ಚಲುವಳ್ಳಿಯ ಚನ್ನಕೇಶವನನ್ನೂ ಬಿಡಲಿಲ್ಲ ಖದೀಮರು: ದೇವರ ಬೆಳ್ಳಿ ಆಭರಣ ಲೂಟಿ

ಚಲುವಳ್ಳಿಯ ಚನ್ನಕೇಶವನನ್ನೂ ಬಿಡಲಿಲ್ಲ ಖದೀಮರು: ದೇವರ ಬೆಳ್ಳಿ ಆಭರಣ ಲೂಟಿ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ನೆಲಮಂಗಲದ ಚಲುವಳ್ಳಿಯ ಚನ್ನಕೇಶವ ದೇವಸ್ಥಾನದಲ್ಲಿ ಕಳ್ಳರು ದೇವರ ಆಭರಣ ಹೊತ್ತೊಯ್ದಿದ್ದರೆ ಇತ್ತ ಹಸಿರುವಳ್ಳಿಯಲ್ಲೂ ಎರಡು ದಿನಸಿ ಅಂಗಡಿಗಳಲ್ಲಿ ಕಳ್ಳತನವಾಗಿರುವುದು ವರದಿಯಾಗಿದೆ. ಬಸವರಾಜು ಹಾಗೂ ಲೋಕೇಶ್‌ ಎಂಬುವವರಿಗೆ ಸೇರಿದ್ದ ಅಂಗಡಿಗಳಲ್ಲಿ ಕಳ್ಳತನವಾಗಿದೆ.

ಇತ್ತ ಅಂಗಡಿಯಲ್ಲಿದ್ದ ನಗದನ್ನು ಖದೀಮರು ಕಳವು ಮಾಡಿದ್ದು ಅತ್ತ ದೇವಾಲಯದಲ್ಲಿ ಭಗವಂತನ ಬೆಳ್ಳಿ ಆಭರಣಗಳನ್ನೂ ಸಹ ದೋಚಿ ಪರಾರಿಯಾಗಿದ್ದಾರೆ. ಇನ್ನು ಸ್ಥಳಕ್ಕೆ ತ್ಯಾಮಗೊಂಡ್ಲು ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Click on your DTH Provider to Add TV9 Kannada