ಕೂಲರ್‌ನಿಂದ ತಂಪಾದ ನೀರು ಕುಡಿಯುತ್ತಿರುವ ಬೆಕ್ಕು! ವಿಡಿಯೋ ಸಿಕ್ಕಾಪಟ್ಟೆ ವೈರಲ್‌

  • TV9 Web Team
  • Published On - 17:05 PM, 29 Aug 2020
ಕೂಲರ್‌ನಿಂದ ತಂಪಾದ ನೀರು ಕುಡಿಯುತ್ತಿರುವ ಬೆಕ್ಕು! ವಿಡಿಯೋ ಸಿಕ್ಕಾಪಟ್ಟೆ ವೈರಲ್‌

ಬೆಕ್ಕೊಂದು ಕೊಲರ್‌ನಿಂದ ತಂಪಾದ ನೀರನ್ನು ಕುಡಿಯುತ್ತಿರೋ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಅಕ್ಕಿ ಎನ್ನುವ ಟ್ವಿಟ್ಟರ್‌ ಬಳಕೆದಾರರೊಬ್ಬರು ತಮ್ಮ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಈ ವಿಡಿಯೋ ಶೇರ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಾಯಾರಿಕೆಯಾಗಿರುವ ಬೆಕ್ಕೊಂದು ಕೂಲರ್‌ ಬಳಿ ತೆರಳಿ ತನ್ನ ಹಿಂಗಾಲಿನ ಮೇಲೆ ನಿಂತು ಮುಂಗಾಲುಗಳ ಮೂಲಕ ಟ್ಯಾಪ್‌ ಓಪನ್‌ ಮಾಡಿ ತಂಪಾದ ನೀರನ್ನು ಕುಡಿಯುತ್ತಿದೆ.

ಈ ವಿಡಿಯೋವನ್ನ ಸಾಮಾಜಿಕ ತಾಣದಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸಾವಿರಾರು ಜನರು ವೀಕ್ಷಣೆ ಮಾಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಇದಕ್ಕೆ ಸ್ಮಾರ್ಟಿ ಪ್ಯಾಂಟ್‌ ಎಂದು ನಿಕ್‌ನೇಮ್‌ ಕೂಡಾ ಕೊಟ್ಟಿದ್ದಾರೆ.

https://twitter.com/akkitwts/status/1299289238362443776?s=20