ಮದ್ಯ ಸೇವನೆ ಶಂಕೆ: ಮಧ್ಯಪ್ರದೇಶದಲ್ಲಿ 11 ಸಾವು, 8 ಮಂದಿ ಅಸ್ವಸ್ಥ

ಸೋಮವಾರ ರಾತ್ರಿ ಮನುಪುರ್ ಮತ್ತು ಪಹವಲಿ ಗ್ರಾಮದಲ್ಲಿ ಮದ್ಯ ಸೇವಿಸಿದ 11 ಮಂದಿ ಸಾವಿಗೀಡಾಗಿದ್ದು, ಮದ್ಯ ವಿಷಪೂರಿತವಾಗಿತ್ತೇ ಎಂಬುದು ಇನ್ನೂ ಖಚಿತವಾಗಿಲ್ಲ.

  • TV9 Web Team
  • Published On - 11:52 AM, 12 Jan 2021
ವಿಷ ಮದ್ಯ ಸೇವನೆ ಶಂಕೆ: ಮಧ್ಯಪ್ರದೇಶದಲ್ಲಿ 11 ಸಾವು, 8 ಮಂದಿ ಅಸ್ವಸ್ಥ
ಪ್ರಾತಿನಿಧಿಕ ಚಿತ್ರ

ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮನುಪುರ್ ಮತ್ತು ಪಹವಲಿ ಗ್ರಾಮದಲ್ಲಿ ಶಂಕಿತ  ವಿಷ ಮದ್ಯ ಸೇವಿಸಿ 11 ಮಂದಿ ಸಾವಿಗೀಡಾಗಿದ್ದು 8 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮೊರೆನಾ ಎಸ್​ಪಿ ಅನುರಾಗ್ ಸುಜನಿಯಾ, ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದೆ. ಗ್ರಾಮದ ಕೆಲವು ಜನರು ಬಿಳಿ ಬಣ್ಣದ ಮದ್ಯ  ಸೇವಿಸಿದ್ದು ಇದು ವಿಷ ಮದ್ಯ ಎಂದು ಶಂಕಿಸಲಾಗಿದೆ ಎಂದಿದ್ದಾರೆ. ಮದ್ಯ ಸೇವಿಸಿ ತೀವ್ರ ಅಸ್ವಸ್ಥರಾಗಿರುವ ಎಂಟು ಮಂದಿಯನ್ನು ಗ್ವಾಲಿಯರ್​ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ನಂತರವೇ ಜನರು ಸೇವಿಸಿದ ಮದ್ಯ ವಿಷಯುಕ್ತವಾಗಿತ್ತೇ ಎಂಬುದನ್ನು ಖಚಿತವಾಗಿ ಹೇಳಬಹುದು ಎಂದಿದ್ದಾರೆ ಅಧಿಕಾರಿಗಳು. 

ಈ ಘಟನೆಯಿಂದ ನನಗೆ ದುಃಖವಾಗಿದೆ.  ಪೊಲೀಸ್  ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಲಾಗುವುದು. ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಈ ತಂಡ ತನಿಖೆ ನಡೆಸಲಿದೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು  ಎಂದು  ಮಧ್ಯ ಪ್ರದೇಶದ ಸಚಿವ ನರೋಟ್ಟಂ ಮಿಶ್ರಾ ಹೇಳಿದ್ದಾರೆ.

ವಿಷಪೂರಿತ ಮದ್ಯ ಸೇವನೆ: ನಾಲ್ವರ ಸಾವು, 15 ಜನರು ಅಸ್ವಸ್ಥ