ಮರೀನಾ ಬೀಚ್​ನಲ್ಲಿ ಜಯಲಲಿತಾ ಸ್ಮಾರಕ ಉದ್ಘಾಟನೆ; ನಾಳೆಯಿಂದ ಸಾರ್ವಜನಿಕ ಪ್ರವೇಶಕ್ಕೆ ವೇದ ನಿಲಯಂ ಮುಕ್ತ

ಜಯಲಲಿತಾರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಅವರ ಸೋದರಳಿಯ ಜೆ.ದೀಪಕ್​ ಹಾಗೂ ಜೆ.ದೀಪಾ ವಿರೋಧ ವ್ಯಕ್ತಪಡಿಸಿದ್ದರು. ಹಾಗೇ ಮದ್ರಾಸ್​ ಹೈಕೋರ್ಟ್​ಗೆ ಅರ್ಜಿಯನ್ನೂ ಸಲ್ಲಿಸಿದ್ದರು.

  • TV9 Web Team
  • Published On - 14:56 PM, 27 Jan 2021
ಮರೀನಾ ಬೀಚ್​ನಲ್ಲಿ ಜಯಲಲಿತಾ ಸ್ಮಾರಕ ಉದ್ಘಾಟನೆ; ನಾಳೆಯಿಂದ ಸಾರ್ವಜನಿಕ ಪ್ರವೇಶಕ್ಕೆ ವೇದ ನಿಲಯಂ ಮುಕ್ತ
ಜಯಲಲಿತಾ ಸ್ಮಾರಕ ಉದ್ಘಾಟನೆ

ಚೆನ್ನೈ: ಇಲ್ಲಿನ ಮರೀನಾ ಬೀಚ್​ನಲ್ಲಿ ನಿರ್ಮಿಸಲಾದ ಜಯಲಲಿತಾ ಸ್ಮಾರಕವವನ್ನು ಇಂದು ಮುಖ್ಯಮಂತ್ರಿ ಇ.ಕೆ.ಪಳಿನಿಸ್ವಾಮಿ ಉದ್ಘಾಟಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಓ. ಪನೀರಸೆಲ್ವಂ ಹಾಜರಿದ್ದರು. ನಂತರ ಗಣ್ಯರು ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ಮರೀನಾ ಬೀಚ್​​ನಲ್ಲಿ 50,000 ಚದರ ಅಡಿ ವಿಸ್ತೀಣದಲ್ಲಿ 79.75 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಇದು ಫೀನಿಕ್ಸ್​ ಆಕಾರದಲ್ಲಿದೆ. ಹಾಗೇ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ 35ವರ್ಷ ವಾಸವಾಗಿದ್ದ ನಿವಾಸ ವೇದ ನಿಲಯಂ ಸ್ಮಾರಕವಾಗಿ ಪರಿವರ್ತನೆಯಾಗಿದ್ದು, ನಾಳೆಯಿಂದ (ಜ. 28) ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

ಜಯಲಲಿತಾರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಅವರ ಸೋದರಳಿಯ ಜೆ.ದೀಪಕ್​ ಹಾಗೂ ಜೆ.ದೀಪಾ ವಿರೋಧ ವ್ಯಕ್ತಪಡಿಸಿದ್ದರು. ಹಾಗೇ ಮದ್ರಾಸ್​ ಹೈಕೋರ್ಟ್​ಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಇಂದು ಅದರ ಅಂತಿಮ ವಿಚಾರಣೆ ನಡೆಯಲಿದೆ. ಕಳೆದ ವರ್ಷ ರಾಜ್ಯ ಸರ್ಕಾರ 67.9 ಕೋಟಿ ರೂ. ಪರಿಹಾರ ನೀಡಿ, ವೇದ ನಿಲಯಂನ್ನು ತನ್ನ ಸ್ವಾಧೀನ ಪಡಿಸಿಕೊಂಡಿತ್ತು.

ಚೆನ್ನೈಗೆ ಮರಳಿದ ಬಳಿಕ ಎಲ್ಲಿಗೆ ಹೋಗ್ತಾರೆ ಶಶಿಕಲಾ? ಜಯಲಲಿತಾ ನಿವಾಸಕ್ಕಂತೂ ಕಾಲಿಡುವಂತಿಲ್ಲ!