ಕೊಠಡಿಗಳು ಗ್ರಾಮ ಪಂಚಾಯತ್ ಚುನಾವಣೆಗೆ ಬಳಕೆ: ಕಾಲೇಜಿಗೆ ಬಂದ ವಿದ್ಯಾರ್ಥಿಗಳು ವಾಪಸ್​

ಕಾಲೇಜಿನ ಕೋಣೆಗಳು ಚುನಾವಣೆಗೆ ಬಳಿಕಯಾದ ಹಿನ್ನೆಲೆಯಿಂದಾಗಿ ಗಬ್ಬೆದ್ದು ನಾರುತ್ತಿವೆ. ಎಲ್ಲಂದರಲ್ಲಿ ಕಸ ಬಿದ್ದಿದ್ದು ತಾಲೂಕು ಆಡಳಿತ ಕಸವನ್ನ ಕ್ಲೀನ್ ಮಾಡುವ ಗೋಜಿಗೆ ಇನ್ನೂ ಸಹ ಹೋಗಿಲ್ಲ. ಇಂದಿನಿಂದ ಕಾಲೇಜು ಆರಂಭವಾಗಿರುವುದರಿಂದ ಉಪನ್ಯಾಸಕರು ಕಾಲೇಜಿನಲ್ಲಿ ಬಂದು ಕುಳಿತ್ತಿದ್ದಾರೆ.

  • TV9 Web Team
  • Published On - 12:15 PM, 1 Jan 2021
ಕೊಠಡಿಗಳು ಗ್ರಾಮ ಪಂಚಾಯತ್ ಚುನಾವಣೆಗೆ ಬಳಕೆ: ಕಾಲೇಜಿಗೆ ಬಂದ ವಿದ್ಯಾರ್ಥಿಗಳು ವಾಪಸ್​
ಗಬ್ಬೆದ್ದು ನಾರುತ್ತಿರುವ ಕಾಲೇಜು ಕೊಠಡಿಗಳು

ಯಾದಗಿರಿ: ಕಾಲೇಜು ಕೋಣೆ ಸಿದ್ಧವಿರದ ಕಾರಣ ವಿದ್ಯಾರ್ಥಿನಿಯರು ಮನೆಗೆ ವಾಪಸ್ ಹೋದ ಘಟನೆ ಯಾದಗಿರಿ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

ಗ್ರಾ.ಪಂ ಚುನಾವಣೆ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್​ಗಾಗಿ ಬಳಕೆಯಾಗಿದ್ದ ಕಾಲೇಜಿನ ಕೋಣೆಗಳು ಇವತ್ತಿನಿಂದ ಓಪನ್ ಆಗಿದ್ರು ಸಹ ಈ ಕಾಲೇಜು ಇನ್ನು ಸಿದ್ದವಾಗಿಲ್ಲ. ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತಕ್ಕೆ ಕಾಲೇಜು ಕಟ್ಟಡ ನೀಡಲಾಗಿತ್ತು. ಆದರೆ ಚುನಾವಣೆ ಮುಗಿದು ಎರಡು ದಿನ ಕಳೆದ್ರು ತಾಲೂಕು ಆಡಳಿತ ಇನ್ನು ಸಹ ಕಾಲೇಜು ಕಟ್ಟಡವನ್ನ ಬಿಟ್ಟುಕೊಟ್ಟಿಲ್ಲ.

ಕಾಲೇಜಿನ ಕೋಣೆಗಳು ಚುನಾವಣೆಗೆ ಬಳಿಕಯಾದ ಹಿನ್ನೆಲೆಯಿಂದಾಗಿ ಗಬ್ಬೆದ್ದು ನಾರುತ್ತಿವೆ. ಎಲ್ಲಂದರಲ್ಲಿ ಕಸ ಬಿದ್ದಿದ್ದು ತಾಲೂಕು ಆಡಳಿತ ಕಸವನ್ನ ಕ್ಲೀನ್ ಮಾಡುವ ಗೋಜಿಗೆ ಇನ್ನೂ ಸಹ ಹೋಗಿಲ್ಲ. ಇಂದಿನಿಂದ ಕಾಲೇಜು ಆರಂಭವಾಗಿರುವುದರಿಂದ ಉಪನ್ಯಾಸಕರು ಕಾಲೇಜಿನಲ್ಲಿ ಬಂದು ಕುಳಿತ್ತಿದ್ದಾರೆ. ಆದರೆ ಕೊಠಡಿಗಳು ರೆಡಿ ಇಲ್ಲದ ಕಾರಣ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯರು ಕೊಠಡಿಯಲ್ಲಿ ಕೂರಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಉಪನ್ಯಾಸಕರು, ವಿದ್ಯಾರ್ಥಿಗಳಿಂದ ಒಪ್ಪಿಗೆ ಪತ್ರ ಪಡೆದು ಅವರನ್ನು ಮನೆಗೆ ಕಳುಹಿಸಿದ್ದಾರೆ.

‘ಬನ್ನಿ ಕೊರೊನಾ ಓಡಿಸೋಣ ವಿದ್ಯಾರ್ಥಿಗಳನ್ನು ಓದಿಸೋಣ’ 10 ತಿಂಗಳ ಬಳಿಕ ಇಂದಿನಿಂದ ಶಾಲಾ-ಕಾಲೇಜು ರೀ ಓಪನ್